ಕಳ್ಳ ಲೆಕ್ಕ ಬರೆದರೆ ಕ್ರಿಮಿನಲ್ ಕೇಸ್: ಸಿಇಒ
Team Udayavani, Feb 3, 2019, 7:20 AM IST
ಮುಳಬಾಗಿಲು: ಮಾ.31ರ ಒಳಗಾಗಿ ಎಲ್ಲಾ ಇಲಾಖೆಗಳು ನರೇಗಾ ಯೋಜನೆಯಡಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದಲ್ಲಿ ಮತ್ತು ಬರಗಾಲದಲ್ಲಿ ಜನರಿಗೆ ಟ್ಯಾಂಕರ್ ಮೂಲಕ ನೀರು ಕೊಡುವ ಭರಾಟೆಯಲ್ಲಿ ಕಳ್ಳ ಲೆಕ್ಕ ಬರೆದಿರುವುದು ಕಂಡು ಬಂದಲ್ಲಿ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲಾಗುವುದೆಂದು ಜಿಪಂ ಸಿಇಒ ಜಗದೀಶ್ ಖಡಕ್ ಎಚ್ಚರಿಕೆ ನೀಡಿದರು.
ಶನಿವಾರ ನಗರದ ತಾಪಂ ಕಚೇರಿಯಲ್ಲಿ ಜಿಪಂ ಅಧ್ಯಕ್ಷೆ ಗೀತಮ್ಮ ಮತ್ತು ಸಿಇಒ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳು ಒಳಗೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಸ್ಯೆ ಹೇಳಿಕೊಂಡರು: ಹಳ್ಳಿಗಳ ಅಭಿವೃದ್ಧಿಗೆ ಗ್ರಾಪಂಗಳೇ ಪೂರಕ. ಹೀಗಾಗಿ ಅಧ್ಯಕ್ಷರು ಸಮಸ್ಯೆಗಳನ್ನು ತಿಳಿಸಲು ಸೂಚಿಸಿದರು. ತಮ್ಮ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳಿಗೆ ಸಪ್ಲೆ„ಬಿಲ್, ಮನೆ, ದನದಕೊಟ್ಟಿಗೆ ಬಿಲ್‌ಗಳೇ ಆಗುತ್ತಿಲ್ಲ. ನಂಗಲಿ, ಬೈರಕೂರು, ಗುಮ್ಮಕಲ್ಲು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಜನರು ತಮ್ಮ ವಿರುದ್ಧ ಕೂಗಾಡುತ್ತಿದ್ದಾರೆಂದು ಹಾಜರಿದ್ದ ಗ್ರಾಪಂ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಹಣ ತಡವಾಗಿದೆ: ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಜಗದೀಶ್, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗದೇ ತಡ ಆಗಿದೆ. ಜಿಲ್ಲಾ ಉಸ್ತುವರಿ ಸಚಿವರು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿರುವುದರಿಂದ ನರೇಗಾ ಯೋಜನೆಯಡಿ ಎಷ್ಟೇ ಕಾಮಗಾರಿ ಕೈಗೊಂಡರೂ ರೈತರಿಗೆ ಕಡ್ಡಾಯವಾಗಿ ಹಣ ಸೇರಲಿದೆ ಎಂದರು.
ತರಾಟೆ: ಕಳೆದ ತಿಂಗಳು ನಂಗಲಿಯಲ್ಲಿನ 2 ಅಂಗನವಾಡಿ ಕೇಂದ್ರಗಳಿಗೆ ತಾವೇ ಖುದ್ದು ಭೇಟಿ ನೀಡಿ ಪರಿಶೀಲಿಸಿದಾಗ ಕಂಡು ಬಂದ ಲೋಪ-ದೋಷಗಳ ಕುರಿತು ಪ್ರಸ್ತಾಪಿಸಿದ ಸಿಇಒ, ಏಕೆ ಕ್ರಮ ತೆಗೆದುಕೊಂಡಿಲ್ಲವೆಂದು ಸಿಡಿಪಿಒ ಪ್ರಭಾವತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಅದಕ್ಕೆ ಉತ್ತರಿಸಿದ ಸಿಡಿಪಿಒ, ಎರಡೂ ಕೇಂದ್ರಗಳ ಕಾರ್ಯಕರ್ತೆಯರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುತ್ತಿದ್ದಂತೆ ಕಾರ್ಯಕರ್ತೆಯರು ಸಾಕಷ್ಟು ಒತ್ತಡ ತಂದಿದ್ದರು. ಆದರೂ ಮುಂದಿನ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆಂದರು. ಅದಕ್ಕೆ ಧ್ವನಿಗೂಡಿಸಿದ ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸೌಲಭ್ಯಗಳನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದರು.
ಶಿಸ್ತು ಕ್ರಮ ಕೈಗೊಳ್ಳುವೆ: ಕೃಷಿ ಅಧಿಕಾರಿ ಶೋಭಾ, ನರೇಗಾ ಯೋಜನೆಯಡಿ 50 ಸಾವಿರ ಮಾನವ ದಿನಗಳನ್ನು ಮಾಡಲು ಗುರಿ ನೀಡಲಾಗಿದ್ದು ಕೇವಲ 11 ಸಾವಿರ ಮಾತ್ರ ಮಾಡಲಾಗಿದೆ ಎಂದಾದ ಕೋಪಗೊಂಡ ಸಿಇಒ, ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಸಾಧಿಸಬೇಕಾದ ಪ್ರಗತಿ ಕುರಿತು ಕಳೆದ ಸಭೆಯಲ್ಲಿ ತಿಳಿಸಿದ್ದರೂ ಇದುವರೆಗೂ ಪ್ರಗತಿ ಸಾಧಿಸದ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡರು. ಉಳಿದ 2 ತಿಂಗಳಲ್ಲಿ ಶೇ.100 ಪ್ರಗತಿ ಸಾಧಿಸದಿದ್ದರೆ ಇನ್ನೊಂದು ನೋಟಿಸ್ ನೀಡಿ ಶಿಸ್ತು ಕ್ರಮಕೈಗೊಳ್ಳಲಾಗುವುದೆಂದು ಅಂತಿಮ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಇಒ ಡಾ.ಸರ್ವೇಶ್, ಎಇಇ, ರಾಮಾಂಜಿನಪ್ಪ, ಗ್ರಾಮೀಣ ಕುಡಿಯುವ ನೀರು ವಿಭಾಗದ ಅಪ್ಪಿರೆಡ್ಡಿ, ಡಾ.ಆನಂದ್, ಅಕ್ಷರ ದಾಸೋಹ ಅಧಿಕಾರಿ ವಿ.ಆನಂದ್, ಪಿಡಿಒ, ಅಧ್ಯಕ್ಷರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.