ಬಡ ರೈತರ ವಿರುದ್ಧ ಸುಳ್ಳು ಕೇಸು ದೂರು ದಾಖಲು: ಆರೋಪ
Team Udayavani, Aug 21, 2021, 6:13 PM IST
ಶ್ರೀನಿವಾಸಪುರ: ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಸಾಲ ಪಡೆದು ಕೋಳಿ ಫಾರಂ
ನಿರ್ಮಿಸಿರುವ ಬಲಾಡ್ಯರ ಮೇಲೆ ಪೌರುಷ ತೋರಿಸಲಾಗದ ಅರಣ್ಯ ಇಲಾಖೆ ಅಧಿಕಾರಿಗಳು, ಬಡ ರೈತರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ, ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಆರೋಪಿಸಿದರು.
ತಾಲೂಕು ಕಚೇರಿ ಮುಂಭಾಗ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ,ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ವಿರುದ್ಧ ಇತ್ತೀಚಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯದ ಮೂಲಕ ಬಡ ರೈತರ ಮೇಲೆ ಕೇಸುಗಳನ್ನು ದಾಖಲಿಸಿ, ಅನಗತ್ಯವಾಗಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.
ಅಧಿಕಾರಿಗಳಿಂದ ಹಿಗ್ಗಾಮುಗ್ಗಾ ಥಳಿತ:
ಶ್ರೀನಿವಾಸಪುರ ತಾಲೂಕಿನ ಉಪ್ಪರಪಲ್ಲಿ ದಲಿತ ರೈತ ವೆಂಕಟಸ್ವಾಮಿ ಅವರು ಸರ್ಕಾರಿ ಗೋಮಾಳ ಸರ್ವೆ ನಂ.35ರಲ್ಲಿ ಜಮೀನು ಹೊಂದಿ ಅದಕ್ಕೆ ದಾಖಲೆ ಪಡೆದಿದ್ದಾರೆ. ಇದರಲ್ಲಿ ರಾಗಿ ಬಿತ್ತನೆ ಮಾಡುತ್ತಿರುವಾಗ, ಅರಣ್ಯ ಇಲಾಖೆಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ, ವೆಂಕಟ ಸ್ವಾಮಿ ಮತ್ತು ಅವರ ಮಗನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ರಾಜ್ಯದ ಜೀವನದಿ ಕೃಷ್ಣೆ ಮಕ್ಕಳಿಗೆ ವಚನ ಕೊಡುವರೆ ಬೊಮ್ಮಾಯಿ?
ರೈತರಿಗೆ ಆಗುವ ತೊಂದರೆ ತಪ್ಪಿಸಿ: ಬಡವರು ಗೋಮಾಳ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿ ಗಳು ನಮಗೆ ಸೇರಿದ್ದು ಎಂದು ಯಾವುದೇ ದಾಖಲೆಗಳು ಇಲ್ಲದಿದ್ದರೂ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ. ಹೀಗೆ ಹಲವು ಸಮಸ್ಯೆ ಗಳಿದ್ದರೂ ಜಿಲ್ಲಾಧಿಕಾರಿಗಳು,ಸಂಬಂಧಪಟ್ಟಉಪಅರಣ್ಯ ಸಂರಕ್ಷಣಾಧಿಕಾರಿಗಳು ಮುಂದಾಗುತ್ತಿಲ್ಲ. ಹೀಗಾಗಿ ಕೂಡಲೇ ಸಭೆ ಕರೆದು ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಸರ್ವೆ ಮಾಡಿಸಿ, ಅರಣ್ಯ ಭೂಮಿಗೆ ಸೇರಿದ್ದೇ ಆದರೆ ಅದನ್ನು ವಶಪಡಿಸಿಕೊಂಡರೆ, ತೊಂದರೆಯಿಲ್ಲ ಎಂದು ಹೇಳಿದರು.
ತೊಂದರೆ ನೀಡಿದರೆ ಕಚೇರಿಗೆ ಮುತ್ತಿಗೆ:
ರೈತರಿಗೆ ತೊಂದರೆ ನೀಡುತ್ತಿದ್ದರೆ ಸಾವಿರಾರು ಟ್ರ್ಯಾಕ್ಟರ್‌ಗಳ ಸಮೇತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗು
ವುದು. ಅಲ್ಲದೆ, ಉಪ್ಪರಪಲ್ಲಿಯ ರೈತ ವೆಂಕಟಸ್ವಾಮಿ ಮೇಲೆ ಹಲ್ಲೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡುನೊಂದ ರೈತ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಉಪ ತಹಶೀಲ್ದಾರ್ ಕಿರಣ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಕಲ್ಲೂರು ವೆಂಕಟ್, ಷಫಿ, ಆಲವಾಟ ಶಿವಕುಮಾರ್, ವಿಜಯಕುಮಾರ್, ರಾಯಲ್ಪಾಡು ಹರೀಶ್ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.