ಬದುಕಿರುವ ರೈತನಿಗೆ ಮರಣ ಪತ್ರ ವಿತರಣೆ
Team Udayavani, Jan 29, 2022, 1:23 PM IST
ಮುಳಬಾಗಿಲು: ರೈತನೊಬ್ಬ ಜೀವಂತವಾಗಿದ್ದರೂ, ಸತ್ತು ಹೋಗಿದ್ದಾನೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ವಿತರಣೆ ಮಾಡಿರುವುದರ ವಿರುದ್ಧ ನ್ಯಾಯಾಲಯದ ಆದೇಶದಂತೆ ಗ್ರಾಮ ಲೆಕ್ಕಿಗ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಅರವಿಂದ್ ಮತ್ತು ಹಿಂದಿನ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಒಳಗೊಂಡಂತೆ ನಾಲ್ವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಕಸಬಾ ಹೋಬಳಿ ಎಂ.ಹೊಸಹಳ್ಳಿ ಗ್ರಾಮದ ರೈತ ವಿ.ಶಿವರಾಜ್ (40) ಎಂಬುವರ ತಂದೆ ಮೃತ ವೆಂಕಟೇಶಪ್ಪ ಬದುಕಿದ್ದಾಗ ಅವರಿಗೆ ಸೇರಿದ ಭೂಮನಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ 2.27 ಎಕರೆ ಜಮೀನನ್ನು 2012ರಲ್ಲಿದ್ದ ತಹಶೀಲ್ದಾರರು ಮತ್ತು ಅವರ ಕಚೇರಿ ಸಿಬ್ಬಂದಿ, ರಾಮಪ್ಪ ಎಂಬುವರ ಜೊತೆ ಶಾಮೀಲಾಗಿ ಅವರ ಹೆಸರಿಗೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಖಾತೆ ಮಾಡಿದ್ದರು. ಸದರೀ ಕಾನೂನು ಬಾಹಿರ ಖಾತಾ ಮತ್ತು ಮೋಸ ವಂಚನೆ ಕುರಿತು ರೈತ ವಿ.ಶಿವರಾಜ್ ಸದರೀ ಆಸಾಮಿಗಳ ವಿರುದ್ಧ ಪಿಸಿಆರ್ 32/2012ರಂತೆ ತಹಶೀಲ್ದಾರ್ ಮತ್ತು ಇತರರ ಮೇಲೆ ಎಫ್ಐಆರ್ 282/12ರಂತೆ ಪ್ರಕರಣ ನೋಂದಣಿ ಯಾಗಿತ್ತು. ಈ ಪ್ರಕರಣದಲ್ಲಿ ತಾಲೂಕು ಕಚೇರಿಯಲ್ಲಿಕಾನೂನು ಬಾಹಿರ ಖಾತೆಯನ್ನು ಪ್ರಶ್ನಿಸಿ, ಅರ್ಜಿ ಸಲ್ಲಿಸಿಈ ಅರ್ಜಿ ಪ್ರಕ್ರಿಯೆ ಹಂತದಲ್ಲಿ ಇದ್ದು, ಖಾತೆ ಬದಲಾವಣೆ ವಿಚಾರವಾಗಿ ಕಂದಾಯ ಇಲಾಖೆಗೆ ಅಲೆದಾಡುತ್ತಿದ್ದಾರೆ.
