ಅಧಿಕಾರಿಗಳ ಬೆದರಿಕೆಗೂ ಬಗ್ಗದೇ ಚುನಾವಣೆ ಬಹಿಷ್ಕಾರ
ಮಾಲೂರು ಪಟ್ಟಣಕ್ಕೆನೇರ ರಸ್ತೆಗಾಗಿ ಕಂಬೀಪುರ ಗ್ರಾಮಸ್ಥರ ಆಗ್ರಹ , ಅಧಿಕಾರಿಗಳು, ಜನಪ್ರತಿನಿಧಿಗಳ ಭರವಸೆಗೆ ಈ ಬಾರಿ ಮನ್ನಣೆ ಇಲ್ಲ
Team Udayavani, Dec 24, 2020, 2:40 PM IST
ಮಾಲೂರು: 15-20 ವರ್ಷಗಳಿಂದಲೂ ಹೋರಾಟ ಮತ್ತು ಚುನಾವಣೆ ಬಹಿಷ್ಕಾರನಿರ್ಧಾರ ಪ್ರಕಟಿಸುತ್ತಿದ್ದ ಕಂಬೀಪುರ (ಬೆಳ್ಳಾಪುರ) ಗ್ರಾಮ ಸ್ಥರು, ಈ ಬಾರಿ ಅಧಿಕಾರಿಗಳ ಮನವೊಲಿಕೆಗೂ ಜಗ್ಗದೇ ಮೊದಲ ಹಂತದಲ್ಲಿ ನಡೆದ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಈ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪೆಟ್ಟು ನೀಡಿದ್ದಾರೆ.
ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಂಬೀಪುರ ಗ್ರಾಮದಲ್ಲಿ ಸರಿ ಸುಮಾರು 150 ಮನೆಗಳಿದ್ದು ಶೇ.95ರಷ್ಟು ಮಂದಿ ಪರಿಶಿಷ್ಟ ಜಾತಿಯವರೇ ವಾಸವಾಗಿದ್ದಾರೆ. 395 ಮತದಾರರ ಪೈಕಿ ದಲಿತ ವರ್ಗವೇ ಸಿಂಹಪಾಲು.
ಗ್ರಾಮಕ್ಕೆ ಹಲವುಕಡೆಗಳಿಂದ ರಸ್ತೆ ಮಾರ್ಗವಿದ್ದು ಮಡಿವಾಳ ಮಾರ್ಗವಾಗಿ ತೊರ್ನಹಳ್ಳಿಯ ರಸ್ತೆ ಯಲ್ಲಿ ಹಾದು ಕಂಬೀಪುರ ಗ್ರಾಮವನ್ನು ಸೇರಲು 12 ಕಿ.ಮೀ. ಆಗುತ್ತದೆ. ಅಬ್ಬೇನಹಳ್ಳಿ ಮಾರ್ಗದ ರಸ್ತೆ ಯಲ್ಲಿ ತಂಬಿಹಳ್ಳಿ ಮೂಲಕ ಗ್ರಾಮಕ್ಕೆ ಬರುವುದಾದರೆ 6ರಿಂದ 8 ಕಿ.ಮೀ. ಆಗಲಿದೆ. ಇನ್ನು ಗ್ರಾಮದಿಂದ ಮಾಲೂರು ಪಟ್ಟಣಕ್ಕೆ ನೇರ ಸಂಪರ್ಕ ಕಲ್ಪಿಸುವ ಅಬ್ಬೇನಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಿದ್ದಲ್ಲಿ ಕೇವಲ 3.5 ಕಿ.ಮೀ. ಆಗುತ್ತದೆ. ಈಕುರಿತು ಗ್ರಾಮಸ್ಥರು,ಕಳೆದ15-20 ವರ್ಷಗಳಿಂದನೇರ ರಸ್ತೆ ನಿರ್ಮಾಣಕ್ಕಾಗಿ ಹೋರಾಟಗಳ ಜತೆಗೆ ವಿಧಾನ ಸಭೆ, ಲೋಕಸಭೆ, ಜಿಪಂ, ತಾಪಂ, ಗ್ರಾಪಂ ಚುನಾ ವಣೆ ಬಹಿಷ Rರಿಸುವ ತೀರ್ಮಾನ ಕೈಗೊಳ್ಳುತ್ತಿದ್ದರು.ಈವೇಳೆ ಅಧಿಕಾರಿಗಳು ಮನವೊಲಿಸಿ ಚುನಾವಣೆ ನಡೆಸುತ್ತಿದ್ದರು. ಗ್ರಾಪಂ ಚುನಾವಣೆ ಬಹಿಷ್ಕಾರದ ಕುರಿತು ಕಳೆದ ವಾರದಲ್ಲಿ ಶಾಸಕ ನಂಜೇಗೌಡರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿ ಖಾಸಗಿ ಭೂ ಮಾಲೀಕರೊಂದಿಗೆ ಚರ್ಚಿಸಿದ್ದರು.
