ಟೊಮೆಟೋ ಕೆ.ಜಿ.ಗೆ 10ರೂ. ಬೆಂಬಲ ಬೆಲೆ ಘೋಷಿಸಿ
Team Udayavani, Jul 19, 2022, 3:35 PM IST
ಕೋಲಾರ: ಟೊಮೆಟೋ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗಾಗಿ ಪ್ರತಿ ಕೆ.ಜಿ. ಟೊಮೆಟೋಗೆ 10 ರೂ. ಬೆಂಬಲ ಬೆಲೆ ಘೋಷಣೆ ಮಾಡಿ, ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಬೇಕು ಎಂದು ರೈತಸಂಘದಿಂದ ಟೊಮೆಟೋ ಸಮೇತ ಎಪಿಎಂಸಿ ಮಾರುಕಟ್ಟೆಯಿಂದ ಮೆಕ್ಕೆ ವೃತ್ತದವರೆಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿ, ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ದೇಶದ ಕೋಟ್ಯಂತರ ಜನರ ಆಹಾರ ಭದ್ರತೆಒದಗಿಸುವ ರೈತನೇ ತುತ್ತು ಅನ್ನಕ್ಕಾಗಿ ಹೋರಾಡುತ್ತಿದ್ದು,ಆವನು ಕಾನೂನು ಕೈಗೆತ್ತಿಕೊಳ್ಳುವ ಮುಖಾಂತರದೇಶದಲ್ಲಿ ಆಹಾರ ಹೋರಾಟ ನಡೆಯುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಎಚ್ಚರಿಸಿದರು.
ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮತ್ತು ಕೆಎನ್ ಎನ್ ಪ್ರಕಾಶ್ ಮಾತನಾಡಿ, ಟೊಮೆಟೋ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ, ಪ್ರತಿದಿನ ಮಾರುಕಟ್ಟೆಯಲ್ಲಿಹರಾಜು ಪ್ರಕ್ರಿಯೆ ಇಲ್ಲದ ಟೊಮೆಟೋ ಮಾಹಿತಿಯನ್ನು ಜಿಲ್ಲಾ ಧಿಕಾರಿಗಳ ಮುಖಾಂತರಸರ್ಕಾರಕ್ಕೆ ನೀಡಬೇಕು. ಇಲ್ಲವಾದರೆ ಕೋಲಾರಜಿಲ್ಲೆಯ ಟೊಮೆಟೋವನ್ನೇ ಸಂಪೂರ್ಣವಾಗಿ ನಿಷೇಧ ಮಾಡುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಹಿಡಿಯುವ ಪಕ್ಷಗಳು ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ. ಕೊರೊನಾ 2 ವರ್ಷಗಳ ದರ್ಬಾರಿಗೆ ರೈತರ ಬದುಕು ಬೀದಿಗೆ ಬಿದ್ದು ಮತ್ತೆ ಖಾಸಗಿ ಸಾಲ ಮಾಡಿ ಬೆಳೆದಿರುವ ಜಿಲ್ಲೆಯಸಾವಿರಾರು ಹೆಕ್ಟೇರ್ ಟೊಮೆಟೋ ಉತ್ತಮ ಫಸಲುಮಾರುಕಟ್ಟೆಗೆ ಬರುವ ಸಮಯದಲ್ಲಿ ಸಾವಿರಾರು ಬಾಕ್ಸ್‌ಗಳು ಹರಾಜು ಇಲ್ಲದೆ 20 ರಿಂದ 50ರೂಗೆಮಾರಾಟವಾಗುತ್ತಿರುವುದರಿಂದ ಹಾಕಿದ ಬಂಡವಾಳ ಕೈಗೆ ಸಿಗದೆ ಸರ್ಕಾರ ನೀಡುವ ಬೆಂಬಲಬೆಲೆಗಾಗಿ ರೈತರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸಿ ಪ್ರತಿ ಕೆ.ಜಿ.ಗೆ 10ರೂಪಾಯಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ ಮಾಡಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಗೊಬ್ಬರ ಕೀಟನಾಶಕಗಳಬೆಲೆ ದುಬಾರಿಯಾಗಿದ್ದು, ಕಾರ್ಮಿಕರ ವೆಚ್ಚಸೇರಿ 1 ಎಕರೆ ಟೊಮೆಟೋಗೆ ಕನಿಷ್ಠ 2 ಲಕ್ಷ ಬಂಡವಾಳ ಆಗುತ್ತದೆ. ಮಾರುಕಟ್ಟೆಯಲ್ಲಿ 1 ಬಾಕ್ಸ್‌ಗೆ 300 ರೂ.