ಅಧಿಕಾರಾವಧಿಯಲ್ಲೇ ಜಿಲ್ಲೆಗೆ ಎತ್ತಿನಹೊಳೆ ನೀರು
Team Udayavani, Jun 11, 2020, 6:39 AM IST
ಮುಳಬಾಗಿಲು: ಸರ್ಕಾರ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಸಹಕಾರದೊಂದಿಗೆ ತಮ್ಮ ಅಧಿಕಾರಾವಧಿಯಲ್ಲಿಯೇ ಎತ್ತಿನಹೊಳೆ ನೀರು ಜಿಲ್ಲೆಗೆ ಹರಿಸಲು ಶ್ರಮಿಸಲಾಗುವು ದೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.
ನಗರದ ತಾಪಂ ಕಚೇರಿಯಲ್ಲಿ ಎಪಿಎಂಸಿ ನೂತನ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್, ಉಪಾಧ್ಯಕ್ಷ ಜೆಡಿಎಸ್ ಬೆಂಬಲಿತ ರೆಡ್ಡಪ್ಪ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಎನ್.ವಡ್ಡಹಳ್ಳಿ ಮತ್ತು ನಗರದ ಮಾರುಕಟ್ಟೆಗಳ ಅಭಿವೃದ್ಧಿಗೆ ಏನು ಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಸಹಕಾರ ಸಚಿವರಿಂದ ಎಷ್ಟೇ ಅನುದಾನವಾದರೂ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿನಿತ್ಯ ತರಕಾರಿ ದರಪಟ್ಟಿ ಬಹಿರಂಗವಾಗಿ ಪ್ರಕಟಿಸಬೇಕು, ಮಾರುಕಟ್ಟೆಗಳಿಗೆ ರೈತರು ಬಂದಾಗ ಅವರಿಗೆ ಯಾವುದೇ ಮೋಸವಾಗ ಬಾರದು, ಒಟ್ಟಿನಲ್ಲಿ ವಡ್ಡಹಳ್ಳಿ ಮಾರುಕಟ್ಟೆ ಲಾಲ್‌ಬಾಗ್‌ನಂತೆ ಕಾಣುವಂತೆ ಅಭಿವೃದ್ಧಿಪಡಿಸಲು ಸಮಿತಿ ಸದಸ್ಯರು ಶ್ರಮಿಸಬೇಕು ಎಂದು ಹೇಳಿದರು. ತಾವು ಹೇಳಿಕೆ ಮಾತುಗಳನ್ನು ಕೇಳುವುದಿಲ್ಲ, ಸಾಮಾಜಿಕನ್ಯಾಯದಂತೆ ಎಲ್ಲರಿಗೂ ಅಧಿಕಾರ ದೊರೆಯಬೇಕು,
ಮುಂದಿನ ತಿಂಗಳಿನಲ್ಲಿ ತಾಲೂಕಿಗೆ ಕೆ.ಸಿ. ವ್ಯಾಲಿ ನೀರು ಹರಿದು ಬರಲಿರುವುದರಿಂದ ಸೋಮೇಶ್ವರಪಾಳ್ಯ ಮತ್ತು ಇಂಡ್ಲುರೆಗಳನ್ನು ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ ಕೂಡಲೇ ಸ್ವತ್ಛಗೊಳಿಸಬೇಕೆಂದರು. ನೂತನ ಆರ್.ಎಂ.ಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್ ಮಾತನಾಡಿದರು. ತಾಪಂ ಅಧ್ಯಕ್ಷ ಶ್ರೀನಿವಾಸ್, ಇಒ ಎಂ.ಬಾಬು, ಉಪಾಧ್ಯಕ್ಷ ರೆಡ್ಡಪ್ಪ, ಸದಸ್ಯರಾದ ಗುಡಿಪಲ್ಲಿ ಮಾರಪ್ಪ, ನಗರಸಭೆ ಸದಸ್ಯರಾದ ಜಗನ್ಮೋಹನ್ ರೆಡ್ಡಿ, ಎಂ.ಪ್ರಸಾದ್, ಆರ್‌ಎಂಸಿ ಸದಸ್ಯರಾದ ಜಯರಾಮರೆಡ್ಡಿ, ಆವಣಿ ಬಾಬು, ಸೊನ್ನವಾಡಿ ರಘುಪತಿ, ವಿಶ್ವನಾಥರೆಡ್ಡಿ, ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.