ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ
Team Udayavani, May 25, 2022, 3:49 PM IST
ಕೋಲಾರ: ಜಿಲ್ಲಾದ್ಯಂತ ಶಿಥಿಲಗೊಂಡಿರುವಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಕಾಲಕ್ಕೆಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಮಾಡಿ ಖಾಲಿಇರುವ ಶಿಕ್ಷಕರ ನೇಮಕ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕು ಎಂದು ರೈತಸಂಘದಿಂದಡಿಡಿಪಿಐ ಕಚೇರಿ ಆವರಣದಲ್ಲಿ ಗುಡಿಸಲು ಸಮೇತ ಪ್ರತಿಭಟನೆ ನಡೆಸಿ, ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತಸಂಘದ ಜಿಲ್ಲಾ ಮಹಿಳಾಧ್ಯಕ್ಷೆ ಎ.ನಳಿನಿಗೌಡಮಾತನಾಡಿ, ದೇಶದ ಭವಿಷ್ಯ ರೂಪಿಸುವ ಶಿಕ್ಷಣವ್ಯವಸ್ಥೆಯನ್ನು ಸರಿಪಡಿಸದೇ ಹೋದರೆ ಮುಂದಿನದಿನಗಳಲ್ಲಿ ಶಿಕ್ಷಣಕ್ಕಾಗಿ ಯುವಕರು ರಾಜಕಾರಣಿಗಳವಿರುದ್ಧ ಕಂಡಕಂಡಲ್ಲಿ ಕಲ್ಲಿನಿಂದ ಹೊಡೆಯುವ ಕಾಲ ದೂರವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿಪರಿಗಣಿಸದೇ ಇದ್ದರೆ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿ ಜವಾನನಿಂದ ದಿವಾನನವರೆಗೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದರು.
ಸಾವಿರಾರು ಬಡ ರೈತ ಕೂಲಿ ಕಾರ್ಮಿಕರಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನೇ ಅವಲಂಭಿಸಿದ್ದಾರೆ. ನಮ್ಮನ್ನಾಳುವಸರ್ಕಾರಗಳು ದೇಶದ ಭವಿಷ್ಯ ರೂಪಿಸುವಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡುವಬದಲು ತಮ್ಮ ವೇತನವನ್ನು ಹೆಚ್ಚಿಸಿಕೊಂಡು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಾದವಿಧಾನಸೌಧ ಜಗಳಸೌಧವಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜು ನಾಥ್ ಮಾತನಾಡಿ, ಅನವಶ್ಯಕವಾಗಿ ಕೆಲಸಕ್ಕೆ ಬಾರದಕಾಮಗಾರಿಗಳಿಗೆ ಸಾವಿರಾರು ಕೋಟಿ ಬಿಡುಗಡೆಮಾಡುವ ಸರ್ಕಾರ ಶಿಥಿಲಗೊಂಡಿರುವ ಸರ್ಕಾರಿಶಾಲೆಗಳನ್ನು ಹಿಂದೇಟು ಹಾಕುತ್ತಿರುವುದು ಏಕೆ,ಭೀಕರವಾದ ಮಳೆ ಸುರಿಯುವಾಗ ಸರ್ಕಾರಿ ಶಾಲೆಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದೆ.
ಸಕಾಲಕ್ಕೆ ಪೂರೈಕೆಯಾಗದ ಸಮವಸ್ತ್ರ, ಪಠ್ಯ ಪುಸ್ತಕಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನೂರೊಂದುಭಾಗ್ಯಗಳನ್ನು ನೀಡುವ ಮುಖಾಂತರ ಬಡವರಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗುತ್ತಿದೆ.ಪ್ರತಿವರ್ಷ ಶಾಲೆ ಆರಂಭಕ್ಕೆ ಮುನ್ನ ಮಕ್ಕಳಿಗೆಬೇಕಾಗುವ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆಮಾಡಬೇಕಾದ ಸರ್ಕಾರ ಜಾಣ ನಿದ್ರೆಯಲ್ಲಿದ್ದು,ಶಾಲೆ ಪ್ರಾರಂಭವಾದ ನಂತರ ಸರ್ಕಾರದಿಂದಅನುಮತಿಯಿಲ್ಲ. ಟೆಂಡರ್ ಕರೆದಿಲ್ಲ ಎಂದುಬೇಜವಾಬ್ದಾರಿಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಕೃಷ್ಣಮೂರ್ತಿ, ಸರ್ಕಾರಿ ಶಾಲೆಗಳ ಅವ್ಯವಸ್ಥೆ ಹಾಗೂ ಪಠ್ಯ ಪುಸ್ತಕ, ಸಮವಸ್ತ್ರದ ಬಗ್ಗೆ ಶಿಕ್ಷಣ ಸಚಿವರಿಗೆಪತ್ರ ಬರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮರಗಲ್ ಮುನಿಯಪ್ಪ, ತೆರ್ನಹಳ್ಳಿ ಆಂಜಿನಪ್ಪ, ಯಲುವಳ್ಳಿ ಪ್ರಭಾಕರ್, ಫಾರೂಖ್ ಪಾಷ, ವಿಜಯ್ ಪಾಲ್, ಮುದುವಾಡಿ ಚಂದ್ರಪ್ಪ, ರಾಮಸಾಗರ ವೇಣು, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.