ಜಿಲ್ಲಾದ್ಯಂತ ಡಿಕೆಶಿ ಪದಗ್ರಹಣ ವೀಕ್ಷಣೆ
Team Udayavani, Jul 3, 2020, 6:22 AM IST
ಕೋಲಾರ: ಇಲ್ಲಿನ ಬೈರೇಗೌಡ ನಗರದ ಬೃಹತ್ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆಯಿತು. ಡಿಜಿಟಲ್ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಸ್ವೀಕಾರ, ನಿವೃತ್ತ ಯೋಧರನ್ನು ಸನ್ಮಾನಿಸಿ, ಬಡವರಿಗೆ ಕಂಬಳಿ ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಮುಬಾರಕ್ ಮಾತನಾಡಿದರು.
ದೇಶದ 544 ಸಂಸದರಲ್ಲಿ ನೀವು ಒಬ್ಬರಾಗಿದ್ದೀರಿ, ಕಾಪೊìರೇಟರ್ ರೀತಿ ರಾಜಕೀಯ ಮಾಡೋದನ್ನು ಬಿಡಿ, ಎಲ್ಲಾ ಜಾತಿಗಳನ್ನು ಸಮನಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಸಂಸದ ಮುನಿಸ್ವಾಮಿಗೆ ಸಲಹೆ ನೀಡಿದರು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ, ನೀವು ಮಾಲೂರು ಶಾಸಕ ನಂಜೇಗೌಡ, ಕೆಜಿಎಫ್ ಶಾಸಕಿ ರೂಪಕಲಾ ಹಾಗೂ ಜಿಲ್ಲೆಯ ಸಹಕಾರಿ ಸಂಸ್ಥೆಗಳ ವಿರುದಟಛಿ ಟೀಕೆ ಮಾಡುವುದಕ್ಕೆ ಸೀಮಿತವಾಗದೇ ಇಡೀ ಕ್ಷೇತ್ರದ ಅಭಿವೃದ್ಧಿಗೆ ಓರ್ವ ಜವಾಬ್ದಾರಿಯುತ ಸಂಸದರಾಗಿ ಕೆಲಸ ಮಾಡಿ ಎಂದು ಆಗ್ರಹಿಸಿದರು.
ಕೋಲಾರ ಕ್ಷೇತ್ರ ಕಾಂಗ್ರೆಸ್ ಮಡಿಲಿಗೆ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶಪ್ಪ ಮಾತನಾಡಿ, ಇಂತಹ ಬೃಹತ್ ಕಾರ್ಯ ಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿರುವುದು, ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸಿ ಸ್ಯಾನಿಟೈಸರ್ ಹಾಕಿ ಮಾರ್ಗಸೂಚಿ ಪಾಲಿಸುವಲ್ಲಿ ಮಾಡಿರುವ ಕಾರ್ಯವನ್ನು ಶ್ಲಾಘಿಸಿದರು. ನಿವೃತ್ತ, ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲೆಪ್ಟಿನೆಂಟ್ ಕರ್ನಲ್ ಮುನಿಸ್ವಾಮಿ, ವೆಂಕಟೇಶ ನಾಯಕ್, ಜಗನ್ನಾಥ್, ಶಂಕರ್, ಹಿನಾ ಕುಮಾರ್, ಡೇವಿಡ್, ಜನಾರ್ದನ್, ನಾರಾಯಣಪ್ಪ, ಶ್ರೀರಾ ಮಯ್ಯ ಸೇರಿದಂತೆ ಜಿಲ್ಲೆಯ ನಿವೃತ್ತ ಯೋಧರನ್ನು ಸನ್ಮಾನಿ ಸಲಾ ಯಿತು. ಬಡವರಿಗೆ ಕಂಬಳಿ ವಿತರ ಣೆ, ಡಿಕೆಶಿಗೆ ಹಾಗೂ ರಾಜ್ಯಕ್ಕೆ ಒಳಿತು ಬಯಸಿ ಗಣಪತಿ ಹೋಮ, ಸರ್ವ ಧರ್ಮ ಪ್ರಾರ್ಥನೆ ನಡೆಸಲಾಯಿತು. ಕಾಡುಗುರು ನಾಗಭೂಷಣ್, ಜೆ.ಕೆ.ಜಯರಾಂ, ನಗರಸಭಾ ಮಾಜಿ ಸದಸ್ಯ ರಮೇಶ್, ಬಾಬಾ ಜಾನ್, ನವಾಜ್, ಸದಸ್ಯರಾದ ನಾರಾ ಯ ಣಮ್ಮ, ಅಸ್ಲಾಂ, ರಮೇಶ್, ಜನಾ ರ್ದನ್, ಕಾಂಗ್ರೆಸ್ ಮುಖಂಡರಾದ ರಾಮ ಲಿಂ ಗಾರೆಡ್ಡಿ, ನಾರಾಯಣಸ್ವಾಮಿ, ಪವನ್ ನಾರಾಯಣಸ್ವಾಮಿ, ಗಂಗಮ್ಮನ ಪಾಳ್ಯ ರಾಮಯ್ಯ, ಗೋವಿಂದರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.