ಯಂತ್ರಗಳಿದ್ರೂ ರಸ್ತೆಗಳಲ್ಲಿ ಧಾನ್ಯ ಒಕ್ಕಣೆ


Team Udayavani, Feb 7, 2022, 1:15 PM IST

ಯಂತ್ರಗಳಿದ್ರೂ ರಸ್ತೆಗಳಲ್ಲಿ ಧಾನ್ಯ ಒಕ್ಕಣೆ

ಮುಳಬಾಗಿಲು: ರೈತರು ಬೆಳೆಯುವ ಧಾನ್ಯಗಳ ಒಕ್ಕಣೆಗಾಗಿ ಸರ್ಕಾರ ಕೃಷಿ ಇಲಾಖೆ ಮೂಲಕ ಉಪಕರಣಗಳನ್ನು ವಿತರಣೆ ಮಾಡುತ್ತಿದ್ದರೂ, ರೈತರು ಮಾತ್ರ ಅವುಗಳನ್ನು ಬಳಸಿಕೊಳ್ಳದೇ ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿದ್ದಾರೆ. ಈ ದೃಶ್ಯ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಹೆಚ್ಚು ಕಂಡು ಬರುತ್ತಿದೆ.

ತಾಲೂಕಿನಲ್ಲಿ ಹಲವು ವರ್ಷಗಳ ಹಿಂದೆ ರೈತರುಬೆಳೆದ ರಾಗಿ, ಭತ್ತ, ಜೋಳ, ತೊಗರಿ, ಅವರೆ,ಹುರಳಿ, ನವಣೆ, ಸಜ್ಜೆಯಂತಹ ಬೆಳೆಗಳನ್ನು ತಮ್ಮಜಮೀನಿನಲ್ಲಿ ನೆಲಗಟ್ಟಿಗೊಳಿಸಿ ಸಗಣಿಯಿಂದಸಾರಿಸಿ ಕಣ ಸಿದ್ಧಪಡಿಸಿ, ಬಂಡೆಗಳ ಮೇಲೆಎತ್ತುಗಳಿಗೆ ಕಲ್ಲಿನ ಗುಂಡು ಕಟ್ಟಿ ಧಾನ್ಯಗಳ ಒಕ್ಕಣೆಮಾಡಲಾಗುತ್ತಿತ್ತು. ಇದರಿಂದ ಉತ್ತಮ ಆರೋಗ್ಯಭರಿತ ಧಾನ್ಯ ಮನೆಗೆ ಸಾಗಿಸುತ್ತಿದ್ದರು. ಅಂತಹ ಧಾನ್ಯಗಳ ಬಳಕೆಯಿಂದ ಮನುಷ್ಯರು ಅರೋಗ್ಯವಂತ ದೃಢಕಾಯರಾಗುತ್ತಿದ್ದರು.

ಗೇಟ್‌ಗಳಲ್ಲಿ ಧಾನ್ಯ ಒಕ್ಕಣೆ: ಆದರೆ, ಕಾಲ ಬದಲಾವಣೆಯಂತೆ ಪ್ರಸ್ತುತ ರೈತರು ಒಕ್ಕಣೆಗೆ ಎತ್ತುಗಳು ಹಾಗೂ ಆಳುಗಳ ಕೊರತೆಯಿಂದ ಹಣಉಳಿಸುವುದರೊಂದಿಗೆ ಸುಲಭ ರೀತಿಯಲ್ಲಿ ಧಾನ್ಯ ಗಳನ್ನು ಒಕ್ಕಣೆ ಮಾಡಬಹುದೆಂದು ಯೋಚಿಸಿ, ಬೆಳೆದ ನೆಲಗಡಲೆ, ರಾಗಿ, ಹುರಳಿ ಬೆಳೆಗಳನ್ನು ಸ್ಥಳೀಯ ಎಂಡಿಆರ್‌ ರಸ್ತೆಗಳೇ ಅಲ್ಲದೇ, 24 ಗಂಟೆ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 75ರ ಕಮದಟ್ಟಿ, ಕಾಮನೂರು, ದೇವರಾಯಸಮುದ್ರ, ಕಾಂತರಾಜವೃತ್ತ, ಜಮ್ಮನಹಳ್ಳಿ ಗೇಟ್‌, ಶೀಗೇನಹಳ್ಳಿ, ಕಪ್ಪಲಮಡಗು, ಶ್ರೀರಂಗಪುರ, ಪದ್ಮಘಟ್ಟ, ತಾತಿಕಲ್ಲು, ಹಳೆಕುಪ್ಪ, ನಂಗಲಿ, ಮುಷ್ಟೂರು ಕ್ರಾಸ್‌ ಮತ್ತು ಮತ್ತು ರಾಷ್ಟ್ರೀಯ ಹೆದ್ದಾರಿ 234ರ ಸೊನ್ನವಾಡಿ, ಕವತನಹಳ್ಳಿ, ಕಾಡುಕಚ್ಚನಹಳ್ಳಿ, ವಜ್ರನಾಗೇನಹಳ್ಳಿ, ದೊಮ್ಮಸಂದ್ರ, ತಿಮ್ಮನಾಯಕನಹಳ್ಳಿ, ಮಲ್ಲನಾಯಕನಹಳ್ಳಿ, ಮೋಪರಹಳ್ಳಿ, ಕರವಿರೆಡಿಹಳ್ಳಿ ಸೇರಿ ವಿವಿಧ ಗೇಟ್‌ಗಳಲ್ಲೂ ಧಾನ್ಯ ಒಕ್ಕಣೆ ಮಾಡುತ್ತಿದ್ದಾರೆ.

