ನೇಗಿಲು ಭೂಮಿಗಿಳಿಸಿದ ಅನ್ನದಾತ

ತಾಲೂಕಿನಲ್ಲಿ ಸುರಿದ ಸಾಧಾರಣ ಮಳೆ • ಭೂಮಿ ಹದ ಮಾಡಲು ರೈತರು ಸಜ್ಜು

Team Udayavani, Apr 26, 2019, 2:42 PM IST

kolar-3-tdy..

ಎಂ.ರವಿಕುಮಾರ್‌

ಮಾಲೂರು: ತಾಲೂಕಿನ ಹಲವೆಡೆ ಮುಂಗಾರು ಪೂರ್ವ ಮಳೆ ಸಾಧಾರಣವಾಗಿ ಸುರಿದಿದ್ದು, ಕೆಲವು ರೈತರು ಮುಂಗಡವಾಗಿಯೇ ಭೂಮಿ ಹದ ಮಾಡಲು ಮುಂದಾಗಿದ್ದಾರೆ.

ತಾಲೂಕಿನ ಮಾಸ್ತಿ ಹೋಬಳಿಯಲ್ಲಿ 12.2 ಮಿ.ಮೀ., ಮಾಲೂರು ಪಟ್ಟಣ 3.2 ಮಿ.ಮೀ., ಟೇಕಲ್ನಲ್ಲಿ 25 ಮಿ.ಮೀ., ಲಕ್ಕೂರು 6 ಮಿ.ಮೀ. ಮಳೆಯಾಗಿದೆ. ಟೇಕಲ್ನ ಕೆಲವು ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಇದರಿಂದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ರಣ ಬಿಸಿಲಿಗೆ ಬೆಂದಿದ್ದ ಭೂಮಿ ತಂಪಾಗಿದೆ. ರೈತರ ಮೊಗದಲ್ಲೂ ಸಂತಸ ತರಿಸಿದೆ. ತಾಲೂಕಿನ ಮಾಸ್ತಿ, ಲಕ್ಕೂರು ಮತ್ತು ಚಿಕ್ಕತಿರುಪತಿ ಅಸುಪಾಸಿನಲ್ಲಿ ಮೂರು ನಾಲ್ಕು ದಿನಗಳಿಂದ ಸಾಧಾರಣ ಮಳೆಯಾದ್ದರಿಂದ ರೈತರು ಕೃಷಿಯತ್ತ ಮುಖಮಾಡುತ್ತಿದ್ದಾರೆ. ಎತ್ತುಗಳನ್ನು ಹೊಂದಿರುವ ರೈತರು ಸುಗ್ಗಿ ನಂತರ ಮೂಲೆ ಸೇರಿದ್ದ ನೇಗಿಲು, ಕೃಷಿ ಸಲಕರಣೆಗಳನ್ನು ಸರಿಪಡಿಸಿಕೊಂಡು ಉಳುಮೆಗೆ ಅಣಿಯಾಗುತ್ತಿದ್ದರೆ, ಇನ್ನು ಎತ್ತುಗಳಿಲ್ಲದ ರೈತರು, ಟ್ರ್ಯಾಕ್ಟರ್‌ಗಳಲ್ಲಿ ಗೇಯ್ಮೆ ಮಾಡಿಸಲು ಮುಂದಾಗಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಮೊದಲ ಉಳುಮೆ: ಮೊದಲ ಉಳುಮೆ ಟ್ರ್ಯಾಕ್ಟರ್‌ನಲ್ಲಿ ಮಾಡಿಸಿದರೆ, ಸಾಲುಗಳು ಆಳ ಮತ್ತು ಅಗಲವಾಗಿ ಬೀಳುವುದರಿಂದ ಮುಂದಿನ ದಿನಗಳಲ್ಲಿ ಕಡಿಮೆ ಮಳೆಯಾದ್ರೂ ಉಳುಮೆ ಮಾಡಲು ಅನುಕೂಲವಾಗುತ್ತದೆ ಹಾಗೂ ನೆಲವು ಹೆಚ್ಚು ನೀರು ಹಿಡಿದಿಟ್ಟುಕೊಳ್ಳುತ್ತದೆ. ಮುಂದೆ ಮಳೆ ಸ್ವಲ್ಪ ತಡವಾಗಿ ಬಂದ್ರೂ ಬೆಳೆಗಳು ಬೇಗ ಒಣಗುವುದಿಲ್ಲ. ಹೀಗಾಗಿ ಮೊದಲ ಉಳುಮೆ ರೈತರು ಟ್ರ್ಯಾಕ್ಟರ್‌ಗಳಲ್ಲಿ ಮಾಡಿಸುತ್ತಾರೆ. ತಾಲೂಕಿನ ಬಹುಪಾಲು ರೈತರು ಪ್ರಥಮ ಉಳುಮೆಗಾಗಿ ಟ್ರ್ಯಾಕ್ಟರ್‌ ಅವಲಂಬಿಸಿರುವ ಕಾರಣ ಬೇಡಿಕೆ ಹೆಚ್ಚುತ್ತಿದೆ. ತಾಲೂಕಿನ ಮಾಸ್ತಿ ಸುತ್ತಮುತ್ತಲಿನ ರೈತರಿಗೆ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಬಾಡಿಗೆ ಆಧಾರದಲ್ಲಿ ಕೃಷಿ ಉಪಕರಣ ಒದಗಿಸುತ್ತಿರುವುದು ಈ ಭಾಗದ ರೈತರಿಗೆ ಹೆಚ್ಚು ವರದಾನವಾಗಿದೆ. ಉಳಿದಂತೆ ಲಕ್ಕೂರು, ಟೇಕಲ್ ಮತ್ತು ಕಸಬಾ ಹೋಬಳಿಗಳಲ್ಲಿ ಖಾಸಗಿ ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಬೇಕಾಗಿದೆ.

