ಬೀದಿಗೆ ಬಂದ ಕಮ್ಮಸಂದ್ರಕೋಟಿಲಿಂಗ ಜಗಳ
Team Udayavani, Feb 28, 2019, 11:15 AM IST
ಬಂಗಾರಪೇಟೆ: ಕಮ್ಮಸಂದ್ರದ ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಹಾಲಿ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಡಾ.ಶಿವ ಪ್ರಸಾದ್ ನಡುವೆ ಮುಸಕಿನ ಗುದ್ದಾಟ ದಿನೇ ದಿನೇ ತೀವ್ರಗೊಂಡಿದೆ. ಮಹಾಶಿವರಾತ್ರಿ ಪೂಜೆ ಸಂಬಂಧ ಇಬ್ಬರೂ ಪ್ರತ್ಯೇಕವಾಗಿ ಕರಪತ್ರಗಳನ್ನು ಹಂಚಿ ಪ್ರಚಾರ ಮಾಡುತ್ತಿದ್ದಾರೆ.
ದೇಗುಲ ಹಾಲಿ ಕಾರ್ಯದರ್ಶಿ ಕೆ.ವಿ.ಕುಮಾರಿ ಅವರು ಹೊರಡಿಸಿರುವ ಕರಪತ್ರದಲ್ಲಿ ದೇಗುಲ ಕಾರ್ಯದರ್ಶಿ ಹಾಗೂ ಉತ್ತರಾಧಿಕಾರಿ ಎಂಬ ಹೆಸರಿದೆ. ಇನ್ನು ಶ್ರೀಗಳ ಪುತ್ರ ಶಿವಪ್ರಸಾದ್ ಅವರ ಕರಪತ್ರದಲ್ಲಿ ಧರ್ಮಾಧಿಕಾರಿ ಎಂಬ ಹೆಸರಿದೆ. ಇದರಿಂದಾಗಿ ಈ ಇಬ್ಬರ ಮುಸುಕಿನ ಗುದ್ದಾಟದಿಂದ ಮಾ.2ರಿಂದ 6 ರವರೆಗೆ ನಡೆ ಯುವ ಮಹಾ ಶಿವರಾತ್ರಿ ಪೂಜೆ ದೇಗುಲದಲ್ಲಿ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಭಕ್ತರಿದ್ದಾರೆ.
ಹಸ್ತಕ್ಷೇಪ: ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದ ಧರ್ಮಾಧಿಕಾರಿಯಾಗಿದ್ದ ಶ್ರೀಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿ ಲಿಂಗೈಕ್ಯರಾದ ನಂತರ, ದೇಗುಲದ ಸಮಸ್ತ ಆಡಳಿತ ನಡೆಸಲು ದೇಗುಲದ ಹಾಲಿ ಕಾರ್ಯದರ್ಶಿ ಕೆ.ವಿ.ಕುಮಾರಿ ಹೆಸರಿಗೆ 2004 ರಲ್ಲಿ ವಿಲ್ ಬರೆದಿದ್ದರೂ ಶ್ರೀಗಳ ಪುತ್ರ ಶಿವಪ್ರಸಾದ್ ತಂದೆ ಆಸ್ತಿ ಮಗನಿಗೆ ಸೇರಬೇಕೆಂಬ ವಾದದಿಂದ ದೇಗುಲದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾ ರೆಂದು ಭಕ್ತರು ತಿಳಿಸಿದ್ದು ಇದರಿಂದಾಗಿ ದೇಗುಲದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ.
