Kolara; ಇವಿಎಂ ಉಗ್ರಾಣ ಪರಿಶೀಲಿಸಿದರೂ ಕೋರ್ಟ್ ಕೇಳಿದ್ದ ದಾಖಲೆ ಸಿಗಲೇ ಇಲ್ಲ!
Team Udayavani, Aug 13, 2024, 11:58 PM IST
ಕೋಲಾರ: ಕಳೆದ ವಿಧಾನಸಭೆ ಚುನಾವಣೆಯ ಮಾಲೂರು ಕ್ಷೇತ್ರದ ಫಲಿತಾಂಶದ ತಕರಾರು ಅರ್ಜಿ ವಿಚಾರವಾಗಿ ಹೈಕೋರ್ಟ್ ದಾಖಲೆ ಕೇಳಿದ್ದರಿಂದಾಗಿ ಜಿಲ್ಲಾಡಳಿತವು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಇವಿಎಂ ಉಗ್ರಾಣದ ಬಾಗಿಲು ತೆರೆದು ಪರಿಶೀಲನೆ ನಡೆಸಲಾಯಿತಾದರೂ ಹೈಕೋರ್ಟ್ ಕೇಳಿದ್ದ ನಿರ್ದಿಷ್ಟ ದಾಖಲೆ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.
ಮಧ್ಯಾಹ್ನ 12 ಗಂಟೆ ವೇಳೆಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡೀಸಿ ಅಕ್ರಂಪಾಷಾ, ಎಸ್ಪಿ ನಿಖೀಲ್ ಜತೆ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟರುವ ದಾಖಲೆ ಪರಿಶೀಲಿಸಿದರು. ಆದರೆ ಒಂದೂವರೇ ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದರೂ ಅಗತ್ಯ ದಾಖಲೆ ಸಿಗಲೇ ಇಲ್ಲ.
ತಕರಾರು ಅರ್ಜಿ ಸಲ್ಲಿಸಿರುವ ಮಾಜಿ ಶಾಸಕ ಕೆ.ಎಸ್. ಮಂಜುನಾಥ್‌ಗೌಡ ಮಾತನಾಡಿ, ಸಿಸಿ ಕೆಮರಾ ದೃಶ್ಯಾವಳಿ, 17 ಸಿ ಫಾರಂಗಳನ್ನು ನೀಡುವಂತೆ ನ್ಯಾಯಾಲಯವು ಆದೇಶ ಮಾಡಿತ್ತು. ಮರು ಮತ ಎಣಿಕೆಗೆ ಅಗತ್ಯವಿದ್ದ ದಾಖಲೆಗಳು ಚುನಾವಣೆ ಫಲಿತಾಂಶದ ದಿನದಂದೇ ಲಭ್ಯವಿತ್ತು. ಆದರೆ ಈಗ ಇಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ 50,955 ಮತ ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಮಂಜುನಾಥಗೌಡ 50,707 ಮತ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!