ಠಾಣೆ ತೆರೆಯಲು ರೈತಸಂಘ ಮನವಿ
Team Udayavani, Apr 23, 2021, 4:11 PM IST
ಕೋಲಾರ: ನರಸಾಪುರದಲ್ಲಿ ಹೊಸದಾಗಿಠಾಣೆಯನ್ನು ತೆರೆಯಲು ಒತ್ತಾಯಿಸಿಜಿಲ್ಲಾ ಸಹಾಯಕ ರಕ್ಷಣಾಧಿಕಾರಿಬಿ.ಎಂ.ನಾರಾಯಣಸ್ವಾಮಿ ಅವರಿಗೆಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಜಿಲ್ಲಾ ಘಟಕ ಮನವಿ ನೀಡಿ ಕೋರಿದೆ.
ಕೋಲಾರ ತಾಲೂಕು ನರಸಾಪುರ,ವೇಮಗಲ್ ಕೈಗಾರಿಕಾ ಪ್ರದೇಶಗಳಾ ಗಿದ್ದು,ಇಲ್ಲಿ ಅತಿಹೆಚ್ಚು ಬೇರೆ ರಾಜ್ಯದವರುಕಾರ್ಖಾನೆಗಳಲ್ಲಿ ಕೆಲಸ ಮಾಡುವಕಾರ್ಮಿಕರು ನೆಲೆಸಿದ್ದು, ಸದರಿ ಕೈಗಾರಿಕಾಪ್ರದೇಶಕ್ಕೆ ವೇಮಗಲ್ ಒಂದೇ ಠಾಣೆಯಿದೆ.
ಒಬ್ಬರು ಆರಕ್ಷಕ ಉಪನಿರೀಕ್ಷಕರಿದ್ದು,ಸಿಬ್ಬಂದಿ ಕೊರತೆ ಇರುತ್ತದೆ.ವೇಮಗಲ್ ಠಾಣೆಗೆ 100 ಕ್ಕೂ ಹೆಚ್ಚುಹಳ್ಳಿ ಸೇರಿದ್ದು, ಅಕ್ರಮ ಚಟುವಟಿಕೆಹೆಚ್ಚಾಗುತ್ತಿದ್ದು, ರಾತ್ರಿ ಪಾಳ್ಯದಲ್ಲಿ ಕೆಲಸಮಾಡುವ ಕಾರ್ಮಿಕರು ಕೆಲಸ ಮುಗಿಸಿಹಿಂತಿರುಗುವ ಸಮಯದಲ್ಲಿ ಅದೆಷ್ಟೋಕಳ್ಳತನ, ಕೊಲೆ ಪ್ರಯತ್ನ ನಡೆದಿವೆ.ಭಾನುವಾರದ ಸಮಯದಲ್ಲಿ ರಾಷ್ಟ್ರೀಯಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುವಂತಹದ್ದು, ಬೇರೆ ವಾಹನ ಸವಾರರಿಗೆಪ್ರಾಣಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಭೂಮಿ ಬೆಲೆಹೆಚ್ಚಾಗುತ್ತಿದ್ದು, ಲಿಯಲ್ ಎಸ್ಟೇಟ್‌ನೆಪದಲ್ಲಿ ಬೆಂಗಳೂರಿನ ಭೂಗತ ಲೋಕದ ಮಾಫಿಯಾಗಳು ಕೋಲಾರಕ್ಕೆ ಕಾಲಿಟ್ಟಿದ್ದಾರೆ.
ಕೂಡಲೇ ನರಸಾಪುರದಲ್ಲಿಠಾಣೆ ತೆರೆದು ಸಿಬ್ಬಂದಿ ನೇಮಕ ಮಾಡಿದ್ದಲ್ಲಿ ಜನ ಸಾಮಾನ್ಯರಿಗೆ, ಕಾರ್ಮಿಕರಿಗೆಅನುಕೂಲವಾಗುತ್ತದೆ ಎಂದಿದ್ದಾರೆ.ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಉಪಾಧ್ಯಕ್ಷ ನಂದಕುಮಾರ್,ಜಿಲ್ಲಾ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಮುಳಬಾಗಿಲು ತಾಲೂಕು ಅಧ್ಯಕ್ಷಎಲ್.ಎನ್.ಬಾಬು, ಶ್ರೀನಿವಾಸ ಪುರತಾಲೂಕು ಅಧ್ಯಕ್ಷ ದೊಡ್ಡ ಕುರುಬರಹಳ್ಳಿಶಂಕರಪ್ಪ, ಕೋಲಾರ ತಾಲೂಕು ಅಧ್ಯಕ್ಷಶಿಳ್ಳಂಗೆರೆ ವೇಣು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.