ಪಡಿತರ ಚೀಟಿಯಲ್ಲಿ ಹೆಸರಿಲ್ಲ: ಹೀಗಿರುವಾಗ ಈ ಪ್ರಕರಣದ ಒಂದನೇ ಆರೋಪಿಯಾದ ಗ್ರಾಮ ಲೆಕ್ಕಿಗಎನ್.ಅರವಿಂದ್ ಉಳಿದ ಆರೋಪಿಗಳಾದ ಕಸಬಹೋಬಳಿ ರಾಜಸ್ವ ನಿರೀಕ್ಷಕ ಸಾದತ್ ಉಲ್ಲಾ ಖಾನ್, ಮೂರನೇ ಆರೋಪಿ ನಾಡ ಕಚೇರಿ ಶಿರಸ್ತೇದಾರ್‌ಜಯರಾಮ್ ಮತ್ತು 4ನೇ ಆರೋಪಿ ಹಿಂದಿನ ತಹಶೀಲ್ದಾರ್ ಕೆ.ಎನ್.ರಾಜಶೇಖರ್‌ರೊಂದಿಗೆ ಶಾಮೀಲಾಗಿ ರೈತ ವಿ.ಶಿವರಾಜ್ ಜೀವಂತವಾಗಿರು ವಾಗಲೇ 05.07.2021ರಂದು ಮರಣ ಹೊಂದಿರುವುದಾಗಿ 13.07.2021ರಂದು ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಮರಣ ಪ್ರಮಾಣ ಪತ್ರದ ಪ್ರತಿಗಳನ್ನು ಅಂಗನವಾಡಿ ಕಟ್ಟಡ, ತಾಲೂಕು ಕಚೇರಿ ಕಾಂಪೌಂಡ್ ಗೋಡೆ ಮತ್ತು ಲೋಕೋಪಯೋಗಿ ಇಲಾಖೆ ನಾಮಫಲಕದ ಮೇಲೆ ಅಂಟಿಸಿದ್ದಾರೆ. ಅಲ್ಲದೆ, ರೈತನ ಹೆಸರನ್ನು ಅವರ ಕುಟುಂಬದ ಪಡಿತರ ಚೀಟಿಯಲ್ಲಿ ಸಹ ತೆಗೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಪ್ರಾಣ ಬೆದರಿಕೆ: ಈ ರೀತಿಯ ಆರೋಪಿಗಳ ಕೃತ್ಯವು ಉದ್ದೇಶ ಪೂರ್ವಕವಾಗಿದ್ದು, ಫಿರ್ಯಾದುದಾರರಿಗೆ ನಷ್ಟವನ್ನುಂಟು ಮಾಡಿದ್ದಾರೆ.ಫಿರ್ಯಾದುದಾರರ ಹೆಸರಿನಲ್ಲಿರುವ ಜಮೀನುಗಳನ್ನು ಲಪಟಾಯಿಸಿಕೊಳ್ಳಲು ಹಾಗೂ ಅಕ್ರಮ ಲಾಭ ಪಡೆದುಕೊಳ್ಳಲು ಉದ್ದೇಶ ಪೂರ್ವಕವಾಗಿ ಫಿರ್ಯಾದುದಾರರ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈ ಕುರಿತು ರೈತನ ಅಣ್ಣ ಎಚ್.ಸುಬ್ರಮಣಿ ಕಳೆದ ಡಿ.15ರಂದು ತಾಲೂಕು ಕಚೇರಿಗೆ ಭೇಟಿ ನೀಡಿ, ಗ್ರಾಮ ಲೆಕ್ಕಿಗರೊಂದಿಗೆ ಮರಣಪ್ರಮಾಣ ಪತ್ರದ ಬಗ್ಗೆ ಪ್ರಶ್ನಿಸಿದಾಗ, ಗ್ರಾಮ ಲೆಕ್ಕಿಗ ಎನ್.ಅರವಿಂದ್ ಮತ್ತು ಆತನ ಅನುಚರರು ಹಲ್ಲೆ ಮಾಡಿ, ಇನ್ನೊಮ್ಮೆ ಈ ವಿಚಾರವಾಗಿ ನಮ್ಮನ್ನು ಕೇಳಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಗೆ ನೋಟಿಸ್ ನೀಡಿಲ್ಲ: ಮರಣ ಪ್ರಮಾಣ ಪತ್ರವನ್ನು ನೀಡಿದ ನಂತರ17.12.21ರಂದು ಪ್ರಭಾರ ತಹಶೀಲ್ದಾರ್ ನಾಗವೇಣಿಅವರು ಈ ಕುರಿತು ನಾಡಕಚೇರಿ ಆಪರೇಟರ್‌ಗಳಾದಅಶ್ವಿನಿ, ಸುಬ್ರಮಣ್ಯಾಚಾರಿ, ಎಸ್.ವಿ.ಶ್ರೀನಾಥ್‌ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಆದರೆ, ಪ್ರಕರಣದ ಆರೋಪಿಗಳಿಗೆ ನೋಟಿಸ್ ನೀಡಿಲ್ಲ.
