ಅವೈಜ್ಞಾನಿಕವೆಂದು ಡ್ಯಾಂ ಒಡೆದು ಹಾಕಿದರೆ ಸಹಿಸಲ್ಲ
Team Udayavani, May 21, 2020, 6:41 AM IST
ಕೋಲಾರ: ಅಂತರ್ಜಲ ವೃದ್ಧಿಗೆಂದು ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದು ಅವೈಜ್ಞಾನಿಕವಲ್ಲ, ಇದನ್ನು ಒಡೆದು ಹಾಕಬೇಕು ಎಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಸಿ. ವ್ಯಾಲಿ ನೀರು ಹರಿಯುತ್ತಿರುವ ತಾಲೂಕಿನ ಎಸ್.ಅಗ್ರಹಾರ ಕೆರೆ ಹಾಗೂ ಜನ್ನಘಟ್ಟ ಕೆರೆಯಲ್ಲಿ ನಿರ್ಮಿಸಿರುವ ಪಂಪ್‌ಹೌಸ್ ಅನ್ನು ವೀಕ್ಷಿಸಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಚೆಕ್ ಡ್ಯಾಂಗಳನ್ನು ಅವೈಜ್ಞಾನಿವಾಗಿ ನಿರ್ಮಿಸಿ ದ್ದಾರೆ ಎಂದು ಪದ ಬಳಕೆ ಮಾಡಲು ನಾನೇನು ದಡ್ಡನಲ್ಲ, ಇದೇನು ತಪ್ಪಲ್ಲ, ಈಗ ಹೊಡೆಯುತ್ತವೆ ಎಂದರೆ ನಾನು ಸಹಿಸಲ್ಲ ಎಂದು ಹೇಳಿದರು.
ರಾಜ್ಯ, ಕೇಂದ್ರ ಯಶಸ್ವಿ: ಲಾಕ್ ಡೌನ್ ಆದೇಶ ಮಾಡಿದ್ದು ನಾವೇ, ಸುಮಾರು ದಿನ ಲಾಕ್‌ಡೌನ್ ಮುಂದುವರೆಸಿದರೆ ಪರಿಸ್ಥಿತಿ ಏನಾಗುತ್ತೆ ಎಂಬುದನ್ನು ಅರಿತು ಕೊಳ್ಳಬೇಕಾಗುತ್ತದೆ, ಜೀವ ಉಳಿಸಲು ಪ್ರಯತ್ನ ನಡೆಸಿದ್ದು, ಜೀವನ ರೂಪಿಸಿಕೊ ಳ್ಳಲು ನಾವು ನೆರವು ನೀಡಬೇಕಲ್ಲ, ಅದಕ್ಕೆ ಪರಿಹಾರ ಕೊಡಿ, ಇದಕ್ಕೆ ಹಣ ಕೊಡಿ ಎಂದು ಅದೇನು ಅಗ್ರಹಾರ ಕೆರೆಯಲ್ಲಿ ಸಿಗತ್ತ ಎಂದು ಪ್ರಶ್ನಿಸಿದರು.
ಸತತವಾಗಿ ಲಾಕ್‌ಡೌನ್, ಸೀಲ್‌ಡೌನ್ ಮುಂದುವರೆಸಿಕೊಂಡರೆ ಪರಿಸ್ಥಿತಿಯನ್ನು ನಾವು ನಿಭಾಯಿಸ ಬೇಕಲ್ಲ, ಟೀಕೆ, ಆರೋಪ ಮಾಡುವವರಿಗೆ ಏನು ಉತ್ತರ ಕೊಡೋ ಕ್ಕೆ ಆಗುತ್ತೆ, ಕೊರೊನಾ ವೈರಸ್ ನಿಯಂತ್ರ ಣದಲ್ಲಿ ಇಡೀ ಪ್ರಪಂಚ ದೇಶವನ್ನು ಶ್ಲಾಘಿ ಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
ಸ್ಪೀಕರ್, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ
ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ
Rain: 5 ವಿದ್ಯುತ್ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್
Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.