![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 4, 2022, 8:29 PM IST
ಕೋಲಾರ: ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರೇ ನಿರ್ಣಾಯಕರಾಗಿದ್ದರೂ, ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕಾರಣ ದಲಿತರ ಕೈ ಜಾರುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ವಿಷಾದಿಸಿದರು.
ನಗರದ ಗಲ್‌ಪೇಟೆಯಲ್ಲಿ ದಲಿತ ಸಮುದಾಯದ ಖಾಸಗಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಸನ್ಮಾನ ಸ್ಪೀಕರಿಸಿ ಮಾತನಾಡಿ, ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರು ಒಗ್ಗಟ್ಟಾಗಿ ಮತ ಚಲಾಯಿಸಿದರೆ ರಾಜಕೀಯ ಕೀಲಿ ಕೈ ಹಿಡಿಯಲು ಸಾಧ್ಯವಾಗುತ್ತದೆ, ದಲಿತರು ಒಂದಾಗಬೇಕಿದೆ ಎಂದರು.
ಹಳ್ಳಿ ಮತ್ತು ಕೇರಿಗಳು ಒಂದಾಗುವವರೆಗೂ ಸಮಾನತೆಯ ಹೋರಾಟ ಮುಂದುವರಿಸಬೇಕು ಎಂದು ಪ್ರತಿಪಾದಿಸಿದ ಅವರು, ಹಲವು ಹೋರಾಟಗಳಿಗೆ ನಾಂದಿ ಹಾಡಿರುವ ಕೋಲಾರ ಜಿಲ್ಲೆಯಿಂದಲೇ ಈ ಹೋರಾಟವನ್ನು ತಾವೇ ಮುಂದೆ ನಿಂತು ಮುನ್ನಡೆಸುವುದಾಗಿ ಘೋಷಿಸಿದರು.
ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಅಮೃತಮಹೋತ್ಸವ ಭಾಷಣದಲ್ಲಿ ತಮಗೆ ಮಹಿಳೆಯರ ಮೇಲೆ ಗೌರವವಿದೆಯೆಂದು ಹೇಳಿದ ಮೋದಿಯವರು, ತಮ್ಮದೇ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ನೆಪದಲ್ಲಿ ಬಿಡುಗಡೆ ಮಾಡಿ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಿದ್ದಾರೆ. ಇಂತವರಿಗೆ ಮಹಿಳೆ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಿರುವ ಸಂವಿಧಾನದ ಮೇಲೆ ಹೇಗೆ ಗೌರವ ಇರಲು ಸಾಧ್ಯ ಎಂದು ಪ್ರಶ್ನಿಸಿದರು.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.