ಜಿಲ್ಲೆಯಲ್ಲಿ ಜನೌಷಧಿ ಮಳಿಗೆಗೆ ಗ್ರಹಣ
Team Udayavani, May 18, 2019, 3:46 PM IST
ಕೋಲಾರ ನಗರದ ಎಸ್‌ಎನ್‌ಆರ್ ಆಸ್ಪತ್ರೆಯ ಆವರಣದಲ್ಲಿ ಒಂದು ವರ್ಷದಿಂದಲೂ ಜನರಿಕ್ ಔಷಧ ಮಳಿಗೆಗೆ ಬೀಗ ಹಾಕಲಾಗಿದೆ.
ಕೋಲಾರ: ಬಡವರಿಗೆ ಸುಲಭ ದರದಲ್ಲಿ ಔಷಧಿಗಳು ಸಿಗಬೇಕೆಂಬ ಕಾರಣದಿಂದ ಕೇಂದ್ರ ಸರ್ಕಾರ ಆರಂಭಿಸಿದ ಜನರಿಕ್ ಔಷಧಿ ಮಳಿಗೆ ಜಿಲ್ಲಾ ಕೇಂದ್ರದಲ್ಲಿಯೇ ಮುಚ್ಚಿ ವರ್ಷ ಕಳೆದಿದೆ!. ದುಬಾರಿ ದರದ ಬ್ರಾಂಡೆಡ್ ಕಂಪನಿಗಳ ಔಷಧಿಗಳು ರಿಯಾಯ್ತಿ ದರದಲ್ಲಿ ಬಡ ರೋಗಿಗಳಿಗೆ ಸಿಗು ವಂತಾಗಬೇಕೆಂಬ ಸದುದ್ದೇಶದಿಂದ ಆರಂಭಿಸಲ್ಪಟ್ಟ ಈ ಯೋಜನೆಗೆ ಜಿಲ್ಲಾ ಕೇಂದ್ರದಲ್ಲೇ ಗ್ರಹಣ ಬಡಿಯು ವಂತಾಗಿದೆ.
ಜಿಲ್ಲಾ ಕೇಂದ್ರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಜನರಿಕ್ ಔಷಧ ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲಾಗುತ್ತಿತ್ತು. ಆಸ್ಪತ್ರೆ ಮಹಾದ್ವಾರದ ಎಡಭಾಗದಲ್ಲಿಯೇ ಔಷಧ ಮಳಿಗೆ ಇದ್ದುದ್ದರಿಂದ ಕೇವಲ ಆಸ್ಪತ್ರೆ ರೋಗಿ ಗಳಿಗಷ್ಟೇ ಅಲ್ಲ, ಹೊರಗಿನಿಂದ ಬಂದ ವರಿಗೂ ರಿಯಾಯ್ತಿ ದರದಲ್ಲಿ ಔಷಧಿ ಸಿಗುತ್ತಿತ್ತು.
ಮಳಿಗೆ ನಿರ್ವಹಿಸಲು ಟೆಂಡರ್‌ಪಡೆ ದವರು ಸೂಕ್ತವಾಗಿ ನಿರ್ವಹಿಸದ ಕಾರಣ ಎಸ್.ಎನ್.ಆರ್ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಮಾಹಿತಿಯನ್ನೂ ನೀಡದೇ ಮುಚ್ಚಿಕೊಂಡು ಹೋಗಿದ್ದಾರೆ. ಇದರಿಂದ ಬಡ ರೋಗಿಗಳಿಗೆ, ಮಧು ಮೇಹ, ರಕ್ತದೊತ್ತಡ ಇರುವವರು ದುಬಾರಿ ಬೆಲೆ ಕೊಟ್ಟು ಔಷಧಿ ಖರೀದಿಸಬೇಕಾದ ಅನಿವಾರ್ಯತೆ ಇದೆ.
ಉತ್ಸಾಹದಿಂದಲೇ ಆರಂಭ: ಕೇಂದ್ರ ಸರ್ಕಾರದ ಈ ಯೋಜನೆಗೆ ಪ್ರಾರಂಭ ದಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿತ್ತು. ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್ ಆಸ್ಪತ್ರೆ ಆವರಣದಲ್ಲಿ ಜನರಿಕ್ ಔಷಧ ಮಳಿಗೆ ಪ್ರಾರಂಭಕ್ಕೆ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಟೆಂಡರ್ ಪಡೆದುಕೊಂಡ ಸಂಸ್ಥೆಯು 2016-17ನೇ ಸಾಲಿನಲ್ಲಿ ಔಷಧಿ ಮಳಿಗೆ ಆರಂಭಿಸಿ, ನಾಲ್ಕೈದು ಮಂದಿ ಸಿಬ್ಬಂದಿ ನೇಮಕ ಮಾಡಿತ್ತು. ಆರಂಭದಲ್ಲಿ ಜನರಿಕ್ ಔಷಧಿಗೆ ಸಿಕ್ಕ ಪ್ರಚಾರದಿಂದಾಗಿ ವ್ಯಾಪಾರವೂ ಚೆನ್ನಾ ಗಿಯೇ ಆಗುತ್ತಿತ್ತು. ನಂತರ ಸಿಬ್ಬಂದಿಗೂ ವೇತನ ನೀಡಲಾಗದೇ, ಮಳಿಗೆ ನಡೆಸಲು ಸಾಧ್ಯವಾಗದೇ ಏಕಾಏಕಿ ಮುಚ್ಚಿಕೊಂಡು ಹೋಗಲಾಗಿದೆ.
