ಅಕ್ರಮ ಮನೆ, ಅಡಿಪಾಯ ತೆರವು


Team Udayavani, Jan 15, 2020, 5:25 PM IST

kolar-tdy-1

ಟೇಕಲ್‌: ವ್ಯಾಪ್ತಿಯ ಕೆ.ಜಿ.ಹಳ್ಳಿ ಗ್ರಾಮದ ಸರ್ವೆ ನಂ. 73ರಲ್ಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಹಾಕಿದ್ದ ಪಾಯ ಮತ್ತು ನಿರ್ಮಾಣದಲ್ಲಿನ ಮನೆಗಳನ್ನು ಉಪವಿಭಾಗಾಧಿಕಾರಿ ಸೋಮಶೇಖರ್‌ ಸಮ್ಮುಖದಲ್ಲಿ ತೆರವು ಮಾಡಲಾಯಿತು. ಎರಡು ದಿನಗಳ ಹಿಂದೆ ತಹಶೀಲ್ದಾರ್‌ನಾಗವೇಣಿ ಹಾಗೂ ಇಒ ಕೃಷ್ಣಪ್ಪ ಸ್ಥಳಕ್ಕೆ ಬಂದು ಅಕ್ರಮವಾಗಿ ಮನೆ ಕಟ್ಟಿಕೊಳ್ಳುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು.

ಸರ್ಕಾರಿ ಜಾಗದಲ್ಲಿ ಮನೆಕಟ್ಟಿ ಕೊಳ್ಳಬಾರದು, ಒಂದು ವೇಳೆ ಕಟ್ಟಿದರೆ ನೆಲಸಮಗೊಳಿಸುವುದಾಗಿ ಹೇಳಿದ್ದರು. ಆದರೂ ಕೆಲವರು ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ, ರಾತ್ರೋರಾತ್ರಿ ಮನೆ ಕಟ್ಟಲು ಪ್ರಾರಂಭಿಸಿದ್ದರು. ಹೀಗಾಗಿ ಮಂಗಳವಾರ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ, ತಹಶೀಲ್ದಾರ್‌ ನಾಗವೇಣಿ ನೇತೃತ್ವದಲ್ಲಿ ತೆರವು ಮಾಡಲಾಯಿತು.

ದಾಖಲೆಗಳು ಪರಿಶೀಲನೆ: ತೆರವು ಕಾರ್ಯಾಚರಣೆ ವೇಳೆ ಮನೆ ಕಟ್ಟಲು ಆರಂಭಿಸಿದ್ದ ಕೆಲವರು ಪಂಚಾಯ್ತಿ ನೀಡಿರುವ ದಾಖಲೆ ತೋರಿಸಿದರು. ಆಗ ಸ್ಥಳದಲ್ಲಿದ್ದ ಪಿಡಿಒ ಶಾಲಿನಿ ಮತ್ತು ತಾಪಂ ಇಒ ಕೃಷ್ಣಪ್ಪ ಪರಿಶೀಲನೆ ನಡೆಸಿದರು. ದಾಖಲೆಗಳು ಸರಿಯಿಲ್ಲ ಎಂಬುದು ತಿಳಿದು ಬಂದಿದ್ದರಿಂದ ನಿರ್ಮಿಸಿದ್ದ ಅಡಿಪಾಯ ಹಾಗೂ ಮನೆ ಗಳನ್ನು ನೆಲಸಮ ಗೊಳಿಸಲಾಯಿತು.

ಅರ್ಹರ ಪಟ್ಟಿ ತಯಾರಿಸಿ: ಉಪ ವಿಭಾಗಾಧಿಕಾರಿ ಸೋಮಶೇಖರ್‌ ಮಾತನಾಡಿ, ಸರ್ವೆ ನಂಬರ್‌ 73ರಲ್ಲಿ ಪಾಯ ಹಾಕಿಕೊಂಡಿರುವವರು, ಪಕ್ಕಮನೆ ಕಟ್ಟಿಕೊಂಡಿರುವವರು, ಗುಡಿಸ ಲಲ್ಲಿ ವಾಸಿಸುತ್ತಿರುವವರು, ನಿವೇಶನ ರಹಿತರೆ, ವಸತಿ ಹೀನರೆ ಅಥವಾ 94 ಸಿನಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬ ದಾಖಲೆಗಳನ್ನು ಸಂಗ್ರ ಹಿಸಿ, ಅರ್ಹತೆ ಇರುವ ಫ‌ಲಾನುಭವಿಗಳ ಪಟ್ಟಿ ತಯಾರಿಸಿ, ಗ್ರಾಮ ಪಂಚಾಯ್ತಿಗೆ ನೀಡುವಂತೆ ಜನರಿಗೆ ತಿಳಿಸಿದರು.

