ಪಿಲ್ಲರ್‌ಗೆ ಸೀಮಿತ ಗುರುಭವನ
11 ವರ್ಷವಾದ್ರೂ ಭವನ ಕಾಮಗಾರಿ ಪೂರ್ಣಗೊಳಿಸಿಲ್ಲ: ಅಸಮಾಧಾನ
Team Udayavani, Sep 5, 2020, 3:21 PM IST
ಶ್ರೀನಿವಾಸಪುರ: ಪಟ್ಟಣದ ಎಂ.ಜಿ.ರಸ್ತೆ ಉತ್ತರ ದಿಕ್ಕಿನಲ್ಲಿ ಗುರುಭವನ ನಿರ್ಮಾಣಕ್ಕೆ ಅಡಿಪಾಯ ಹಾಕಿ, ಪಿಲ್ಲರ್ ನಿರ್ಮಿಸಿ 11 ವರ್ಷಗಳಾದ್ರೂ ಕಾಮಗಾರಿ ಈವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ಶಿಕ್ಷಕರು ಖಾಸಗಿ ಕಟ್ಟಡಗಳಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕಿದೆ.
ಶಿಕ್ಷಕರ ಸಾಮರಸ್ಯದ ಕೊರತೆಯೇ ಈ ಗುರುಭವನ ನನೆಗುದಿಗೆ ಬೀಳಲು ಕಾರಣ ಎಂಬ ಆರೋಪಿಗಳು ಕೇಳಿ ಬರುತ್ತಿವೆ. 2009 ಸೆ.17ರಂದು ಅಂದಿನ ಕೇಂದ್ರ ರೈಲ್ವೆ ಸಹಾಯಕ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ಅಂದು ಕ್ಷೇತ್ರದ ಶಾಸಕರಾಗಿದ್ದಜಿ.ಕೆ.ವೆಂಕಟಶಿವಾರೆಡ್ಡಿ ಸೇರಿದಂತೆ ವೈ.ಎ. ನಾರಾಯಣಸ್ವಾಮಿ, ಡಾ.ಶಿವ ಯೋಗಿಸ್ವಾಮಿ ಭವನ ನಿರ್ಮಾಣಕ್ಕೆ ಅದ್ಧೂರಿಯಾಗಿ ಶಂಕುಸ್ಥಾಪನೆ ನಡೆಸಿದ್ದರು.
ಅದಾದ ನಂತರ ಗುರುಭವನಕ್ಕೆ ಅಡಿ ಪಾಯ, ಪಿಲ್ಲರ್‌ಗಳನ್ನು ಹಾಕಲಾಯಿತು. ಆದರೆ, ಕಟ್ಟಡ ಕಟ್ಟುವ ಪ್ರಯತ್ನಕ್ಕೆ ಯಾರೂ ಮುಂದಾಗಲೇ ಇಲ್ಲ. ಹಣ, ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆ ಹೀಗೆ ಹಲವು ಕಾರಣಗಳಿಂದ ಕಾಮಗಾರಿ ನನೆಗುದಿಗೆ ಬೀಳುವಂತಾಯಿತು. ಶಿಕ್ಷಕರು ಕೆಲವು ಕಾರ್ಯಕ್ರಮಗಳನ್ನು ನಡೆಸಲು ಅಥವಾ ಶಾಲೆಗಳ ಕೆಲಸ ಮುಗಿದ ನಂತರ ಒಂದಿಷ್ಟು ವಿರಾಮ ಪಡೆಯಲು ಎಲ್ಲೂ ಜಾಗವಿಲ್ಲದೇ ವಾಣಿಜ್ಯ ಸಂಕೀರ್ಣಗಳ ಮುಂದೆ, ಅಶ್ವತ್ಥ ಕಟ್ಟೆಗಳ ಮೇಲೆ ಕುಳಿತು ಕಾಲ ಹಾಕುವಂತಾಗಿದೆ. ಭವನ ಪೂರ್ಣಗೊಳಿಸುವ ಪ್ರಯತ್ನ: ತಾಲೂಕಿನಲ್ಲಿ ಶಿಕ್ಷಕರ ಸಂಘಗಳು ಇದ್ದರೂ ಇಲ್ಲಿ ಕೇವಲ ಶಿಕ್ಷಕರು ಮಾತ್ರ ಎಂದೇ ಜನ ಗೌರವಿಸುವಂತಾಗಿದೆ.
ಶಿಕ್ಷಕರ ಸಂಘಗಳ ನಾಯಕರು ಆಯಾ ಚುನಾವಣಾ ಕಾಲಕ್ಕೆ ಬದಲಾಗುತ್ತಲೇ ಇದ್ದಾರೆ. ಶಿಕ್ಷಕರ ಸಂಘಕ್ಕೆ ಚುನಾವಣೆ ಮುಂದೆ ನಡೆಯಲಿದೆ. ಆದರೂ ಪ್ರಸ್ತುತ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಜಿ. ಎನ್.ಗೋವಿಂದರೆಡ್ಡಿ ಅವರು ಗುರು ಭವನ ಪೂರ್ಣಗೊಳಿಸುವ ಪ್ರಯತ್ನ ಮಾಡಲಿದ್ದೇವೆಂಬ ಮಾತನ್ನು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.