ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಒತ್ತು ನೀಡಿ
Team Udayavani, Feb 2, 2018, 4:12 PM IST
ಕೋಲಾರ: ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆ ಉತ್ಪಾದಿಸುವ ಮೂಲಕ ರೈತರು ಚೀನಾ ರೇಷ್ಮೆ ಆಮದಿಗೆ ಸೆಡ್ಡು ಹೊಡೆಯಬೇಕು. ಈ ನಿಟ್ಟಿನಲ್ಲಿ ಬೈವೋಲ್ಟಿನ್ ರೇಷ್ಮೆ ಹುಳು ಸಾಕಾಣೆಗೆ ಒತ್ತು ನೀಡಬೇಕೆಂದು ರೇಷ್ಮೆ ಇಲಾಖೆ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಎಸ್.ವಿ.ಕುಮಾರ್ ಸಲಹೆ ನೀಡಿದರು.
ತಾಲೂಕಿನ ಹೋಳೂರು ಹೋಬಳಿ ತೊಂಡಾಲ ಗ್ರಾಮದಲ್ಲಿ ಗುಣಮಟ್ಟದ ಬೈವೋಲ್ಟಿàನ್ ರೇಷ್ಮೆ ಗೂಡಿನ ಉತ್ಪಾದನೆಗೆ ಸಂಬಂಧಿಸಿ ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ತಳಿಗಳನ್ನು ಕ್ಷೇತ್ರ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಹಾಗೂ ರೇಷ್ಮೆ ಕೃಷಿಯಲ್ಲಿ ಅಳವಡಿಸಬೇಕಾದ ಆಧುನಿಕ ತಂತ್ರಜಾnನ ಮತ್ತು ಆವಿಷ್ಕಾರಗಳ ಕುರಿತು ರೈತರಿಂದ ರೈತರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧುನಿಕ ತಾಂತ್ರಿಕತೆ ಅಳವಡಿಸಿಕೊಳ್ಳಿ: ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆ ಉತ್ಪಾದಿಸುವುದು ನಮ್ಮ ಗುರಿಯಾಗಿದೆ. ಈ ಸಂಬಂಧ ರೇಷ್ಮೆ ಬೆಳೆಗಾರರು ಅಧಿಕ ಇಳುವರಿ ಕೊಡುವ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ತಳಿಗಳನ್ನು ಬಳಸಿ, ಸುಧಾರಿತ ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಬೇಕೆಂದು ಮನವಿ ಮಾಡಿದರು.
ಉದ್ಯಮ ಚೇತರಿಕೆ: ಸರ್ಕಾರ ಬೈವೋಲ್ಟಿàನ್ ರೇಷ್ಮೆ ಉತ್ಪಾದನೆಗೆ ಒತ್ತು ನೀಡಲು ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಚೀನಾ ರೇಷ್ಮೆ ಆಮದಿನಿಂದ ಬೆಲೆ ಕುಸಿತ ಮತ್ತಿತರ ಸಂಕಷ್ಟಕ್ಕೆ ತುತ್ತಾಗುತ್ತಿದ್ದ ರೈತರು ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಪಡೆಯುತ್ತಿರುವುದರಿಂದ ಉದ್ಯಮ ಚೇತರಿಸಿಕೊಂಡಿದೆ ಎಂದರು.
ಇಡೀ ರಾಜ್ಯಕ್ಕೆ ಮಾದರಿ: ಜಿಲ್ಲೆಯ ರೇಷ್ಮೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ, ಜಿಲ್ಲೆಯ ರೇಷ್ಮೆ ಬೆಳೆಗಾರರು ಗುಣಮಟ್ಟದ ರೇಷ್ಮೆ ಗೂಡುಗಳ ಉತ್ಪಾದನೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕಡಿಮೆ ನೀರಿನಲ್ಲಿ ತಮ್ಮದೇ ಆವಿಷ್ಕಾರಗಳೊಂದಿಗೆ ಮರಕಡ್ಡಿ ರೇಷ್ಮೆ ಕೃಷಿ ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಉತ್ತಮ ಬೆಲೆ: ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕ ಎಂ.ಮಂಜುನಾಥ, ಜಿಲ್ಲೆಯಲ್ಲಿ ರೇಷ್ಮೆ ಕೈಗಾರಿಕೆ ಅಭಿವೃದ್ಧಿಗೆ ಉತ್ತಮ ಭವಿಷ್ಯವಿದೆ. ರೇಷ್ಮೆ ಬೆಳೆಗಾರರು ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಗೂಡುಗಳನ್ನು ಉತ್ಪಾದಿಸಬೇಕು. ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಸುಧಾರಿತ ನೂಲು ಬಿಚ್ಚುವ ಯಂತ್ರಗಳ ಅಳವಡಿಕೆಯಾಗಿದೆ. ಶೀಘ್ರವೇ 3 ಕೋಟಿ ರೂ.ವೆಚ್ಚದ ಸ್ವಯಂ ಚಾಲಿತ ನೂಲು ಬಿಚ್ಚುವ ಯಂತ್ರ ಕಾರ್ಯಾರಂಭವಾಗಲಿದೆ. ಇದರಿಂದ ರೇಷ್ಮೆ ಬೆಳೆಗಾರರು ಬೆಳೆದ ಬೈವೋಲ್ಟಿàನ್ ರೇಷ್ಮೆ ಗೂಡುಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜಾnನಿ ಡಾ.ಮೋರಿಸನ್, ರಾಷ್ಟ್ರೀಯ ಕೆಮಿಕಲ್ಸ್ ವಿಭಾಗದ ವಾಸುದೇವ ಅಡಿಗ ಅವರು ರೇಷ್ಮೆ ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡಿದರು. ಪ್ರಗತಿಪರ ರೇಷ್ಮೆ ಬೆಳೆಗಾರ ಪಾರ್ಶ್ವಗಾನಹಳ್ಳಿಯ ನಾರಾಯಣಪ್ಪ, ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು. ತಾಪಂ ಸದಸ್ಯ ಎಚ್.ಗೋಪಾಲಗೌಡ, ಪ್ರಕಾಶ್, ಮುರಳೀಧರ, ರೇಷ್ಮೆ ಬೆಳೆಗಾರ ವೆಂಕಟರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಲಯಾಧಿಕಾರಿ ಜಿ.ವಿ.ಶ್ರೀನಿವಾಸಗೌಡ, ನಿರೀಕ್ಷಕರಾದ ಎನ್.ಚಂದ್ರಶೇಖರ್‌ಗೌಡ, ರಾಮಾಂಜಿ, ಸಿಬ್ಬಂದಿ ಪಾಲ್ಗೊಂಡಿದ್ದರು. ಹೋಳೂರು ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ವಿಸ್ತರಣಾಧಿಕಾರಿ ಎಂ.ಎಸ್.ಕಲ್ಯಾಣಸ್ವಾಮಿ ಸ್ವಾಗತಿಸಿ, ಎಸ್.ಪಿ.ಜಯಶಂಕರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.