ಗಡಿ ಕನ್ನಡ ಭವನವಾದ ಡಿವಿಜಿ ರಂಗಮಂದಿರ
Team Udayavani, Apr 17, 2021, 2:13 PM IST
ಮುಳಬಾಗಿಲು: ಸಾರಸ್ವತ ಲೋಕದ ದಿಗ್ಗಜರಾದಡಿ.ವಿ.ಗುಂಡಪ್ಪ ಅವರ ನೆನಪಿಗಾಗಿ ಹಲವು ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ್ದ ಡಿವಿಜಿ ರಂಗ ಮಂದಿರವನ್ನು 6 ವರ್ಷಗಳ ಹಿಂದೆ ನವೀಕರಿಸಿ, ಅನಾವರಣ ಮಾಡಿದ ಸಂದರ್ಭದಲ್ಲಿ ಡಿವಿಜಿ ಹೆಸರನ್ನು ತೆಗೆದು, ಗಡಿ ಕನ್ನಡ ಭವನ ಎಂದೇ ಬರೆಸಲಾಗಿರುವ ನಾಮಫಲಕವನ್ನು 3-4ವರ್ಷಗಳೇ ಕಳೆದರೂ ಇದುವರಿಗೂ ಬದಲಾಯಿಸದೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಧುನಿಕ ಸಮಾಜದ ಅಭಿವೃದ್ಧಿ ಹಾಗೂ ನಾಡಿನ ಶ್ರೇಯಸ್ಸಿಗಾಗಿ ಹಲವಾರು ಕ್ಷೇತ್ರಗಳಲ್ಲಿ ಎಷ್ಟೋ ಜನಬಹುಮುಖ ಪ್ರತಿಭಾವಂತರು ದುಡಿದಿದ್ದಾರೆ.ಅಂತಹ ಕೀರ್ತಿ ಶಿಖರಗಳಲ್ಲಿ ಸಾರಸ್ವತ ಲೋಕದ ದಿಗ್ಗಜ ಡಿ.ವಿ.ಗುಂಡಪ್ಪ ಒಬ್ಬರು. ವೆಂಕಟರಮಣಯ್ಯ, ತಾಯಿ ಅಲುವೇಲಮ್ಮ ಅವರ ಪುತ್ರರೇ ಡಿವಿಜಿ, ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬಹುಮುಖ ಪ್ರತಿಭಾವಂತರಾಗಿ ಕನ್ನಡ ಪತ್ರಿಕೋದ್ಯಮ ಪಿತಾಮಹರಾಗಿದ್ದರು.ಅಂತಹ ಕನ್ನಡ ಸಾರಸ್ವತ ಲೋಕದ ದಾರ್ಶನಿಕ ಮಂಕುತಿಮ್ಮನಿಗೆ ಸಂದಿರುವ ಪ್ರಶಸ್ತಿಗಳು ನೂರಾರು, ಹಾಗೆಯೇ ಹಲವು ಡಾಕ್ಟರೇಟ್‌ಗಳೊಂದಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣಪ್ರಶಸ್ತಿಗಳು ಒಲಿದಿವೆ.
ಡಿವಿಜಿ ಮನೆ ಶಾಲೆಯಾಗಿ ಪರಿವರ್ತನೆ: ಇಂತಹ ಮಹಾನ್ ಚೇತನದ ನೆನಪಿಗಾಗಿ ಜಿಲ್ಲಾಡಳಿತ, ಡಿವಿಜಿ ಪ್ರತಿಷ್ಠಾನ, ಸಂಘ-ಸಂಸ್ಥೆಗಳು ಒಟ್ಟಾಗಿ ಸೇರಿ 1987 ಮಾರ್ಚ್ 17ರಂದು ಮುಳಬಾಗಿಲು ನಗರದಲ್ಲಿ ಶತಮಾನೋತ್ಸವ ಆಚರಿಸಿ,ಜ್ಞಾಪಕಾರ್ಥವಾಗಿ ಅವರ ವಾಸದ ಮನೆಯನ್ನುಶಾಲೆಯಾಗಿ ಪರಿವರ್ತಿಸಿದೆಯಲ್ಲದೆ, ನಗರ ಮತ್ತುಕೋಲಾರದಲ್ಲಿ ನಿರ್ಮಿಸಿರುವ ಜಿಲ್ಲಾಗ್ರಂಥಾಲಯಗಳಿಗೆ ಡಿವಿಜಿ ಹೆಸರನ್ನುನಾಮಕರಣಗೊಳಿಸಿದ್ದಾರೆ.
