ಸರ್ಕಾರಿ ಭೂಮಿ ಒತ್ತುವರಿ: ಲೇಔಟ್‌ ನಿರ್ಮಾಣ


Team Udayavani, Dec 27, 2022, 2:36 PM IST

tdy-15

ಬಂಗಾರಪೇಟೆ: ಸರ್ಕಾರಿ ಖರಾಬ್‌ ಜಮೀನುಗಳ ಮೇಲೆ ಭೂಗಳ್ಳರ ಕಣ್ಣುಬಿದ್ದಿದ್ದು, ಎಲ್ಲಲ್ಲಿ ಸರ್ಕಾರದ ಗೋಮಾಳ ಜಮೀನುಗಳಿದೆಯೋ ಅಕ್ಕಪಕ್ಕದಲ್ಲಿರುವ ಭೂ ಮಾಫಿಯಾ ಕೈಹಾಕಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಕ್ರಮ ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಕಂದಾಯ ಇಲಾಖೆಯು ಬ್ರೇಕ್‌ ಹಾಕದೇ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿ ನಗರಗಳಲ್ಲಿ ಸರ್ಕಾರದ ಜಮೀನು ಭೂ ಕಬಳಿಕೆ ಆಗುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಡಿ.ಕೆ. ಹಳ್ಳಿ ಫ್ಲಾಂಟೇಶನ್‌ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೆ ನಂ. 58ರಲ್ಲಿ ಸರ್ಕಾರದ ಖರಾಬು 11.09 ಎಕರೆ ಭೂ ಪ್ರದೇಶವನ್ನು ಹೊಂದಿದೆ ಎಂದು ಕಂದಾಯ ಇಲಾಖೆಯು ಆನ್‌ಲೈನ್‌ನ ತನ್ನ ವೆಬ್‌ಸೈಟ್‌ನಲ್ಲಿ ತೋರಿಸುತ್ತಿದೆ. ಆದರೆ, ಈ ಅಳತೆ ಜಮೀನು ರಾತ್ರೋರಾತ್ರಿ ಮಾಯವಾಗುತ್ತಿದೆ.

ಸರ್ವೆ ನಂ. 58ರಲ್ಲಿ 11.09 ಎಕರೆ ಜಮೀನಿನಲ್ಲಿ ಎಲ್ಲವೂ ಖಾಲಿಯಾಗಿದೆ. ಇದರಲ್ಲಿ ಉಳಿದಿರುವುದು ಕೇವಲ ಬೃಹತ್‌ ಗಾತ್ರದ ರಾಜಕಾಲುವೆ ಒಂದೇ. ಇದರಲ್ಲೂ ಕೆಲವು ಕಡೆ ಒತ್ತುವರಿ ನಡೆದಿದ್ದು, ಅಕ್ರಮ ಲೇಔಟ್‌ ಮಾಡಿಕೊಂಡು ನಿವೇಶನಗಳನ್ನು ಮಾಡಿ ಗ್ರಾಪಂನಲ್ಲಿ ಇ-ಸ್ವತ್ತು ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ತಾಲೂಕಿನ ಡಿಕೆ ಹಳ್ಳಿ ಗ್ರಾಪಂಗೆ ಸೇರಿದ ಫ್ಲಾಂಟೇ ಶನ್‌, ಎಚ್‌.ಪಿ.ನಗರ ಸೇರಿದಂತೆ ಕೆಲವು ನಗರಗಳಲ್ಲಿ ಭೂ ಮಾಫಿಯಾದವರು ಅಕ್ರಮವಾಗಿ 1950 ಸಾಲಿನ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳ ಕುಮ್ಮಕ್ಕಿನಿಂದ ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರದ ಗೋಮಾಳ ಹಾಗೂ ಖರಾಬು ಜಮೀನುಗಳು ಪೂರ್ಣವಾಗಿ ಮಾಯವಾಗಿವೆ.

ಸರ್ವೆ ನಂ.58ರಲ್ಲಿ ಮಾತ್ರ 11.09 ಎಕರೆ ಜಮೀನು ಇರುವ ಬಗ್ಗ ದಾಖಲೆಗಳಿದ್ದರೂ ಜಮೀನೆಲ್ಲವೂ ಮಾಯವಾಗಿದೆ. ಇತ್ತೀಚೆಗೆ ಭೂ ಮಾಫಿಯಾ ತಂಡ ವೊಂದು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಎಚ್‌.ಪಿ.ನಗರದಲ್ಲಿ ಹಾದುಹೋಗುವ ಅಗಲ ವಾಗಿರುವ ರಾಜಕಾಲುವೆಯನ್ನು ಕೆಡವಿ ಸಮದಟ್ಟು ಮಾಡುತ್ತಿದ್ದಾರೆ. ಪುರಾತನ ಕಾಲದಲ್ಲಿ ರಾಜಕಾಲುವೆಗೆ ಹೂಳು ಬರದಂತೆ ಅಡ್ಡವಾಗಿ ಹಾಕಲಾಗಿದ್ದ ಕಲ್ಲು ಬಂಡೆಗಳನ್ನು ಸಿಡಿಸಿ ತೆರವು ಮಾಡಿದ್ದರೂ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಕ್ರಮ ಒತ್ತುವರಿ ಮಾಡುತ್ತಿರುವುದಕ್ಕೆ ನಿಲ್ಲಿಸುವ ಗೋಜಿಗೆ ಹೋಗಲೇ ಇಲ್ಲ ಎಂದು ಸ್ಥಳೀಯ ಸಾರ್ವಜನಿಕರ ಆರೋಪವಾಗಿದೆ. ಈ ರಾಜಕಾಲುವೆಯಲ್ಲಿ ಅಕ್ರಮ ಲೇಔಟ್‌ ಮಾಡುವ ಉದ್ದೇಶದಿಂದ ಅಕ್ರಮವಾಗಿ ಭೂ ಮಾಫಿಯಾ ತಂಡವು ಸುಮಾರು 45 ನಿವೇಶನಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಕ್ರಮವಾಗಿ ನೀಲನಕ್ಷೆ ತಯಾರು ಮಾಡಿದ್ದು, ಯಾವುದೇ ದಾಖಲೆಗಳು ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಪಂ ಅಧಿಕಾರಿಗಳ ಮೂಲಕ ಅಕ್ರಮವಾಗಿ ಇ-ಸ್ವತ್ತು ನಿರ್ಮಿಸಿ ಲಾಭಿ ನಡೆಸುತ್ತಿವೆ ಎಂಬ ಆರೋಪ ವ್ಯಕ್ತವಾಗಿದೆ.