ಹಲವರಿಗೆ ಗಾಯ: ಆದರೆ, ಹುಲ್ಲಿನ ಮೆದೆಗಳ ಮೇಲೆ ನೂರಾರು ವಾಹನಗಳು ಓಡಾಡುವುದರಿಂದ ಹುಲ್ಲು ಪುಡಿಯಾದರೂ ಧಾನ್ಯಗಳ ಜಾರುವಿಕೆಯಿಂದ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿ ವಾಹನ ಸವಾರರು ಜಾರಿಬಿದ್ದು ಕೈ-ಕಾಲುಮುರಿದುಕೊಂಡು ಆಸ್ಪತ್ರೆ ಸೇರುತ್ತ, ಹಲವು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೇ, ಒಕ್ಕಣೆ ಸಮಯದಲ್ಲಿ ವಾಹನಓಡಾಡುವುದರಿಂದ ವಾಹನಗಳಲ್ಲಿನ ಇಂಧನಧಾನ್ಯಗಳ ಮೇಲೆ ಸಂಪ್ರೋಕ್ಷಣೆ ಆಗುವುದರೊಂದಿಗೆಚಕ್ರಗಳಲ್ಲಿನ ಮಣ್ಣು, ಹೊಲಸು ಧಾನ್ಯದೊಂದಿಗೆಬೆರೆತು ಆಹಾರ ಧಾನ್ಯಗಳು ಮಲಿನವಾಗುತ್ತಿದೆ.

ವಾಹನ ಸವಾರರಿಗೆ ಬೇಸರ: ಇಂತಹ ಧಾನ್ಯಗಳುಆರೋಗ್ಯಕ್ಕೆ ದುಷ್ಪರಿಣಾಮ ಉಂಟು ಮಾಡಬಹುದಾಗಿದೆ. ಇಷ್ಟಾದರೂ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಲಾಗುತ್ತಿಲ್ಲ. ಬದಲಿಗೆಅಪಘಾತ ಸೃಷ್ಟಿಸುವ ತಾಣಗಳಾಗಿ ಮಾರ್ಪಡುತ್ತಿವೆ.ಅದರಲ್ಲೂ ಮುಖ್ಯವಾಗಿ ಜನನಿಬಿಡ ವಾಹನಸಂಚಾರವಿರುವ ರಾ.ಹೆ.75ರ ಪದ್ಮಘಟ್ಟ ಬಳಿ ಇರುವಆರ್‌ಟಿಒ ಕಚೇರಿ ಎದುರೇ ರೈತರೊಬ್ಬರು ನೆಲಗಡೆಲೆಕಾಯಿಗಳನ್ನು ರಸ್ತೆಯಲ್ಲಿಯೇ ಹಾಕಿದ್ದರೂ ಯಾರೊಬ್ಬರೂ ಇತ್ತ ಕಡೆ ಗಮನಿಸದೇ ಇರುವುದು ವಾಹನ ಸವಾರರಿಗೆ ಬೇಸರ ಉಂಟು ಮಾಡಿತ್ತು.ಆದ್ದರಿಂದ ಆರ್ಥಿಕ ಮುಗ್ಗಟ್ಟಿನ ರೈತರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡುರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಕೈಬಿಡಬೇಕಾಗಿದ್ದು ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.