ಬೆಲೆ ಇದ್ದು, ಯಾವುದೇ ರೋಗವಿಲ್ಲದಿದ್ದರೆ ಹಾಕಿದಬಂಡವಾಳ ಕೈಗೆ ಸಿಗುತ್ತದೆ. ಇತ್ತೀಚೆಗೆ ಏಕಾಏಕಿ ಬೆಲೆ ಕುಸಿತ ಹಾಗೂ ಬೆಳೆಗೆ ಬಾ ಸುತ್ತಿರುವ ನುಸಿ, ಚುಕ್ಕೆ,ರೋಸ್, ಜಾಂಡೀಸ್‌ನಿಂದ ಮಾರುಕಟ್ಟೆಯಲ್ಲಿಟೊಮೆಟೋ ಹರಾಜು ಇಲ್ಲದೆ ರಸ್ತೆಗೆ ಚೆಲ್ಲಿರುವದೃಶ್ಯಗಳು ಜಿಲ್ಲಾಡಳಿತದ ಗಮನಕ್ಕೆ ಇದ್ದರೂಸಮಸ್ಯೆ ಗಂಬೀರವಾಗಿ ಪರಿಗಣಿಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಟೊಮೆಟೋ ಕ್ಯಾಪ್ಸಿಕಂಗೂ ಬೆಳೆ ವಿಮೆ ಅಗತ್ಯ: ವಿಮಾ ಕಂಪನಿಗಳು ಮಳೆಯಾಶ್ರಿತ ರಾಗಿ, ಜೋಳ,ತೊಗರಿ, ನೆಲಗಡಲೆ, ಬೆಳೆಗಳಿಗೆ ವಿಮೆ ಕಟ್ಟಿಸಿಕೊಂಡು ಲಕ್ಷಾಂತರ ರೂ. ಬಂಡವಾಳ ಹಾಕುವ ಟೊಮೆಟೋ ಕ್ಯಾಪ್ಸಿಕಂ ಮತ್ತಿತರರ ವಾಣಿಜ್ಯ ಬೆಳೆಗಳಿಗೆವಿಮೆಯನ್ನು ಕಟ್ಟಿಸಿಕೊಳ್ಳದೆ ಸರ್ಕಾರದ ದಿಕ್ಕುತಪ್ಪಿಸುತ್ತಿದ್ದಾರೆ. ಸಂಬಂಧಪಟ್ಟ ವಿಮಾ ಕಂಪನಿಗಳು, ರೈತರು ಅಧಿಕಾರಿಗಳ ಸಭೆ ಕರೆದು ವಾಣಿಜ್ಯ ಬೆಳೆಗಳಿಗೂ ವಿಮಾ ಪಾಲಿಸಿ ಕಡ್ಡಾಯ ಮಾಡುವ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮಿನಾ, ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ವರದಿ ತರಿಸಿಕೊಂಡು ಸರ್ಕಾರಕ್ಕೆ ಕಳುಹಿಸಿ ಬೆಂಬಲ ಬೆಲೆ ಜೊತೆಗೆ ಮಾರುಕಟ್ಟೆ ಜಾಗ ಹಾಗೂ ನಕಲಿ ಬಿತ್ತನೆ ಬೀಜ , ರಸಗೊಬ್ಬರಗಳ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ನೀಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಯುವ ರೈತ ಮುಖಂಡ ನಂಗಲಿ ಕಿಶೋರ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿಆಂಜಿನಪ್ಪ, ಮಾಸ್ತಿ ಯಲ್ಲಣ್ಣ, ಹರೀಶ್, ಚಂದ್ರಪ್ಪ, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್,ಮರಗಲ್ ಮುನಿಯಪ್ಪ, ಸಂದೀಪ್‌ರೆಡ್ಡಿ, ಸಂದೀಪ್ ಗೌಡ, ಅಜಯ್, ಮಣಿ, ರಂಜಿತ್, ಅಭಿಷೇಕ್, ಪಾರಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ನಾರಾಯಣಗೌಡ, ವೆಂಕಟೇಶಪ್ಪ, ಸುಪ್ರೀಂ ಚಲ ಇತರರು ಇದ್ದರು.
ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ :
ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆ ಜಾಗದ ಸಮಸ್ಯೆಯೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಟೊಮೆಟೋ ಖರೀದಿ ಮಾಡುವ ವ್ಯಾಪಾರಸ್ಥರು ಲೋಡ್ ಮಾಡಲು ಮಳೆ ಅಡ್ಡಿ ಹಾಗೂ ಟ್ರಾಫಿಕ್ ಸಮಸ್ಯೆಯಾದಾಗ 1 ಬಾಕ್ಸ್ ನ ಮೇಲೆ 100 ರೂ. ಬೆಲೆ ಕಡಿತವಾಗುತ್ತದೆ. ಈ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಇದ್ದರೂ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.