ಸ್ಪರ್ಧಾತ್ಮಕ ಜ್ಞಾನದಿಂದ ಉತ್ತಮ ಭವಿಷ್ಯ
Team Udayavani, Feb 23, 2021, 3:21 PM IST
ಗೌರಿಬಿದನೂರು: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇಆಸಕ್ತಿಯಿಂದ ಕಲಿಕೆಯ ಜತೆಗೆ ಬದುಕಿಗೆ ಆಸರೆಯಾಗುವಸ್ಪರ್ಧಾತ್ಮಕ ಜ್ಞಾನ ಹಾಗೂ ಉನ್ನತ ಮಟ್ಟದ ಶಿಕ್ಷಣ ಪಡೆದು ಸಮುದಾಯದ ಏಳಿಗೆಗೆ ಸಹಕಾರಿಯಾಗಬೇಕೆಂದು ಎಂದು ಜಿಪಂ ಸದಸ್ಯೆ ಸರಸ್ವತಮ್ಮ ಅಶ್ವತ್ಥ ನಾರಾಯಣಗೌಡ ತಿಳಿಸಿದರು.
ಕುರೂಡಿಯಲ್ಲಿ ನಂದಗೋಕುಲ ಯಾದವ ಸಂಘದಿಂದ ಆಯೋಜಿಸಿದ್ದ 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿನ ಬಹುತೇಕ ಗ್ರಾಮದಲ್ಲಿ ಸಮುದಾಯದವರು ವಾಸವಾಗಿದ್ದು, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಾಮಾಜಿಕ,ಶೈಕ್ಷಣಿಕ, ರಾಜಕೀಯ, ಆರ್ಥಿಕ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಲು ಪ್ರಾಮಾಣಿಕವಾಗಿ ಶ್ರಮಿಸ ಬೇಕಾಗಿದೆ ಎಂದರು.
ಕರ್ನಾಟಕ ಯಾದವ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ್ ಮಾತನಾಡಿ, ಸಮುದಾಯವು ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಯಾಗಬೇಕಾದರೆ ಯುವಕರಜವಾಬ್ದಾರಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಮತ್ತುಸಹಕಾರದೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಶ್ರೀಕೃಷ್ಣಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.ತಾಲೂಕು ಘಟಕದ ಅಧ್ಯಕ್ಷ ವೈ.ಆ.ಅಂಬರೀಶ್, ಮುಖಂಡರಾದ ಟಿ.ಪಿ.ರಾಮಯ್ಯ, ಬಿ.ಪಿ. ಅಶ್ವತ್ಥನಾರಾಯಣಗೌಡ, ಬಿ.ಕೆ. ನಾರಾಯಣಸ್ವಾಮಿ, ಆ.ಮುನಿಲಕ್ಷ್ಮಮ್ಮ, ಹರಿಕೃಷ್ಣ ಯಾದವ್, ನವೀನ್ ಯಾದವ್, ಚಂದ್ರಶೇಖರ್, ಬೆಟ್ಟಸ್ವಾಮಿ, ರಾಮ ಚಂದ್ರ, ಸಿ.ಡಿ.ನರಸಿಂಹಮೂರ್ತಿ, ಸಿದ್ದಗಂಗಪ್ಪ, ಎನ್. ಬಾಲಪ್ಪ, ಸುನೀಲ್, ಮೋಹನ್ ಕುಮಾರ್, ಈರಣ್ಣ, ಮುನಿ ಕೃಷ್ಣ, ಎಂ.ಕೆ. ನಾರಾಯಣಪ್ಪ, ಯರ್ರಗುಂಟೆ ಕೃಷ್ಣ, ಮುತ್ತೇಗೌಡ, ಪ್ರಕಾಶ್, ವಿಶ್ವನಾಥ್, ನರಸಿಂಹಮೂರ್ತಿ, ರಾಜೇಶ್ವರಿ ಭಾಗವಹಿಸಿದ್ದರು.