8000 ಮಂದಿಗೆ ಆಹಾರದ ಕಿಟ್ ವಿತರಣೆ
Team Udayavani, Jun 7, 2021, 7:55 PM IST
ಕೆಜಿಎಫ್: ಕೋವಿಡ್ 2ನೇ ಅಲೆಸಂದರ್ಭದಲ್ಲಿ ಸಮುದಾಯದ 8000ಮಂದಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ಕರ್ನಾಟಕ ಬ್ರಾಹ್ಮಣಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹೇಳಿದರು.
ಬೆಮಲ್ ನಗರದ ಗಾಯತ್ರಿ ಮಂದಿರದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿ, ಕೊರೊನಾ ಸಮಯದಲ್ಲಿ ತೀವ್ರಸಂಕಷ್ಟದಲ್ಲಿರುವ ಬ್ರಾಹ್ಮಣ ಸಮುದಾಯದವರಿಗೆ ಸಹಾಯ ಮಾಡಲು ಇತರೆವರ್ಗದವರು, ರಾಜಕೀಯ ಮುಖಂಡರುಮುಂದೆ ಬಂದಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿರುವ ಬ್ರಾಹ್ಮಣರು ತಮ್ಮ ಸಹಜ ವೃತ್ತಿಯನ್ನು ನಡೆಸಲಾಗದೆ ಕಷ್ಟ ಪಡುತ್ತಿದ್ದರು. ಅವರಿಗೆ ಅಭಿವೃದ್ಧಿ ಮಂಡಳಿಯಿಂದ ಆಹಾರ ಕಿಟ್ ನೀಡುವುದು ಬೇಡ ಎಂದುಸರ್ಕಾರದ ಅಧಿಕಾರಿಗಳು ಸೂಚಿಸಿದ್ದರಿಂದ,ದಾನಿ ಗಳಿಂದ ಪಡೆಯಲಾಗುತ್ತಿದೆಎಂದರು. ಬೈರತಿ ಬಸವರಾಜ್,ಗೋಪಾಲಯ್ಯ ಮೊದಲಾದ ಸಚಿವರುಉದಾರವಾಗಿ ಸಹಕಾರ ನೀಡಿದ್ದಾರೆ.
ಇತರೆಸಮುದಾಯದವರು ಕೂಡ ಸೌಲಭ್ಯಕೊಟ್ಟಿದ್ದಾರೆ. ಮಂಡಳಿಯಿಂದ 8000 ವಿದ್ಯಾರ್ಥಿಗಳಿಗೆ ವೇತನ, ನವದೆಹಲಿಯಲ್ಲಿಐಎಎಸ್ ತರಬೇತಿ ಶಿಬಿರ ನಡೆಸಲಾಗುತ್ತಿದ್ದು,ಈ ಬಾರಿ ಕನಿಷ್ಠ 35 ಮಂದಿ ಐಎಎಸ್‌ಅಧಿಕಾರಿಗಳಾಗುವ ವಿಶ್ವಾಸ ಇದೆ. ಬಡವರಿಗೆ 1000 ಮನೆ ನೀಡಲು ಅರ್ಜಿಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.ಮಂಡಳಿಯ ನಿರ್ದೇಶಕಿ ವತ್ಸಲಾ,ಬೆಮಲ್ ಬ್ರಾಹ್ಮಣ ಸಂಘದ ಅಧ್ಯಕ್ಷಶೇಷಗಿರಿರಾವ್ ಮಾತನಾಡಿದರು.ವೆಂಕಟೇಶಮೂರ್ತಿ ಸ್ವಾಗತಿಸಿದರು.ಕೆ.ಪಿ.ಸುರೇಶ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.