ಹಿಪ್ಪುನೇರಳೆ ಬೆಳೆಯಲ್ಲಿ ತಾಂತ್ರಿಕತೆ ಅಳವಡಿಸಿ
Team Udayavani, Feb 13, 2019, 7:28 AM IST
ಬಂಗಾರಪೇಟೆ: ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ತೋಟಗಳಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಳ್ಳುವುದರಿಂದ ಅಧಿಕ ಇಳುವರಿಯ ಸೊಪ್ಪನ್ನು ಪಡೆಯಬಹುದೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿವೃತ್ತ ಪ್ರೊಫೆಸರ್ ಡಾ.ವಿಜಯೇಂದ್ರ ತಿಳಿಸಿದರು.
ತಾಲೂಕಿನ ಕುಪ್ಪನಹಳ್ಳಿ ರೇಷ್ಮೆ ಕೃಷಿ ಕೇಂದ್ರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ರೇಷ್ಮೆ ಇಲಾಖೆ ಬಂಗಾರಪೇಟೆ ಮತ್ತು ಕೇಂದ್ರ ರೇಷ್ಮೆ ಮಂಡಳಿ ಸಹಯೋಗದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದ್ವಿತಳಿ ರೇಷ್ಮೆಯನ್ನು ಹೆಚ್ಚು ರೈತರು ಬೆಳೆಯುತ್ತಿದ್ದು ತಪ್ಪದೇ ಸರಿಯಾದ ಸೋಂಕು ನಿವಾರಕ ಬಳಸಿದರೆ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಬೆಳೆದು ಅಧಿಕ ಲಾಭ ಗಳಿಸಬಹುದೆಂದು ತಿಳಿಸಿದರು. ರೇಷ್ಮೆ ಹುಳು ಸಾಕುವ ಮನೆಗಳನ್ನು ರೈತರು ತಾಂತ್ರಿಕವಾಗಿ ಹುಳು ಸಾಕಣೆಗೆ ಯೋಗ್ಯವಾಗುವಂತೆ ಇಲಾಖೆ ಮಾರ್ಗದರ್ಶನದಲ್ಲಿ ನಿರ್ಮಿಸಿಕೊಳ್ಳಬೇಕು. ಇದರಿಂದ ರೈತರಿಗೆ ಉಪಯುಕ್ತವಾಗುತ್ತದೆ ಎಂದರು.
ಕೃಷಿ ವಿಶ್ವದ್ಯಾಲಯದ ಪೊ›ಫೆಸರ್ ಡಾ.ನಾರಾಯಣರೆಡ್ಡಿ, ಇಸ್ರೇಲ್ ತಾಂತ್ರಿಕತೆ ಬಳಸಿಕೊಳ್ಳುವ ವಿಧಾನ, ಅದರಿಂದಾಗುವ ಉಪಯೋಗ, ಯಾವ ತಾಂತ್ರಿಕತೆಯನ್ನು ಯಾವ ಅವಧಿಯಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಪ್ರತಿಯೊಬ್ಬ ರೈತರು ಮುಕ್ತವಾಗಿ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಆಗಲೇ ತಮ್ಮ ತೋಟಗಳನ್ನು ಅಭಿವೃದ್ಧಿ ಪಡಿಸಿಕೊಂಡು ಉತ್ತಮ ಪ್ರಗತಿ ಪರ ರೈತರಾಗಬಹುದು. ಕೋಲಾರದ ರೈತರು ಬೇರೆ ಭಾಗಗಳ ರೈತರು ಪ್ರಜ್ಞಾವಂತರಾಗಿದ್ದು ಇನ್ನು ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಳ್ಳಬೇಕೆಂದರು.
ಜಿಲ್ಲಾ ರೇಷ್ಮೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್, ನರೇಗಾ ಯೋಜನೆಯಲ್ಲಿ ತಮ್ಮೆಲ್ಲರ ಹಾಗೂ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದ್ದು ಅದನ್ನು ಮುಂದುವರಿಸಬೇಕು. ಈ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಎನ್.ಶ್ರೀನಿವಾಸ್ ಮಾತನಾಡಿ, ನರೇಗಾ ಯೋಜನೆಯಡಿ ರೇಷ್ಮೆ ಬೆಳೆಗಾರರು ತಮ್ಮ ತೋಟಗಳ ಸೌಲಭ್ಯ ಪಡೆಯಬೇಕು. ಉತ್ತಮ ಗುಣಮಟ್ಟದ ಸೊಪ್ಪು ಉತ್ಪಾದನೆ ಮಾಡಿ ಗುಣ ಮಟ್ಟದ ಗೂಡು ಬೆಳೆದು ಅಧಿಕ ಲಾಭ ಗಳಿಸಬೇಕು ಎಂದರು.
ರೇಷ್ಮೆ ಕೃಷಿ ವಿಜ್ಞಾನಿ ಡಾ.ಮೋರಿಸನ್ ಮಾತನಾಡಿ, ಗುಣಮಟ್ಟದ ದ್ವಿತಳಿ ರೇಷ್ಮೆ ಗೂಡು ಉತ್ಪಾದನೆ ಮಾಡಿದ್ದಲ್ಲಿ ಇಲ್ಲಿಯೇ ಎಆರ್‌ಎಂ ಘಟಕ ಸಿಬ್ಬಂದಿ ಆಗಮಿಸಿ ರೇಷ್ಮೆ ಗೂಡು ಖರೀದಿಸುತ್ತಾರೆ. ತಾಂತ್ರಿಕತೆ ಅಳವಡಿಸಿಕೊಂಡು ದ್ವಿತಳಿ ಬೆಳೆ ಬೆಳೆಯಬೇಕೆಂದರು.
ಕೋಲಾರದ ಪ್ರಗತಿಪರ ರೈತ ಕೃಷ್ಣಮೂರ್ತಿ, ಬಂಗಾರಪೇಟೆಯಲ್ಲಿ ರೇಷ್ಮೆ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೈತರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಅದೇ ರೀತಿ ಎಲ್ಲಾ ಕಡೆ ಅಧಿಕಾರಿಗಳು ರೈತರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಲು ಸೂಚನೆ ನೀಡಲು ರೇಷ್ಮೆ ಉಪನಿರ್ದೇಶಕರಲ್ಲಿ ಮನವಿ ಮಾಡಿದರು.
ರೇಷ್ಮೆ ಕೃಷಿಯಲ್ಲಿ ಅಧಿಕ ಇಳುವರಿ ಪಡೆದ ಪ್ರಗತಿಪರ ರೈತರಾದ ಗುಟ್ಟಹಳ್ಳಿ ಗೋವಿಂದಪ್ಪ, ಉರಿಗಾಂ ಚಂದ್ರು, ಕಾಲವಲಹಳ್ಳಿ ಮಾರ್ಕೊಂಡರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಜ್ಞಾನ ಕಾಲೇಜಿನ ವೆಂಕಟೇಶ್, ಸಂತೋಷ್, ರೇಷ್ಮೆ ಇಲಾಖೆ ರೇಷ್ಮೆ ಅಧಿಕಾರಿಗಳಾದ ಜಿ.ಶ್ರೀನಿವಾಸ್, ಜಯಶ್ರೀನಿವಾಸ್, ರಿಯಾಜ್ ಅಹಮದ್, ರಾಮಚಂದ್ರರಾವ್, ಬಂಗಾರಪೇಟೆ ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.