ಮತದಾನಬಹಿಷ್ಕರಿಸುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಎಂ.ಮಂಜುನಾಥ್, ತಾಪಂ ಇಒ ವಿ.ಕೃಷ್ಣಪ್ಪ ಗ್ರಾಮಸ್ಥರ ಮನ ವೊಲಿಸಲು ಮುಂದಾದರು. ಎಲ್ಲಾ ಪ್ರಯತ್ನ ವಿಫಲವಾಗುತ್ತಿದ್ದಂತೆ ತಹಶೀಲ್ದಾರ್ ಮತದಾನಕ್ಕೆ ಅಡ್ಡಿ ಮಾಡುವವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು. ಹೆದರದ ಗ್ರಾಮಸ್ಥರು, ಬಂಧಿಸುವುದಾದರೆ ಎಲ್ಲರೂ ಬಂಧಿಸುವಂತೆ ಪಟ್ಟು ಹಿಡಿದರು. ಮಧ್ಯಾಹ್ನ 1ರ ಸುಮಾರಿಗೆ ಗ್ರಾಮಕ್ಕೆ ಬಂದ ಉಪ ವಿಭಾಗಾಧಿಕಾರಿ ಸೋಮಶೇಖರ್, ಜಿಪಂಸಿ ಇಒ ನಾಗರಾಜು ಅವ ರಮನವೊಲಿಕೆಯೂ ಫಲ ನೀಡಲಿಲ್ಲ. ಕಂಬೀಪುರ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವಿಲ್ಲ. ಸಾರಿಗೆ ಸಂಪರ್ಕವಿಲ್ಲ. ಬೈಕ್ ಮೂಲಕ ಮಾಲೂರು ಪಟ್ಟಣಕ್ಕೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಿದೆ. ಗರ್ಭಿಣಿಯರು, ವೃದ್ಧರು, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಆಗಿದೆ. ಈ ಹಿಂದೆ ಕೆಲವು ಪುಂಡರು ಕಾಲು ದಾರಿಯ ನೀಲಗಿರಿ ತೋಪುಗಳಲ್ಲಿ ಬರುವ ಹೆಣ್ಣು ಮಕ್ಕಳನ್ನು ಚುಡಾಯಿಸಿದ್ದರು.ಈಹಿಂದೆ ಮಹಿಳೆಯರು ಕಾಲೇಜು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು.
ಬದಲಾದ ಮೀಸಲಾತಿ :
ಪ್ರಸ್ತುತ ಗ್ರಾಪಂ ಚುನಾವಣೆಯಲ್ಲಿ ಸರ್ಕಾರ ಗ್ರಾಪಂ ಸದಸ್ಯ ಸ್ಥಾನದ ಮೀಸಲಾತಿಯನ್ನುಹಿಂದುಳಿದ ವರ್ಗ(ಅ) ಮಹಿಳೆಗೆ ಅವಕಾಶಕಲ್ಪಿಸಿತ್ತು. ಗ್ರಾಮದಲ್ಲಿ ಶೇ.95 ಪರಿಶಿಷ್ಟ ಜಾತಿಯವರೇ ವಾಸವಾಗಿದ್ದು ಬಿಸಿಎಂ(ಎ)ವರ್ಗದ ಎರಡು ಮನೆಗಳ ಸರಿಸುಮಾರು20ಮತದಾರರು ಮಾತ್ರ ಇದ್ದಾರೆ. ಹೀಗಾಗಿನೆರೆಯ ತಂಬಿಹಳ್ಳಿ ಮತ್ತು ಅಬ್ಬೇನಹಳ್ಳಿಯಿಂದತಲಾ ಓರ್ವ ಮಹಿಳಾ ಅಭ್ಯರ್ಥಿಗಳನ್ನುಗ್ರಾಮದಲ್ಲಿ ಕಣಕ್ಕೆ ಇಳಿಸಿರುವುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಚುನಾವಣೆ ಬಹಿಷ್ಕಾರಕ್ಕೆ ಹೆಚ್ಚಿನ ಪುಷ್ಟಿ ಸಿಕ್ಕಿದೆ.
ಕಂಬೀಪುರದ ಜನರು ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದು ರಸ್ತೆ ನಿರ್ಮಾಣಕ್ಕೆಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೇ, ಚುನಾವಣಾನಿಯಮಗಳನ್ನು ಆಯೋಗದ ನಿರ್ದೇಶನದಂತೆ ಕೈಗೊಳ್ಳಲಾಗುವುದು. -ಎಂ.ಮಂಜುನಾಥ್, ತಹಶೀಲ್ದಾರ್
-ಎಂ.ರವಿಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.