ಖಾಸಗಿ ಶಿಕ್ಷಣ ಸಂಸ್ಥೆ ಕಡೆಗಣನೆ
Team Udayavani, Jun 24, 2020, 6:57 AM IST
ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಸರ್ಕಾರ ಮಲತಾಯಿ ಧೋರಣೆ ಅನುಸರಿಸದೇ, ಕೂಡಲೇ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಕೋಲಾರ ಅಸೋಸಿಯೇಟೆಡ್ ಮ್ಯಾನೇ ಜ್‌ಮೆಂಟ್ಸ್ ಆಫ್ ಸ್ಕೂಲ್ಸ್ (ಕ್ಯಾಮ್ಸ್) ಪದಾಧಿಕಾರಿಗಳು ಶಿಕ್ಷಣಾಧಿ ಕಾರಿ ಸಿ.ಆರ್.ಅಶೋಕ್‌ಗೆ ಮನವಿ ಸಲ್ಲಿಸಿದರು.
ನಗರದ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕ್ಯಾಮ್ಸ್ ಪದಾಧಿಕಾರಿಗಳು, ಶಿಕ್ಷಕರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಮಾಜಿ ಎಂಎಲ್‌ಸಿ ರಮೇಶ್‌ಬಾಬು, ಖಾಸಗಿ ಶಾಲೆಗಳು ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ, ಹಲವು ವೃತ್ತಿಪರರಿಗೆ ಪರಿಹಾರಧನ ಘೋಷಿಸಿರುವ ಸರ್ಕಾರ, ಖಾಸಗಿ ಶಾಲೆಗಳ ಈ ಸಿಬ್ಬಂದಿಯನ್ನು ಕಡೆಗಣಿಸಿದೆ ಎಂದು ದೂರಿದರು.
ಕ್ಯಾಮ್ಸ್ ಜಿಲ್ಲಾಧ್ಯಕ್ಷ ಎ.ಸದಾನಂದ ಮಾತನಾಡಿ, ಶಾಲೆಯ ವಾಹನಗಳ ವಿಮೆ, ತೆರಿಗೆ, ಶಿಕ್ಷಕರಿಗೆ ಪಿಎಫ್, ಇಎಸ್‌ಐ, ಕಟ್ಟಡ ನಿರ್ವಹಣಾ ವೆಚ್ಚಗಳಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸರ್ಕಾರ ಆದಷ್ಟು ಶೀಘ್ರ 2019-20ನೇ ಸಾಲಿನ ಆರ್‌ಟಿಇ ಶುಲ್ಕದ ಬಾಕಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯ ಮುಭಾರಕ್, ಅಮರ ಜ್ಯೋತಿ ಮುನಿಯಪ್ಪ, ಸಲಹೆಗಾರರಾದ ಮುನಿಸ್ವಾಮಿ,
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್, ಜಿಲ್ಲಾ ಉಪಾಧ್ಯಕ್ಷ ನಾಗಭೂಷಣ್, ಸತೀಶ್‌ಕುಮಾರ್, ಮುರಾಂಡಹಳ್ಳಿ ಗೋಪಾಲಪ್ಪ, ಜಮೀರ್ ಅಹಮದ್, ಶೈಲೇಶ್‌ಕುಮಾರ್, ಹನುಮಂತಪ್ಪ, ಮುನಿಶಾಮಿಗೌಡ, ಜಿ.ಕೆ. ಹರಿಪ್ರಸಾದ್, ವೈ.ಸಿ.ಮುನೇಗೌಡ, ಆರ್.ಅಶೋಕ್ ಕುಮಾರ್, ಜೋಸೆಫ್, ಆರ್.ಶಂಕರಪ್ಪ, ಜೆ.ಎನ್. ರಾಮಕೃಷ್ಣ, ಶಶಿಕಿರಣ್, ಚಿನ್ಮಯಾನಂದ ಅವಧೂತರು, ಸೋಮಶೇಖರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.