ಬೆಲೆ ಇಲದೇ ಟೊಮೆಟೋ ಗುಂಡಿಗೆ
Team Udayavani, May 2, 2021, 6:48 PM IST
ಕೋಲಾರ: ಕೊರೊನಾ 2ನೇ ಅಲೆಯಿಂದಜೀವಕ್ಕೆ ಮಾತ್ರವಲ್ಲ ರೈತರ ಆರ್ಥಿಕತೆಗೂ ಪೆಟ್ಟುಬಿದ್ದಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳಿಗೆಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ಮಕ್ಕಳಂತೆಪೋಷಿಸಿದ ಬೆಳೆಯನ್ನೇ ಬುಡ ಸಮೇತನಾಶಪಡಿಸುವ ದುಸ್ಥಿತಿ ಅನ್ನದಾತನದ್ದಾಗಿದೆ.
ಜಿಲ್ಲೆಯಲ್ಲಿ ಬೆಳೆದಿರುವ ಬೆಳೆಗಳಿಗೆ ಸಮರ್ಪಕಬೆಲೆ ದೊರೆಯದೆ ರೈತರು ಬೆಳೆಯನ್ನೇ ನಾಶಪಡಿಸುತ್ತಿದ್ದಾರೆ. ಕೊರೊನಾ ಸೋಂಕಿತ ಪ್ರಕರಣಗಳು ದಿನೇದಿನೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿಸೋಂಕು ತಡೆಗಟ್ಟಲು ರಾಜ್ಯದಲ್ಲಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಲಾಕ್‌ಡೌನ್‌ನಡುವೆಯೂ ಸರ್ಕಾರವೇನೋ ರೈತರಿಗೆತೊಂದರೆಯಾಗದಿರಲಿ ಎಂದು ಎಪಿ ಎಂಸಿಮಾರುಕಟ್ಟೆಗಳಲ್ಲಿ ಬೆಳಗ್ಗೆ ನಾಲ್ಕು ಗಂಟೆ ಮಾತ್ರವೇವಹಿವಾಟಿಗೆ ಅವಕಾಶ ಕಲ್ಪಿಸಿದೆ.
ಆದರೆ, ರೈತರುಮಾರುಕಟ್ಟೆಗೆ ತರಕಾರಿ ಕೊಂಡೊ ಯ್ದರೆ ಅಲ್ಲಿಕೊಳ್ಳುವವರೇ ಇಲ್ಲ. ಹೊರ ರಾಜ್ಯ, ಜಿಲ್ಲೆಗಳವ್ಯಾಪಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ, ಹೊರರಾಜ್ಯಗಳಿಗೆ ತರಕಾರಿ ಸರಬರಾಜುಸಮರ್ಪಕವಾಗಿರದ ಕಾರಣ ಬೆಲೆಯಿಲ್ಲದೇ ರೈತಕಂಗಾಲಾಗುವಂತಾಗಿದೆ.ಕೋಲಾರ ತಾಲೂಕು ವ್ಯಾಪ್ತಿಯಲ್ಲಿಟೊಮೆಟೋ, ಕ್ಯಾಪ್ಸಿಕಂ, ಕ್ಯಾರೆಟ್, ಬೀಟ್‌ರೋಟ್, ಕೋಸು, ಬೀನ್ಸ್ ಸೇರಿದಂತೆ ವಿವಿಧ ತರಕಾರಿ ಬೆಳೆಯಲಾಗಿದೆ.
ಕರ್ಫ್ಯೂಗೂ ಮುಂಚೆಇದ್ದ ಬೆಲೆ ಈಗ ಇಲ್ಲದಾಗಿದೆ. ರೈತರು ಬೆಳೆಯಮೇಲೆ ಹಾಕಿರುವ ಬಂಡವಾಳ ಸಂಪಾದನೆಮಾಡುವುದು ಕಷ್ಟವಾಗಿದೆ. ಇದರಿಂದ ರೈತರುನಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಪಾಲಿಹೌಸ್ನಲ್ಲಿನ ಕ್ಯಾಪ್ಸಿಕಾಂ ನಾಶ: ತಾಲೂಕಿನಕೋಟಿಗಾನಹಳ್ಳಿ ರೈತ ಚಲಪತಿ ಒಂದು ಎಕರೆಪಾಲಿಹೌಸ್‌ನಲ್ಲಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆತೆಗೆಯಲು 2 ಲಕ್ಷ ರೂ. ವೆಚ್ಚ ಮಾಡಿದ್ದರು.ಎರಡು ತಿಂಗಳಿಂದ ಫಸಲು ಕೊಯ್ಲು ಮಾಡುತ್ತಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ದೊರೆತಿಲ್ಲ.ಇದರಿಂದ ಹಾಕಿರುವ ಬಂಡವಾಳದಲ್ಲಿ ಅರ್ಧದಷ್ಟು ತೆಗೆಯಲು ಸಾಧ್ಯವಾಗದೆ, ಸೊಂಪಾಗಿಬೆಳೆದಿರುವ ಗಿಡಗಳನ್ನು ಕೈಯಾರೆ ನಾಶಪಡಿಸುತ್ತಿರುವುದು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಟೊಮೆಟೋ ಗುಂಡಿ ಪಾಲು: ಸುಗಟೂರುಸಮೀಪದ ಗ್ರಾಮದಲ್ಲಿ ರೈತರೊಬ್ಬರು ತಾವು ಬೆಳೆದಟೊಮೆಟೋವನ್ನು ಎಪಿಎಂಸಿ ಮಾರು ಕಟ್ಟೆಗೆತಾರದೆ ಗ್ರಾಮದ ಸಮೀಪದ ಗುಂಡಿ ಯೊಂದಕ್ಕೆಟ್ರ್ಯಾಕ್ಟರ್‌ನಲ್ಲಿ ತಂದು ಸುರಿ ಯುತ್ತಿರುವ ದೃಶ್ಯಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.
