ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಸಿ
Team Udayavani, Apr 12, 2019, 2:46 PM IST
ಕೋಲಾರ: ಚುನಾವಣಾ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆಯಲು ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಸಿಬ್ಬಂದಿ ಕ್ರಮವಹಿಸಿ ಎಂದು ಸಹಾಯಕ ಚುನಾವಣಾಧಿಕಾರಿ ವಿಠಲ್ ತಿಳಿಸಿದರು.
ನಗರದ ಜೂನಿಯರ್ ಕಾಲೇಜಿನಲ್ಲಿ ಗುರುವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ನೇಮಕಗೊಂಡಿರುವ ಸಿಬ್ಬಂದಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏ.18ರಂದು ಚುನಾವಣೆ ನಿಗದಿಯಾಗಿದೆ. ಈ ಕಾರ್ಯ ಚೆನ್ನಾಗಿ ನಡೆಯುವಲ್ಲಿ ಅಧಿಕಾರಿಗಳ ಪಾತ್ರ ಅತಿ ಮುಖ್ಯ, ನಿಮಗೆ ನೀಡುತ್ತಿರುವ ತರಬೇತಿ ಪ್ರಯೋಜನ ಪಡೆದುಕೊಳ್ಳಿ, ಸಮಸ್ಯೆಗಳು ಎದುರಾಗದಂತೆ ಕಾರ್ಯನಿರ್ವಹಿಸಿ ಎಂದರು.
ಅಣುಕು ಮತದಾನ: ಈಗಾಗಲೇ ರೂಪಿಸಲಾಗಿರುವ ಯೋಜನೆಯಂತೆಯೇ ಪ್ರತಿಯೊಂದು ಕೆಲಸ ಸಮರ್ಪಕವಾಗಿ ಮಾಡಿಕೊಳ್ಳಬೇಕು. ಮತದಾನಕ್ಕೆ ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾಲಾವಕಾಶ ನೀಡಲಾಗಿದ್ದು, ತಾವು ಬೆಳಗ್ಗೆ ಮತದಾನ ಆರಂಭಕ್ಕೂ ಮುನ್ನ ಅಣುಕು ಮತದಾನವನ್ನು ಅಭ್ಯರ್ಥಿಗಳ ಪರ ಏಜೆಂಟರ ಸಮ್ಮುಖದಲ್ಲಿ ಕಡ್ಡಾಯವಾಗಿ ನಡೆಸಬೇಕೆಂದರು. ಪ್ರತಿ ಅಭ್ಯರ್ಥಿಗೂ ಮತ ಹಾಕಿ, ಖಾತ್ರಿ ಚೀಟಿಯನ್ನು ಅವರಿಗೆ ತೋರಿಸಿ, ಎಲ್ಲ ಪ್ರಕ್ರಿಯೆ ಮುಗಿಸಿ, ಅದನ್ನು ಅಳಿಸಿದ ಬಳಿಕ ನೈಜ ಮತದಾನಕ್ಕೆ ವ್ಯವಸ್ಥೆ.ಕಲ್ಪಿಸಬೇಕು. ಚುನಾವಣಾ ಸಿಬ್ಬಂದಿಗೆ ಈ ಬಾರಿ ಪೋಸ್ಟಲ್ ಬ್ಯಾಲೆಟ್ ಬದಲು ನೀವು ಕಾರ್ಯನಿರ್ವ ಹಿಸುವ ಸ್ಥಳದಲ್ಲಿಯೇ ಮತದಾನಕ್ಕೆ ಅವಕಾಶ ನೀಡಲಾಗುವುದು. ಅದಕ್ಕಾಗಿ ಎಪಿಕ್ ಸಂಖ್ಯೆ,
ಬ್ಯಾಂಕ್ ಖಾತೆ ನೀಡಬೇಕು ಎಂದು ತಿಳಿಸಿದರು.