ಆರೋಪ: ಶ್ರೀಕೋಟಿಲಿಂಗ ದೇಗುಲದಲ್ಲಿ ಮುಖ್ಯವಾಗಿ 10 ಮಂದಿ ಅರ್ಚಕರು ಹಾಗೂ 40 ದಿನಸಿ ಅಂಗಡಿ ಗಳನ್ನು ನಡೆಸುತ್ತಿರುವವರಿಗೆ ಪ್ರತಿ ನಿತ್ಯ ಮಾಡುವ ಕೆಲಸದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ. ಅರ್ಚಕರ ಮೇಲೆ ಶ್ರೀಗಳ ಪುತ್ರ ಶಿವಪ್ರಸಾದ್ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಂಗಡಿ ಬಾಡಿಗೆದಾರರ ಮೇಲೆಯೂ ಒತ್ತಡ ತಂದು ತನ್ನ ಮಾತು ಕೇಳದೇ ಇದ್ದಲ್ಲಿ ಜಾಗ ಖಾಲಿ ಮಾಡುವಂತೆ ಶ್ರೀಗಳ ಪುತ್ರ ಶಿವಪ್ರಸಾದ್ ಎಚ್ಚರಿಕೆ ನೀಡು ತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ತಿರುಗಿಬಿದ್ದ ಅರ್ಚಕರು: ಸುಮಾರು 30 ವರ್ಷ ಗಳಿಂದಲೂ ಕೆ.ವಿ.ಕುಮಾರಿ ಅವರೊಂದಿಗೆ ವಿಶ್ವಾಸ ಇಟ್ಟುಕೊಂಡಿದ್ದ ಅರ್ಚಕರು ಇದ್ದಕ್ಕಿದ್ದಂತೆಯೇ ಕೆ.ವಿ. ಕುಮಾರಿ ವಿರುದ್ಧ ತಿರುಗಿ ಬಿದ್ದಿದ್ದಾರೆಂದು ಹೇಳ ಲಾಗಿದೆ. ಅರ್ಚಕರು ಪ್ರತಿ ತಿಂಗಳು 1.50 ಲಕ್ಷ ರೂ. ಬರುವ ಆದಾಯದಲ್ಲಿ ಟ್ರಸ್ಟ್‌ಗೆ ನೀಡಬೇಕಾಗಿರು ವುದಕ್ಕೆ ಶಿವಪ್ರಸಾದ್ ಬೋನಸ್ ಆಗಿ ಅರ್ಚಕರಿಗೆ ನೀಡುತ್ತಿರುವುದರಿಂದ ಅರ್ಚಕರು ಕೆ.ವಿ.ಕುಮಾರಿ ವಿರುದ್ಧ ಸಿಡಿದೆದ್ದಿದ್ದಾರೆಂದು ಭಕ್ತರು ಆರೋಪಿಸಿದ್ದಾರೆ.
ಕಮ್ಮಸಂದ್ರದ ಶ್ರೀಕೋಟಿಲಿಂಗ ದೇವಾಲಯದ ಧರ್ಮಾಧಿಕಾರಿಗಳಾಗಿದ್ದ ಸಾಂಭವಶಿವಮೂರ್ತಿ ಶ್ರೀಗಳ ಪುತ್ರ ಶಿವಪ್ರಸಾದ್ 30 ವರ್ಷಗಳಿಂದಲೂ ಶ್ರೀಗಳಿಗೆ ವಿರುದ್ಧರಾಗಿದ್ದು, ಶ್ರೀಗಳು ಲಿಂಗೈಕ್ಯರಾದ ನಂತರ, ಏಕಾಏಕಿ ತಾನೇ ದೇಗುಲದ ವಾರಸುದಾರ ರಾಗಿದ್ದೇನೆಂಬ ವಿಚಾರ ವನ್ನು ಊರೂರು ಸುತ್ತಿ ಪ್ರಚಾರ ಮಾಡುತ್ತಿದ್ದಾರೆ.
2016 ನ.22ರಂದು ಶ್ರೀಗಳ ಪುತ್ರಿ ಕೆ.ಅನುರಾಧ ಬಂಗಾರಪೇಟೆ ಉಪನೋಂದಣಾಧಿಕಾರಿಗಳ ಕಚೇರಿಗೆ ಸ್ವತಃ ಬಂದು ಸ್ವಾಮೀಜಿಗಳೊಂದಿಗೆ ಯಾವುದೇ ಸಂಬಂಧ ವಿಲ್ಲ. ಶ್ರೀಕೋಟಿಲಿಂಗ ಸೇರಿದಂತೆ ಸ್ವಾಮೀಜಿಗಳ ಹೆಸರಿನಲ್ಲಿರುವ ಆಸ್ತಿಗಳ ಸಂಬಂಧವಿಲ್ಲ ಎಂದು ಹಾಗೂ ಈ ಹಿಂದೆ ಬೆಂಗಳೂರಿನಲ್ಲಿ ಬಿಡಿಎ ಸೈಟ್, ಬನ ಶಂಕರಿಯಲ್ಲಿ ವಾಸದ ಮನೆ ದಾನವಾಗಿ ಪಡೆದಿದ್ದು, ಪ್ರಸ್ತುತ 50 ಸಾವಿರ ನಗದು ಪಡೆದು ಹಕ್ಕು ಬಿಡುಗಡೆ ಪತ್ರ ನೋಂದಣಿ ಮಾಡಿಸಿದ್ದಾರೆ. ಪ್ರಸ್ತುತ ದೇಗುಲದಲ್ಲಿ ಪ್ರತಿ ದಿನ ಬರುವ ಆದಾಯವನ್ನು ವಸೂಲಿ ಮಾಡುತ್ತಿರುವುದರಿಂದ ದೇಗುಲವನ್ನು ಕೇಳು ವವರೇ ಇಲ್ಲದಂತಾಗಿದೆ.