ಈ ಕುರಿತು ನೊಂದ ರೈತ ಶಿವರಾಜ್ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಸರ್ಕಾರ, ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅಂತಿಮವಾಗಿ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆಮೊರೆ ಹೋಗಿ, ಖಾಸಗಿ ದೂರು ಪಿ.ಸಿ.ಆರ್. ಸಂಖ್ಯೆ 11/2022 ದಾಖಲಿಸಿದ್ದರು. ಅದೇ ದಿನ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ ಯಾದವಾಡ ಅವರು, ನಾಲ್ವರುಆರೋಪಿಗಳ ವಿರುದ್ಧ ಪಿ.ಸಿ.ಆರ್.ಪ್ರಕರಣ ದಾಖಲುಮಾಡಲು ಆದೇಶಿಸಿದ್ದರು. ಅದರಂತೆ ನಗರ ಠಾಣೆಯಲ್ಲಿ 27ರಂದು ಅಪರಾಧ ಸಂಖ್ಯೆ 14/2022ರಂತೆ 1ನೇ ಆರೋಪಿ ಗ್ರಾಮ ಲೆಕ್ಕಿಗ ಎನ್. ಅರವಿಂದ್, 2ನೇ ಆರೋಪಿ ಕಸಬಾ ಹೋಬಳಿ ಆರ್ .ಐ. ಸಾದತ್ ಉಲ್ಲಾ ಖಾನ್, 3ನೇ ಆರೋಪಿ ನಾಡಕಚೇರಿ ಶಿರಸ್ತೇದಾರ್ ಜಯರಾಮ್ ಮತ್ತು 4ನೇಆರೋಪಿ ಹಿಂದಿನ ತಹಶೀಲ್ದಾರ್ ಕೆ.ಎನ್.ರಾಜ ಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಲ ಅಧಿಕಾರಿಗಳು ತಮ್ಮ ಹೆಸರಿನಲ್ಲಿರುವ ಜಮೀನನ್ನು ವಂಚಿಸಲು ಹಾಗೂ ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ತಾವು ಬದುಕಿದ್ದರೂ, ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಆದ್ದರಿಂದನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯ ಆದೇಶದಂತೆ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. -ಶಿವರಾಜ್, ರೈತ, ಎಂ.ಹೊಸಹಳ್ಳಿ
ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಬದುಕಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ವಿತರಣೆ ಮಾಡಿರುವ ಸಂಬಂಧಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯ ಆದೇಶದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದು, ತನಿಖೆ ಮಾಡಲಾಗುವುದು. -ಸೀತಪ್ಪ, ಪಿಎಸ್‌ಐ, ನಗರ ಠಾಣೆ, ಮುಳಬಾಗಿಲು
ಕೆಲ ಅಧಿಕಾರಿಗಳು ತಮ್ಮ ಹೆಸರಿನಲ್ಲಿರುವ ಜಮೀನನ್ನು ವಂಚಿಸಲು ಹಾಗೂ ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ತಾವು ಬದುಕಿದ್ದರೂ, ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಆದ್ದರಿಂದ ನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯ ಆದೇಶದಂತೆ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. -ಶಿವರಾಜ್, ರೈತ, ಎಂ.ಹೊಸಹಳ್ಳಿ
-ಎಂ.ನಾಗರಾಜಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.