4 ಸಾವಿರ ಮಂದಿಗೆ ಚುನಾವಣಾ ತರಬೇತಿ: ಈಗಾಗಲೇ ಪ್ರತಿ ಮತಗಟ್ಟೆಗೆ ತಲಾ ಪ್ರಿಸೈಂಡಿಂಗ್, ಒಬ್ಬ ಸಹಾಯಕ ಪ್ರಿಸೈಂಡಿಂಗ್ ಅ ಧಿಕಾರಿ ಹಾಗೂ ಇಬ್ಬರು ಪೋಲಿಂಗ್ ಅ ಧಿಕಾರಿಗಳನ್ನು ನೇಮಕಾತಿ ಮಾಡಿ ಆದೇಶ ಪತ್ರ ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ತಾಲೂಕಿನಲ್ಲಿ 583 ಪಿಆರ್‌ಒ ಮತ್ತು 780 ಎಪಿಆರ್‌ಒಗಳಿದ್ದು ಅವರಿಗೆ ಈಗಾಗಲೇ ಒಂದು ಸುತ್ತಿನ ತರಬೇತಿ ಮುಗಿದಿದೆ. ಇದು ಎರಡನೇ ಸುತ್ತಿನ ತರಬೇತಿಯಾಗಿದ್ದು, ಇಲ್ಲಿ ಪೋಲಿಂಗ್ ಅಧಿಕಾರಿಗಳು ಅರಿವು ಪಡೆದುಕೊಳ್ಳಿ ಎಂದರು.
ಅದೇ ರೀತಿ ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್, ಶ್ರೀನಿವಾಸಪುರದಲ್ಲಿಯೂ ಇದೇ ನಡೆ ನಡೆಸಲಾಗುತ್ತಿದೆ. ಮೊದಲನೇ ಹಂತದಲ್ಲಿ ಮಾಹಿತಿ ನೀಡಲಾಗುವುದು, ಎರಡನೇ ಹಂತದಲ್ಲಿ ಮತಯಂತ್ರ ಜೋಡಣೆ, ಬಳಕೆ ಬಗ್ಗೆ ತಿಳಿಸಿಕೊಡಲಾಗುತ್ತಿರುವುದಾಗಿ ಹೇಳಿದರು.
ಚುನಾವಣೆ ಸರಾಗವಾಗಿ ನಡೆಸಲು ತರಬೇತಿ ಪ್ರಮುಖ ಅಂಗವಾಗಿದೆ. ಮತದಾನದ ದಿನದಂದು ನಿಭಾಯಿಸಬೇಕಾದ ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿಸಿ ಕೊಡಲಾಗುತ್ತಿದೆ. ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪುರುಷ ಸಿಬ್ಬಂದಿಯನ್ನು ಅವರು ಕಾರ್ಯ ನಿರ್ವಹಿಸುವ ತಾಲೂಕು ಹೊರತುಪಡಿಸಿ ಬೇರೆ ಕಡೆ ಹಾಕಲಾಗುತ್ತದೆ. ಮಹಿಳಾ ಸಿಬ್ಬಂದಿಯನ್ನು ಆಯಾ ತಾಲೂಕಿನಲ್ಲೇ ನಿಯೋಜಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರವಹಿಸಲು ಸೂಚಿಸಿದರು. ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾಗಿ ಮಾಸ್ಟರ್ ಟ್ರೆನರ್ ಹಾಗೂ ಸೆಕ್ಟರ್ ಅಧಿ ಕಾರಿ ಸಿ.ಎನ್.ಪ್ರದೀಪ್‌ಕುಮಾರ್, ರುದ್ರಪ್ಪ,
ಸುರೇಶ್, ರಾಮಚಂದ್ರಪ್ಪ, ಅಪ್ಪಯ್ಯಚಾರಿ, ಸೀನಪ್ಪ, ನಾಗರಾಜ್ ಮತ್ತಿತರರು ತರಬೇತಿ ನೀಡಿದರು.
ನೀವು ಈ ಹಿಂದೆ ಹಲವಾರು ಚುನಾವಣೆಗಳಲ್ಲಿ ಭಾಗವಹಿಸಿರಬಹುದು, ಎಲ್ಲಾ ವಿಚಾರಗಳು ತಿಳಿದಿರಬಹುದು. ಆದರೆ ಚುನಾವಣೆ ಹೊಸದು ಎನ್ನುವುದನ್ನು ಮರೆಯುವಂತಿಲ್ಲ. ಪ್ರತಿಯೊಬ್ಬರೂ ತರಬೇತುದಾರರಿಂದ ಎಲ್ಲಾ ಮಾಹಿತಿ ಪಡೆದು ತಮ್ಮ ಸಮಸ್ಯೆ, ಗೊಂದಲಗಳಿದ್ದರೆ ಬಗೆಹರಿಸಿಕೊಳ್ಳಿ.
ವಿಠಲ್, ಸಹಾಯಕ, ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.