250 ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆ ನಾಶ
Team Udayavani, Aug 8, 2022, 5:11 PM IST
ಕೋಲಾರ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದಲೂ ಸುರಿದಿರುವ ಮಳೆಗೆ 250ಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶವಾಗಿದ್ದು, ರೈತರಿಗೆ ಕೋಟ್ಯಂತರ ರೂ.ನಷ್ಟ ಸಂಭವಿಸಿದೆ.
ಇತ್ತೀಚಿಗೆ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿದು ಕೆರೆ ತುಂಬುತ್ತಿದ್ದರಿಂದ ರೈತರು ಕೃಷಿ, ತೋಟಗಾರಿಕೆ ಬೆಳೆ ಉತ್ಪಾದನೆ ಚುರುಕು ಗೊಳಿಸಿದ್ದರು. ಆದರಲ್ಲೂ ಕಳೆದ ವರ್ಷ ಭರ್ಜರಿ ಮಳೆ ಸುರಿದಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳ ಕಂಡು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು. ಇದರಿಂದ ಉತ್ತೇಜಿತರಾಗಿದ್ದ ರೈತರು, ಕೊಂಚ ಉತ್ಸಾಹ ದಿಂದಲೇ ಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿದ್ದರು. ಆದರೆ, ಫಸಲು ಕೈಕೊಡುವ ಸಂದರ್ಭದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿ ರುವುದರಿಂದ ಉಂಟಾದ ಪ್ರವಾಹ ಪರಿಸ್ಥಿತಿ ಯಲ್ಲಿ ಹೊಲ, ಗದ್ದೆ, ತೋಟಗಳು ಜಲಾವೃತ ಗೊಂಡು, ಬೆಳೆ ನಷ್ಟ ಆಗಿದೆ.
ಕೃಷಿ ಬೆಳೆ ನಷ್ಟ: ಕೋಲಾರ ಜಿಲ್ಲೆಯಲ್ಲಿ ಶನಿವಾರದವರೆಗೂ 125 ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾ ಗಿದೆ. ಪ್ರತಿ ನಿತ್ಯವೂ ಮಳೆ ಸುರಿಯುತ್ತಿರು ವುದರಿಂದ ನಷ್ಟದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹಾಗೆಯೇ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುವುದರಲ್ಲಿ ಯಾವುದೇ ಸಂದೇಶವಿಲ್ಲ.
ತೋಟಗಾರಿಕೆ ಬೆಳೆ: ಕೋಲಾರ ಜಿಲ್ಲೆಯಲ್ಲಿ 87.80 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟ ಸಂಭವಿಸಿದೆ. ಕೋಲಾರ ತಾಲೂಕಿನಲ್ಲಿ 50.80 ಹೆಕ್ಟೇರ್, ಮಾಲೂರಿನಲ್ಲಿ 17 ಹೆಕ್ಟೇರ್, ಮುಳ ಬಾಗಿಲಿನಲ್ಲಿ 20 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಉಳಿದಂತೆ ಕೆಜಿಎಫ್ ಮತ್ತು ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕಿನಿಂದ ವರದಿ ಬರಬೇಕಿದೆ. ಕೋಲಾರ ಜಿಲ್ಲೆಯಲ್ಲಿ ಟೊಮೆಟೋ ಅಧಿಕವಾಗಿ ಬೆಳೆಯುತ್ತಿದೆ. ಮೊದಲೇ ಧಾರಣೆ ಕೇಜಿಗೆ ಐದಾರು ರೂ.ಗೆ ಕುಸಿದಿದ್ದು, ಗಾಯದ ಮೇಲೆ ಬರೆ ಎಳೆದಂತೆ ಇದೀಗ ಮಳೆ ನೀರು ಆವರಿಸಿಕೊಂಡು, ಐದಾರು ರೂ.ಗೂ ಕುತ್ತು ಬಂದಂತಾಗಿದೆ.
ಬಹುತೇಕ ಟೊಮೆಟೋ ತೋಟಗಳಲ್ಲಿ ಫಸಲನ್ನು ಕೀಳದೆ ಬಿಟ್ಟಿದ್ದು, ನೀರು ತುಂಬಿಕೊಂಡು ಕಾಲಿಡಲು ಸಾಧ್ಯವಿಲ್ಲ ದಂತಾಗಿದೆ.
ಕೋಲಾರ ಜಿಲ್ಲೆಯ ಮಳೆ ಪ್ರಮಾಣ : ಕೋಲಾರ ಜಿಲ್ಲೆಯಲ್ಲಿ ಕಳೆದ ಜ.1ರಿಂದ ಆ.6ರವರೆಗೂ ಸರಾಸರಿ 246 ಮಿ.ಮೀ. ಮಳೆ ಸುರಿಯಬೇಕಾಗಿತ್ತು. ಆದರೆ, 646 ಮಿ.ಮೀ. ಮಳೆ ಸುರಿದು ಬಹುತೇಕ ಕೆರೆ, ಕುಂಟೆ, ಕಲ್ಯಾಣಿ ಜಲ ಮೂಲಗಳು ತುಂಬಿಕೊಳ್ಳುವಂತಾಗಿದೆ. ಜೂನ್‌ನಲ್ಲಿ 66 ಮಿ.ಮೀ.ಗೆ 168 ಮಿ.ಮೀ., ಜುಲೈನಲ್ಲಿ 78.7 ಮಿ.ಮೀ.ಗೆ 109.9 ಮಿ.ಮೀ. ಮಳೆ ಸುರಿದಿದೆ. ಕಳೆದ ಏಳು ದಿನಗಳಲ್ಲಿ 19.2 ಮಿ.ಮೀ ಮಳೆಗೆ 144.9 ಮಿ.ಮೀ. ಬಿದ್ದಿದೆ. ಆಗಸ್ಟ್ ನಲ್ಲಿ 15.4 ಮಿ.ಮೀ. ಸರಾಸರಿ ಮೀರಿ 118.7 ಮಿ.ಮೀ. ಮಳೆ ಸುರಿದಿದೆ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.