ಮುಗಿಬಿದ್ದು ಶೇಂಗಾ ಖರೀದಿ
Team Udayavani, Jun 1, 2020, 7:34 AM IST
ಮುಳಬಾಗಿಲು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಕೊರೊನಾ ಸೋಂಕು ಹರಡಿರುವುದರಿಂದ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳಿಗೂ ಮುಂಜಾಗ್ರತೆ ವಹಿಸಲು ಸೂಚಿಸಿದೆ. ಆದರೂ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ತಮಗೂ ಇದ್ದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ನಿರ್ಲಕ್ಷ್ಯವಹಿಸಿದ್ದ ದೃಶ್ಯ ಭಾನುವಾರ ಕಂಡು ಬಂತು.
ಮಾಸ್ಕ್ ಇಲ್ಲದೇ ಬಂದ ರೈತರು, ಸಾಮಾಜಿಕ ಅಂತರವನ್ನೂ ಕಾಯ್ದು ಕೊಳ್ಳದೇ ಬೈರಕೂರು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ವಿತರಿಸುತ್ತಿ ರುವ ಶೇಂಗಾವನ್ನು ಖರೀದಿ ಸುತ್ತಿದ್ದರು. ಗುಂಪನ್ನು ಚದುರಿಸಿ ಅಂತರವ ನ್ನು ಕಾಯ್ದುಕೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳು ಎಷ್ಟು ಪ್ರಯತ್ನಿಸಿದರೂ ಸಫಲವಾಗಲಿಲ್ಲ, ಆದರೂ ರೈತರು ಕಷ್ಟ ಪಟ್ಟು ಶೇಂಗಾ ತೆಗೆದುಕೊಂಡು ಹೋಗುತ್ತಲೇ ಇದ್ದರು.
ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಲಾದ ರಿಯಾಯ್ತಿ ದರದ ಶೇಂಗಾದ ಬಹಳಷ್ಟು ಮೂಟೆಗಳಲ್ಲಿ ಕನಿಷ್ಠ ಎರಡು ಕೆ.ಜಿ.ಗಳಷ್ಟು ಕಲ್ಲುಗಳು ಇದ್ದವು. ಮೂವತ್ತು ಕೆ.ಜಿ. ಶೇಂಗಾ ಮೂಟೆಯಲ್ಲಿ ಎರಡು ಕೆ.ಜಿ. ಕಲ್ಲುಗಳೇ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ರೈತ ಸೀನಪ್ಪ ಆರೋಪಿಸಿದರು.
ಸಹಾಯಕ ಕೃಷಿ ಅಧಿಕಾರಿ ಲೋಕರಾಜ್ ಅವರನ್ನು ವಿಚಾರಿಸಿದರೆ, ಶೇಂಗಾ ಬಿತ್ತನೆ ಬೀಜಗಳು ಕರ್ನಾಟಕ ಆಯಿಲ್ ಕಾರ್ಪೊರೇಷನ್‌ನಿಂದ ಬಂದಿದ್ದು, ಅಲ್ಲಿಂದಲೇ ಮೂಟೆಗಳನ್ನು ಪ್ಯಾಕ್ ಮಾಡಲಾಗಿರುವುದರಿಂದ ನಾವು ಮೂಟೆಗಳನ್ನು ಬಿಚ್ಚಿ ನೋಡದ ಕಾರಣ ಮೂಟೆಗಳ ಒಳಗೆ ಕಲ್ಲುಗಳಿರುವುದು ನಮಗೆ ಗೊತ್ತಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.