ಮಳೆ ಆಶ್ರಿತ ಬೇಸಾಯ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಇದ್ದ ಬೋರ್‌ವೆಲ್ಗಳೂ ಬತ್ತಿಹೋಗಿವೆ. ಸಾಲ ಮಾಡಿ ಹೊಸದಾಗಿ 1750 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತೋಟಗಾರಿಕೆ ಬೆಳೆ ಕೈಬಿಟ್ಟ ರೈತರು, ಪ್ರಸ್ತುತ ಬೀಳುತ್ತಿರುವ ಅಲ್ಪ ಸ್ವಲ್ಪ ಮಳೆಯಿಂದ ಬೀಡು ತೋಟಗಳನ್ನು ಉಳಮೆ ಮಾಡಿ ಮಳೆ ಅಶ್ರಿತ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಈ ಬಾರಿ ತಾಲೂಕಿನಲ್ಲಿ ಕೃಷಿ ಭೂಮಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ನೀಲಗಿರಿ ನಿಷೇಧಿಸಿರುವುದರ ಜೊತೆಗೆ ಬೆಲೆಯೂ ಕಡಿಮೆಯಾದ್ದರಿಂದ ರೈತರು ಹತ್ತಾರು ವರ್ಷಗಳಿಂದ ಎಕರೆಗಟ್ಟಲೆ ಬೆಳೆದಿದ್ದ ನೀಲಗಿರಿ ತೆಗೆದು ಮಾವು, ಸಪೋಟ, ಸೀಬೆ ಹೀಗೆ ಹಣ್ಣಿನ ಬೇಸಾಯಕ್ಕೆ ಮುಂದಾಗುತ್ತಿದ್ದರೆ, ನೀರಿನ ಅನುಕೂಲವಿಲ್ಲದ ರೈತರು ಮಳೆ ಆಶ್ರಿತ ಬೇಸಾಯದಲ್ಲಿ ನಿರತರಾಗಿದ್ದಾರೆ.

ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯು ತಾಲೂಕಿನ ಲಕ್ಕೂರು, ಮಾಸ್ತಿ, ಚಿಕ್ಕತಿರುಪತಿ ಭಾಗದಲ್ಲಿ ಉತ್ತಮವಾಗಿ ಬಿದ್ದಿದ್ದು, ಕಸಬಾ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಸಾಧಾರಣವಾಗಿ, ಮಾಲೂರು ಪಟ್ಟಣದಲ್ಲಿ ಆಶಾದಾಯಕ ಮಳೆಯಾ ಗಿದೆ. ಇದರಿಂದ ಭೂಮಿ ತಂಪಾಗಿ ಬಿಸಿಲಿನ ಝಳ ಮತ್ತು ಧೂಳಿನಿಂದ ಸಾರ್ವಜನಿಕರಿಗೆ ಮುಕ್ತಿ ಸಿಕ್ಕಿದೆ.

ಎಳ್ಳು, ತೊಗರಿ ಬೇಸಾಯಕ್ಕೆ ಸಿದ್ಧತೆ:

ತಾಲೂಕಿನ ಮಾಸ್ತಿ ಹೋಬಳಿಯ ಕೆಲವು ರೈತರು ಅಶ್ವಿ‌ನಿ ಮಳೆಯಲ್ಲಿ ಹೊಲ ಉಳಮೆ ಮಾಡಿ, ಭರಣಿ ಮಳೆಯಲ್ಲಿ ಎಳ್ಳು ಬೇಸಾಯ ಮಾಡುತ್ತಾರೆ. ಕೆಲವು ರೈತರು ಈ ವೇಳೆ ಉಳಮೆ ಅರಂಭಿಸಿ ಮುಂದಿನ ಭರಣಿ, ಕೃತಿಕಾ ಮಳೆಗಳಲ್ಲಿ ತೊಗರಿ, ನೆಲಗಡಲೆ ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆ ಮಾಡುವುದರಿಂದ ಪ್ರಸ್ತುತ ಸುರಿದ ಮಳೆಯು ರೈತರ ಪಾಲಿಗೆ ವರದಾನವಾಗಿದೆ. ಮಾಸ್ತಿ, ಚಿಕ್ಕ ಇಗ್ಗಲೂರು, ದೊಡ್ಡ ಇಗ್ಗಲೂರು, ಬಾಳಿಗಾನಹಳ್ಳ ಲಕ್ಕೂರು ಹೋಬಳಿಯ ಮಿಣಸಂದ್ರ ತಾಳಕುಂಟೆ, ಕುಡಿಯನೂರು ಮತ್ತಿತರ ಕಡೆಗಳಲ್ಲಿ ಕೃಷಿ ಚುಟುವಟಿಕೆ ಭರದಿಂದ ನಡೆಯುತ್ತಿದೆ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.