ಪಿಡಿಒ, ಸರ್ವೆಯರ್‌ ವಿರುದ್ಧ ದೂರು: ಸರ್ವೆಯರ್‌ ಸರ್ಕಾರಿ ಜಮೀನನ್ನು ಗಾಮಠಾಣೆ ಜಮೀನು ಎಂದು ನಮೂದಿಸಿರುವುದು, ಕೆಲವು ದಾಖಲೆ ಗಳಲ್ಲಿ ಕಂಡು ಬಂದಿದ್ದರಿಂದ ಅವರ ವಿರುದ್ಧವೂ ಕೇಸು ದಾಖಲಿಸುವಂತೆ ತಾಪಂ ಇಒಗೆ ಸೂಚಿಸಿದರು. ಈ ಸರ್ವೆ ನಂಬರಿನಲ್ಲಿ ಈ ಸ್ವತ್ತು ಮಾಡಿಕೊಟ್ಟಿರುವ ಪಿಡಿಒ ವಿರುದ್ಧವು ದೂರು ದಾಖಲಿಸಿ ಕ್ರಮ ಜರುಗಿಸುವಂತೆ ತಿಳಿಸಿದರು.

ಅನುಮಾನ: ಇಒ ಕೃಷ್ಣಪ್ಪನವರು ಇದಕ್ಕೂ ಮುಂಚೆ ಕೆ.ಜಿ.ಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಕೆ.ಜಿ.ಹಳ್ಳಿ ಗ್ರಾಮದ ಖಾತೆ ಪುಸ್ತಕಗಳನ್ನು ಪರಿಶೀಲಿಸಿದಾಗ ಬಹುತೇಕ ಲೋಪದೋಷಗಳು ಕಂಡು ಬಂದಿವೆ. ಕ್ರಮ ಸಂಖ್ಯೆಗಳಲ್ಲಿ ಅನೇಕ ವ್ಯತ್ಯಾಸವಾಗಿದೆ. ಸ್ವತ್ತಿನ ಬಾಬಿನಲ್ಲಿ ಕೆಲವು ಕಡೆ ಕ್ರಮ ಸಂಖ್ಯೆಗಳ ಹೆಸರಿಗೂ ತಾಳೆಯಾಗುತ್ತಿಲ್ಲ ಮತ್ತು ಮನೆ ನಿರ್ಮಿ ಸಿದ ಜಾಗದಲ್ಲಿ ಫ‌ಲಾನು ಭವಿಗಳು ಹಾಜರು ಪಡಿಸಿದ ನಮೂನೆ 9, 10 ದಾಖಲೆಗಳು ಪಂಚಾಯ್ತಿ ಖಾತೆ ಪುಸ್ತಕ ದಲ್ಲಿ ಕೈಬಿಟ್ಟಿರುತ್ತದೆ. ಇದರಿಂದ ಅಕ್ರಮ ವಾಗಿದೆ ಎಂಬುದು ಅನುಮಾನಕ್ಕೆ ಎಡೆಮಾಡಿದೆ. ಈ ಸ್ವತ್ತು ಮಾಡಿರುವುದು ಸಹ ಅವುಗಳಲ್ಲಿ ಅಕ್ರಮವಾಗಿದೆ ಎಂದು ವಿವರಿಸಿದರು.

ತಹಶೀಲ್ದಾರ್‌ ನಾಗವೇಣಿ ಮಾತನಾಡಿ, ಈ ಸರ್ವೆ ನಂಬರಿನಲ್ಲಿ ಸರ್ಕಾರಿಇಲಾಖೆಗಳ ಕೆಲವು ಕಚೇರಿಗಳಿಗೆ ಜಾಗಮೀಸಲಾಗಿದ್ದು, ಅವುಗಳಿಗೆ ಸರ್ವೆ ಕಾರ್ಯದಲ್ಲಿ ಹದ್ದುಬಸ್ತು ಪೂರ್ಣಗೊಂಡ ನಂತರ ಖಾಲಿಜಾಗ ಉಳಿದರೆ ಅರ್ಹ ಕಡುಬಡವರಿಗೆ ಗ್ರಾ.ಪಂ. ಶಿಫಾರಸು ಮಾಡಿದ ಫ‌ಲಾನುಭವಿಗಳಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನೆರೆದಿದ್ದವರಿಗೆ ತಿಳಿಸಿದರು.

ಕಾರ್ಯಾ ಚರಣೆಯಲ್ಲಿ ಸರ್ಕಲ್‌ ಇನ್ಸ್‌ ಪೆಕ್ಟರ್‌ ನಾಗರಾಜ್‌, ಮಾಸ್ತಿ ಪಿಎಸ್‌ಐ ವಸಂತಕುಮಾರ್‌, ತಾಪಂ ಸದಸ್ಯೆ ಕಾಂತಮ್ಮ, ಆರ್‌.ಐ ಮುನಿಸ್ವಾಮಿಶೆಟ್ಟಿ, ವಿಎಗಳಾದ ಸುಧಾ ಮಣಿ, ರಘು, ಪವನ್‌, ಗುರುದತ್‌, ವಿನಯ್‌, ಉಮೇಶ್‌, ರಾಹುಲ್‌ ಜೊತೆಗಿದ್ದರು.

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.