ಬಿಇಒ ಮನವಿಗೆ ಸುಂದರವಾಯ್ತು ಹರಳುಕುಂಟೆ ಶಾಲೆ
ಹೊಸ ನೆಲಹಾಸು,ಸುಣ್ಣಬಣ್ಣದೊಂದಿಗೆ ಕಂಗೊಳಿಸಿದ ಸರ್ಕಾರಿ ಶಾಲೆ, ಬಿಇಒ ಮಾತಿಗೆ ಸ್ಪಂದಿಸಿದ ಗ್ರಾಪಂ, ಎಸ್‌ಡಿಎಂಸಿ ಸದಸ್ಯರು
Team Udayavani, Jul 22, 2019, 4:16 PM IST
ಬಿಇಒ ಮನವಿಗೆ ಸ್ಪಂದಿಸಿದ ಗ್ರಾಪಂ ಸದಸ್ಯರು ಕೋಲಾರ ತಾಲೂಕು ಹರಳುಕುಂಟೆ ಸರ್ಕಾರಿ ಶಾಲೆಗೆ ನೆಲಹಾಸು ಸರಿಪಡಿಸುವುದರ ಜೊತೆಗೆ ಬಣ್ಣ ಬಳಿಯುತ್ತಿರುವುದು.
ಕೋಲಾರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿಗೆ ಸ್ಪಂದಿಸಿದ ಗ್ರಾಪಂ ಸದಸ್ಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಹರಳುಕುಂಟೆ ಸರ್ಕಾರಿ ಶಾಲೆ ಕಂಗೊಳಿಸುವಂತೆ ಮಾಡಿದ್ದಾರೆ.
ತಾಲೂಕಿನ ಹರಳುಕುಂಟೆ, ಚಾಮರಹಳ್ಳಿ, ಭಟ್ರಹಳ್ಳಿ ಸರ್ಕಾರಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಭೇಟಿ ನೀಡಿದಾಗ ಮೂಲಸೌಲಭ್ಯಗಳ ಕೊರತೆ, ಬಣ್ಣಕಳೆದುಕೊಂಡ ಕಟ್ಟಡ, ಆವರಣದಲ್ಲಿ ಕಸದ ರಾಶಿ, ಕಿತ್ತುಹೋಗಿದ್ದ ನೆಲಹಾಸು ಇವೆಲ್ಲವನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಈ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರನ್ನು ಶಾಲೆಗೆ ಕರೆಸಿಕೊಂಡು ಶಾಲೆಯ ದುಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟರು.
ಕಲಿಕೆಗೆ ಪೂರಕ ವಾತಾವರಣ: ಬಿಇಒ ಅವರ ಮನವೊಲಿಕೆಗೆ ಕೂಡಲೇ ಸ್ಪಂದಿಸಿದ ಗ್ರಾಪಂ ಸದಸ್ಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಆವರಣದಲ್ಲಿ ಹಾಸಿದ್ದ ಕಲ್ಲು ಚಪ್ಪಡಿಗಳನ್ನು ಸರಿಯಾಗಿ ಜೋಡಿಸಿ, ಶಾಲಾ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಯುವ ಕಾರ್ಯ ಮಾಡಿದರು. ಚಾವಣೆಯಲ್ಲಿದ್ದ ಕಸ ತೆಗೆಸಿ ಆವರಣದಲ್ಲಿದ್ದ ಕಸದ ರಾಶಿ ಹೊರಗೆ ಹಾಕಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ.
ಪೂರಕ ಸ್ಪಂದನೆ: ಭಟ್ರಹಳ್ಳಿಯಲ್ಲಿ ಹಳ್ಳಕೊಳ್ಳಗಳಿಂದ ಕೂಡಿದ್ದ ಶಾಲಾ ಆವರಣಕ್ಕೆ ಮಣ್ಣು ತುಂಬಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಸದಸ್ಯರು ಮಾಡಿಸಿದ್ದು, ಶಾಲೆಯಲ್ಲಿ ಕಲಿಕೆಗೆ ಪೂರಕವಾಗಿ ಸ್ಪಂದನೆ ನೀಡಿದ್ದಾರೆ.
ಗ್ರಾಮಸ್ಥರ ಗಮನಕ್ಕೆ ತನ್ನಿ: ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಇಒ, ಹಸಿವಾಗಿದೆ ಎಂದು ಕೇಳದೇ ತಾಯಿಯೂ ಅನ್ನ ಬಡಿಸೋದಿಲ್ಲ, ಶಾಲೆಯ ಸಮಸ್ಯೆಗಳನ್ನು ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಗಮನಕ್ಕೆ ತಂದು ಕೆಲಸ ಮಾಡಿಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದರು.
ಒಂದೇ ದಿನದಲ್ಲಿ ಮೂರು ಶಾಲೆಗಳನ್ನು ಸುಂದರವಾಗಿ ಕಾಣುವಂತೆ ಮಾಡಿಸುವಲ್ಲಿ ಬಿಇಒ ಅವರು ಸಫಲರಾಗಿದ್ದು, ಇದು ಇತರೆ ಶಾಲೆಗಳಿಗೂ ಪ್ರೇರಣೆಯಾಗಿದೆ. ಹರಳುಕುಂಟೆ ಗ್ರಾಪಂ ಸದಸ್ಯರಾದ ವೆಂಕಟೇಶಪ್ಪ, ಶಿಲ್ವಾ ಅನಿಲ್ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ, ಚಾಮರಹಳ್ಳಿ ಗ್ರಾಪಂ ಸದಸ್ಯ ಸೀನಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಟಿ.ಶ್ರೀನಿವಾಸ್, ಭಟ್ರಹಳ್ಳಿ ಗ್ರಾಪಂ ಸದಸ್ಯ ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಚಲಪತಿ ಅವರನ್ನು ಬಿಇಒ ಅಭಿನಂದಿಸಿದರು. ಈ ಸಂದರ್ಭದಲ್ಲಿ ಇಸಿಒ ವೆಂಕಟಾಚಲಪತಿ, ಮುಖ್ಯ ಶಿಕ್ಷಕರಾದ ಸಿ.ರೇಖಾ, ಲೀಲಾವತಮ್ಮ, ಕೃಷ್ಣಪ್ಪ, ಸಹಶಿಕ್ಷಕರಾದ ಆಯಿಷಾಭಾನು ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.