ದೇಗುಲದಲ್ಲಿ ಪ್ರತಿ ತಿಂಗಳಿಗೊಮ್ಮೆ 10 ರಿಂದ 12 ಲಕ್ಷ ಆದಾಯ ಬರಲಿದ್ದು, ಎರಡು ತಿಂಗಳಿನಿಂದ ದೇಗುಲದಲ್ಲಿ ಯಾವುದೇ ಅಭಿವೃದ್ಧಿಯಾಗದೇ ಇದ್ದರೂ ಡಾ. ಶಿವಪ್ರಸಾದ್ ಹಾಗೂ ಕೆ.ಅನುರಾಧ ವಸೂಲಿ ಮಾಡಿಕೊಂಡು ಏನು ಮಾಡುತ್ತಿದ್ದಾರೆಂಬುದೇ ಗೊತ್ತಾಗುತ್ತಿಲ್ಲ.
ಕಾರ್ಯದರ್ಶಿ ಕೆ.ವಿ.ಕುಮಾರಿ ಅವರಿಗೆ ಈ ಹಿಂದೆ ಬಾಡಿಗೆ ದಾರರು, ಅರ್ಚಕರು, ಟಿಕೆಟ್ ವಸೂಲಿ ನೀಡುತ್ತಿದ್ದ ಹಣ ಪ್ರಸ್ತುತ ಏನಾಗುತ್ತಿದೆ ಎಂಬುದು ಅನುಮಾನಕ್ಕೆಡೆ ಮಾಡಿದೆ. ಶ್ರೀಕೋಟಿಲಿಂಗ ಉತ್ತರಾಧಿಕಾರಕ್ಕಾಗಿ ನಡೆಯು ತ್ತಿರುವ ಶೀಥಲ ಸಮರದಿಂದ ಮುಂದೆ ದೇಗುಲದ ಮುನ್ನಡೆಗೆ ಯಾವ ಪರಿಸ್ಥಿತಿ ಎದುರಾಗಲಿದೆಯೋ ಕಾದುನೋಡಬೇಕಾಗಿದೆ.
ಭಕ್ತರ ಅಸಮಾಧಾನವೇಕೆ?
ಶ್ರೀಗಳ ಪುತ್ರ ಶಿವಪ್ರಸಾದ್ ತಾನೇ ಧರ್ಮಾಧಿಕಾರಿ ಎಂದು ಜಾತ್ರಾ ಮಹೋತ್ಸವದ ಕರಪತ್ರಗಳನ್ನು ಪ್ರಕಟಣೆ ಮಾಡಿ ಕಮ್ಮಸಂದ್ರ ಗ್ರಾಪಂ ಸುತ್ತಲೂ ಹಂಚಿಕೆ ಮಾಡುತ್ತಿದ್ದಾರೆ. ಇತ್ತ ಕಾರ್ಯದರ್ಶಿ ಕೆ.ವಿ.ಕುಮಾರಿ ಶ್ರೀಗಳು ಅಧ್ಯಕ್ಷರಾಗಿದ್ದ ಶ್ರೀಕೋಟಿ ಲಿಂಗ ದೇವಾಲಯ ಸೇವಾ ಟ್ರಸ್ಟ್‌ಗೆ ಸ್ವಾಮೀಜಿಗಳ ಸಹೋದರ ಕೆ.ಎನ್ .ನಾರಾಯಣಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿ, ಜಾತ್ರೆ ನಡೆಸಲು ಕರಪತ್ರ ಹಂಚಿಕೆ ಮಾಡುತ್ತಿದ್ದಾರೆ. ಕರಪತ್ರದಲ್ಲಿ ಒಂದೇ ವಿಷಯವಿದ್ದರೂ ಪ್ರತ್ಯೇಕವಾಗಿ ಕರಪತ್ರ ಹಂಚಿಕೆ ಮಾಡುತ್ತಿರುವುದರಿಂದ ಭಕ್ತಾದಿಗಳಲ್ಲಿ ಗೊಂದಲ ಶುರುವಾಗಿದೆ.
ಕಾನೂನು ಪರಿಶೀಲಿಸಿದ ನಂತರ ಕ್ರಮ ಕಮ್ಮಸಂದ್ರದ ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಗಲಾಟೆ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಗೊಂದಲ ಸೃಷ್ಟಿಯಾಗಿ ಭಕ್ತಾದಿಗಳಿಗೆ ತೊಂದರೆ ಯಾದರೆ ಸರ್ಕಾರವೇ ಮಧ್ಯಪ್ರವೇಶಿಸುವುದರ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು. ದೇಗುಲದಲ್ಲಿ ಉತ್ತರಾಧಿಕಾರಕ್ಕಾಗಿ ಜಗಳ ನಡೆಯುತ್ತಿರುವುದರಿಂದ ಕೆಲವರು ಮುಜ ರಾಯಿ ಇಲಾಖೆಗೆ ಸೇರಿಸುವಂತೆ
ಮನವಿ ನೀಡಿದ್ದಾರೆ. ಈ ಬಗ್ಗೆ ಮುಜರಾಯಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಬಗ್ಗೆ ಇರುವ ಕಾನೂನು ಬಗ್ಗೆ ಪರಿಶೀಲನೆ ನಡೆಸಿ ಅನಂತರ ಕ್ರಮಕೈಗೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.