ಗ್ರಾಪಂ ಅಧಿಕಾರಿಗಳು ಇ-ಸ್ವತ್ತು ಮಾಡದಿರುವ ಮೇಲಾಧಿಕಾರಿಗಳ ಮೂಲಕ ದಾಖಲೆಗಳನ್ನು ಸಲ್ಲಿಸಿ ಗ್ರಾಪಂ ಆಡಳಿತ ಮಂಡಳಿಯ ಗಮನಕ್ಕೂ ತರದೇ ಅಕ್ರಮ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ಜಮೀನು ಹದ್ದುಬಸ್ತಿಗೆ ಒತ್ತಾಯ: ತಾಲೂಕಿನ ಡಿಕೆ ಹಳ್ಳಿ ಫ್ಲಾಂಟೇಶನ್‌ ಸರ್ವೆ ನಂ. 58ರಲ್ಲಿ 11.09 ಎಕರೆ ಜಮೀನು ಇರುವ ಬಗ್ಗೆ ಪಹಣಿ ಬರುತ್ತಿದೆ. ಆದರೆ, ಈ ಜಮೀನು ಎಲ್ಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳಿಗೂ ಗೊತ್ತಿಲ್ಲ.

ಈ ಜಮೀನಿ ನಲ್ಲಿ ಈಗಾಗಲೇ ಹಲವಾರು ಅಕ್ರಮ ಲೇಔಟ್‌ ಗಳು ತಲೆಎತ್ತಿವೆ. 30 ವರ್ಷಗಳಿಂದಲೂ ನಕಲಿ ದಾಖಲೆ ಸೃಷ್ಟಿಸಿಕೊಂಡು ನಿವೇಶನಗಳನ್ನು ಮಾಡಿ ಮಾರಾಟ ಮಾಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿ ಗಳು ಹಾಗೂ ತಹಶೀಲ್ದಾರ್‌ರವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸರ್ವೆ ಮಾಡಿಸಿ ಸರ್ಕಾರದ ಖರಾಬು ಇರುವ ಜಮೀನಿಗೆ ಹದ್ದಬಸ್ತು ನಿರ್ಮಾಣ ಮಾಡಿ ಸರ್ಕಾರದ ಆಸ್ತಿಯನ್ನು ಕಾಪಾಡಬೇಕು ಬೇಕು ಎಂದು ಡಿ.ಕೆ.ಹಳ್ಳಿ ಫ್ಲಾಂಟೇಶನ್‌ ಸ್ಥಳೀಯ ನಿವಾಸಿ ಸುನೀಲ್‌ ಕುಮಾರ್‌ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಸರ್ಕಾರಿ ಜಮೀನು ಎಲ್ಲೇ ಒತ್ತುವರಿಯಾಗಿರುವ ಮನವಿ ಬಂದ ಕೂಡಲೇ ಕೂಡಲೇ ಕ್ರಮಕೈಗೊಳ್ಳ ಲಾಗುವುದು. ಡಿಕೆ ಹಳ್ಳಿ ಫ್ಲಾಂಟೇಶನ್‌ ಸರ್ವೆ ನಂ. 58ರಲ್ಲಿ 11.09 ಎಕರೆ ಜಮೀ ನಿದ್ದು, ಈ ಜಮೀನು ಒತ್ತುವರಿಯಾಗಿರುವ ಬಗ್ಗೆ ಒಮ್ಮೆ ದೂರು ಬಂದ ಹಿನ್ನಲೆಯಲ್ಲಿ ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿ ರಾಜಕಾಲುವೆ ಒತ್ತುವರಿ ವಿರುದ್ಧ ಲೇಔಟ್‌ ಅಕ್ರಮ ನಿರ್ಮಾಣವನ್ನು ನಿಲ್ಲಿಸಲಾಗಿದೆ. ಈ ಜಮೀನಿನ ಸರ್ವೇಗೆ ಕ್ರಮವಹಿಸಲಾಗುವುದು. –ಎಂ.ದಯಾನಂದ್‌, ತಹಶೀಲ್ದಾರ್‌, ಬಂಗಾರಪೇಟೆ

ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.