ಪರಿಹಾರ ಒದಗಿಸಿ: ಕಳೆದ ವರ್ಷ ಕೊರೊನಾಸಂಕಷ್ಟದಲ್ಲಿ ಬೆಳೆಗಳನ್ನು ನಾಶ ಮಾಡಿದಾಗತೋಟಗಾರಿಕೆ ಇಲಾಖೆಯಿಂದ ಅರ್ಜಿಗಳನ್ನುಕರೆದು ಪರಿಹಾರ ಕಲ್ಪಿಸಲಾಗಿತ್ತು. ಸರ್ಕಾರಹೀಗಲೂ ಅರ್ಜಿಗಳನ್ನು ಕರೆದು ನಷ್ಟಕ್ಕೆಒಳಗಾಗಿರುವ ರೈತರಿಗೆ ಪರಿಹಾರ ಕಲ್ಪಿಸಬೇಕುಎಂಬುದು ರೈತರ ಒತ್ತಾಯವಾಗಿದೆ.ಕೋಟಿಗಾನಹಳ್ಳಿ ರೈತ ಚಲಪತಿ ಮಾತನಾಡಿ,ಒಂದು ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆಯಲಾಗಿದ್ದು, ಕೊರೊನಾ ಸೋಂಕಿನ ಹಾವಳಿಯಿಂದಮಾರುಕಟ್ಟೆಯಲ್ಲಿ ಬೆಲೆ ದೊರೆಯುತ್ತಿಲ್ಲ.
ಬೆಳೆಗೆಪ್ರತಿ ವಾರ ಮೂರು ಬಾರಿ ಔಷಧಿ ಸಿಂಪಂಡಣೆಮಾಡಬೇಕು. ಅದಕ್ಕೂ ಹಣ ಬರುವುದಿಲ್ಲ. ಹಾಗೆಬಿಟ್ಟರೆ ಪಕ್ಕದಲ್ಲಿನ ಟೊಮೆಟೋ ಬೆಳೆಗೆ ರೋಗತಗಲುವ ಅವಕಾಶ ಇದೆ.ಇದರಿಂದ ಬೆಳೆಯನ್ನು ನಾಶಪಡಿಸುತ್ತಿರುವುದಾಗಿತಮ್ಮ ನೋವು ತೋಡಿ ಕೊಂಡರು.
ಗ್ರಾಮಪಂಚಾಯಿತಿ ಮಾಜಿ ಸದಸ್ಯ ಕೋಟಿಗಾನಹಳ್ಳಿಗಣೇಶ್‌ಗೌಡ ಮಾತನಾಡಿ, ಒಂದು ವರ್ಷದಿಂದರೈತರು ಕೊರೊನಾ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿನಷ್ಟಕ್ಕೆ ಒಳಗಾಗಿದ್ದಾರೆ. ನಷ್ಟಕ್ಕೆ ಒಳಗಾಗಿರುವ ರೈತರಿಗೆಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಬೇಕುಎಂದು ಒತ್ತಾಯಿಸಿದರು.
ಒಂದು ವರ್ಷದಿಂದ ಕೊರೊನಾ ರೈತರನ್ನುಕಾಡುತ್ತಿದೆ. ಎಪಿಎಂಸಿಯ ಆಡಳಿತ ಮಂಡಳಿಯವರು ಇತ್ತ ಗಮನ ಹರಿಸದೆ ಇರುವುದುನಾಚೀಕೆಗೇಡಿನ ಸಂಗತಿ. ರೈತರ ಹಿತಕ್ಕಿಂತ ಅವರಸ್ವಹಿತಾಸಕ್ತಿಯೇ ಮುಖ್ಯವಾಗಿದೆ ಎಂದುಆರೋಪಿಸಿದರು. ರಾಜ್ಯದಲ್ಲಿ ಎರಡನೇ ಅಲೆಕೊರೊನಾ ಸೋಂಕು ಅರ್ಭಟ ಜನರನ್ನು ಬೆಚ್ಚಿಬೀಳಿಸಿದೆ. ಇದರಿಂದ ರೈತರು ಸುಧಾರಣೆಯಾಗಲು ಸಾಧ್ಯವಾಗಿಲ್ಲ.
ಸರ್ಕಾರ ಎಚ್ಚೆತ್ತು ಕೊಂಡು ರೈತರ ಬೆಳೆಗಳನ್ನುಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಬೇಕು.ಖರೀದಿ ದಾರರನ್ನು ರೈತರ ತೋಟಗಳಿಗೆ ಕಳುಹಿಸಿಖರೀದಿ ಮಾಡುವ ವ್ಯವಸ್ಥೆಯನ್ನು ಎಪಿಎಂಸಿ,ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳುಮಾಡಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.