ರೈತರು ಬೆಳೆದ ಬೆಳೆಗಳನ್ನು ಒಕ್ಕಣೆ ಮಾಡಲು ರಸ್ತೆಗಳಲ್ಲಿ ಹಾಕುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿರುವುದಲ್ಲದೇ,ಅದರಿಂದ ಸಾಕಷ್ಟು ಅಪಘಾತಗಳು ಉಂಟಾಗುತ್ತಿದೆ. ಅಲ್ಲದೆ, ಒಕ್ಕಣೆಮಾಡಿದ ಧಾನ್ಯಗಳಲ್ಲಿ ವಾಹನಗಳಿಂದ ಸುರಿದ ಪೆಟ್ರೋಲ್‌, ಡೀಸೆಲ್‌ ಹಾಗೂ ಆಯಿಲ್‌ನಿಂದ ಧಾನ್ಯ ಕಲುಷಿತವಾಗುತ್ತಿದೆ. ಇದರಿಂದ ಈಧಾನ್ಯಗಳ ಬಳಕೆಗೂ ತೊಂದರೆಯುಂಟಾಗುವುದರಿಂದ ರೈತರು ರಸ್ತೆಯಲ್ಲಿ ಧಾನ್ಯಗಳ ಒಕ್ಕಣೆ ಮಾಡುವುದನ್ನು ಕೈ ಬಿಡಬೇಕು.-ರಾಮಚಂದ್ರ, ವಾಹನ ಸವಾರ

ಗ್ರಾಮೀಣ ಭಾಗದ ವಿವಿಧ ರಸ್ತೆಗಳಲ್ಲಿರೈತರು ಒಕ್ಕಣೆ ಮಾಡುವುದರಿಂದ ಉಂಟಾಗುವ ಸಾಧಕ ಬಾಧಕಗಳ ಕುರಿತು ಆಯಾ ಗ್ರಾಪಂವ್ಯಾಪ್ತಿಯಲ್ಲಿ ಜನರಿಗೆ ಅರಿವು ಮೂಡಿಸಲು ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ರೈತರಿಗೆ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. – ಉಕೇಶ್‌ಕುಮಾರ್‌, ಸಿಇಒ, ಕೋಲಾರ ಜಿಪಂ

ರೈತರು ಬೆಳೆಯುವ ಧಾನ್ಯ ಒಕ್ಕಣೆಗಾಗಿ ರಸ್ತೆಗಳಲ್ಲಿ ಹಾಕುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುವುದಲ್ಲದೇ, ಅಪಘಾತಗಳಿಗೆ ಎಡೆ ಮಾಡಿಕೊಡುವುದರಿಂದ ಅಂತಹ ದುರ್ಘ‌ಟನೆಗಳಿಗೆ ಅವಕಾಶ ನೀಡದೇ ಕೃಷಿ ಇಲಾಖೆಯಲ್ಲಿ ದೊರೆಯುವ ಉಪಕರಣಗಳನ್ನು ಪಡೆದು ಧಾನ್ಯ ಒಕ್ಕಣೆ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದ ವಿವಿಧ ರಸ್ತೆಗಳಲ್ಲಿರೈತರು ಒಕ್ಕಣೆ ಮಾಡುವುದರಿಂದ ಉಂಟಾಗುವ ಸಾಧಕ ಬಾಧಕಗಳ ಕುರಿತು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಜನರಿಗೆ ಅರಿವು ಮೂಡಿಸಲು ಗ್ರಾಪಂಅಧಿಕಾರಿಗಳು ಮತ್ತು ಸಿಬ್ಬಂದಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ರೈತರಿಗೆ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.-ರವಿಕುಮಾರ್‌, ಸಹಾಯಕ ,ನಿರ್ದೇಶಕ, ಕೃಷಿ ಇಲಾಖೆ.

 

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.