ನಂತರದ ವರ್ಷಗಳಲ್ಲಿ ರಂಗ ಮಂದಿರ ಕಟ್ಟಡವುಶಿಥಿಲಗೊಂಡಿದ್ದರಿಂದ ತಾಲೂಕು ಆಡಳಿತ, ರಂಗಮಂದಿರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿ ಕಳೆದ6 ವರ್ಷಗಳ ಹಿಂದೆ ನಗರಸಭೆ ಮತ್ತು ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ಮುಖಾಂತರ ಲಕ್ಷಾಂತರರೂ.ಗಳ ವೆಚ್ಚದಲ್ಲಿ ನವೀಕರಣ ಮಾಡಿದರು. ಆಸಂದರ್ಭದಲ್ಲಿ ಡಿವಿಜಿ ರಂಗ ಮಂದಿರ ಬದಲಾಗಿ,ಗಡಿ ಕನ್ನಡ ಭವನ ಎಂದು ನಾಮಫಲಕ ಬರೆಸಿಶಾಸಕ ಜಿ.ಮಂಜುನಾಥ್ ಅವರ ಕೈಯಿಂದಉದ್ಘಾಟನೆ ಮಾಡಿಸಿದರು.
ಯಾವುದೇ ಪ್ರಯೋಜನವಿಲ್ಲ: ಕಳೆದ 5 ವರ್ಷಹಿಂದೆ ನಡೆದ ಉದ್ಘಾಟನೆ ಸಂದರ್ಭದಲ್ಲಿ ಸಾಕಷ್ಟುಜನರು ರೊಚ್ಚಿಗೆದ್ದು, ಗಡಿ ಕನ್ನಡ ಭವನಕ್ಕೆಮೊದಲಿನಂತೆ ಡಿವಿಜಿ ರಂಗಮಂದಿರ ಎಂದುನಾಮಫಲಕ ಹಾಕಿಸಲು ಪ್ರತಿಭಟನೆಗಳುಮಾಡಿದಾಗ, ಕಂಗೆಟ್ಟ ತಾಲೂಕು ಆಡಳಿತಕಾರ್ಯಕ್ರಮಕ್ಕೆ ಉಂಟಾಗುತ್ತಿದ್ದ ತೊಂದರೆಯಿಂದಪಾರಾಗಲು ಶೀಘ್ರವಾಗಿ ನಾಮಫಲಕಹಾಕಿಸಲಾಗುವುದು ಎಂದು ಪ್ರತಿಭಟನಾಕಾರರಮನವೊಲಿಸಲು ನೆಪ ಮಾತ್ರಕ್ಕೆ ಡಿವಿಜಿ ಸಭಾಂಗಣಎಂದು ಬಾಗಿಲು ಮೇಲೆ ಬರೆಸಿದ್ದರು.
ಕನ್ನಡ ಮತ್ತುಸಂಸ್ಕೃತಿ ಇಲಾಖೆ ಅಧಿಕಾರಿ ರವಿಕುಮಾರ್ ಸಹಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಡಿವಿಜಿ ರಂಗಮಂದಿರವೆಂದು ಬದಲಾಯಿಸಲಾಗುವುದುಎಂದು ತಿಳಿಸಿ, ಹಲವು ವರ್ಷಗಳೇ ಕಳೆದರೂಇದುವರೆಗೂ ಯಾವುದೇಪ್ರಯೋಜನೆಯಾಗಿರುವುದಿಲ್ಲ.
ಎಂ.ನಾಗರಾಜಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.