ಕಮಿಷನ್ ಕಡಿಮೆ: ಜನರಿಕ್ ಔಷಧಿ ಮಳಿಗೆಯಲ್ಲಿ ಬ್ರಾಂಡ್ ಔಷಧಿಗಳನ್ನು ಶೇ.30 ರಿಯಾಯ್ತಿ ದರದಲ್ಲಿ ಮಾರಾಟ ಮಾಡಬೇಕೆಂಬ ನಿಯಮವಿತ್ತು. ಆದರೆ, ಔಷಧಿ ಮಳಿಗೆಗಳು ಆರಂಭವಾದ ನಂತರ ಕೆಲವು ಔಷಧಿಗಳನ್ನು ಶೇ.50 ದರದಲ್ಲಿ ಮಾರಾಟ ಮಾಡಬೇಕೆಂಬ ಸೂಚನೆ ನೀಡಲಾಯಿತು. ಇದಕ್ಕಾಗಿ ಮಾರಾಟಗಾರರಿಗೆ ಶೇ.7 ರಿಂದ 10 ರಷ್ಟು ಕಮಿಷನ್ ನೀಡುವುದಾಗಿಯೇ ಹೇಳಲಾಗಿತ್ತು. ಆದರೆ, ಇದನ್ನು ಸರಿ ಯಾಗಿ ಪಾಲಿಸದ ಕಾರಣದಿಂದ ಜನರಿಕ್ ಔಷಧಿ ಮಳಿಗೆಗೆ ಬೀಗ ಹಾಕು ವಂತಾಗಿದೆ ಎಂದು ಹೇಳಲಾಗುತ್ತಿದೆ.
ಉಚಿತ ಔಷಧಿ: ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಬೇಕೆಂದು ಸೂಚಿಸಲಾಗಿರುವ ಜಿಲ್ಲಾ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಸರ್ಕಾರ ರಾಷ್ಟ್ರೀಯ ಉಚಿತ ಔಷಧಿ ಸರಬರಾಜು ಯೋಜನೆಯಿಂದ ಗುಣಮಟ್ಟದ ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ರೋಗಿಗಳಿಗೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಹೊರಗಿನಿಂದ ತರುವಂತೆ ಚೀಟಿ ನೀಡುವಂತಿಲ್ಲ ಎಂಬ ಸುತ್ತೋಲೆ ಸರ್ಕಾರ ಹೊರಡಿಸಿದೆ. ಈ ಸುತ್ತೋಲೆ ಹಾಗೂ ಉಚಿತ ಔಷಧಿ ವಿತರಣೆಯಿಂದಾಗಿ ಸರಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಔಷಧಿ ಮಳಿಗೆಗಳು ಖಾಲಿ ಹೊಡೆಯುವಂತಾ ಯಿತು. ಖಾಸಗಿ ಯಾಗಿಯೂ ಬಹು ತೇಕ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳಲ್ಲಿ ಅಲ್ಲಿಯೇ ಔಷಧಿ ಮಾರಾಟ ಮಾಡು ತ್ತಿರುವುದ ರಿಂದ ಜನರಿಕ್ ಔಷಧ ಮಳಿಗೆಗೆ ಗ್ರಾಹಕರೇ ಇಲ್ಲದಂತಾ ಯಿತು. ಜನರಿಕ್ ಔಷಧಿ ಮಳಿಗೆಗೆ ನಷ್ಟ ಸಂಭ ವಿಸಲು ಈ ಅಂಶವು ಪ್ರಮುಖ ಕಾರಣವಾಗಿದೆ.
ಜನತಾ ಬಜಾರ್: ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಯ ಆವರಣದಲ್ಲಿ 10 ವರ್ಷಗಳ ಹಿಂದೆಯೇ ಟಿಎಪಿಸಿಎಂಸ್ ಮೂಲಕ ಜನತಾ ಬಜಾರ್ ಔಷಧ ಮಳಿಗೆ ನಡೆಯುತ್ತಿದೆ. ಇಲ್ಲಿ ಸಾರ್ವ ಜನಿಕರಿಗೆ ಹತ್ತು ವರ್ಷ ಗಳಿಂದಲೂ ಶೇ.10 ರಿಯಾಯ್ತಿ ದರದಲ್ಲಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಜನರಿಕ್ ಔಷಧಿ ಮಳಿಗೆ ಕೋಲಾರದಲ್ಲಿ ಜನ ಪ್ರಿಯ ವಾಗದಿರಲು ಜನತಾ ಬಜಾರ್ ಜನ ಪ್ರಿಯವಾಗಿರುವುದೂ ಕಾರಣ ವಾಗಿದೆ.
ತಾಲೂಕಿಗೊಂದು ಜನೌಷಧ ಮಳಿಗೆ: ಜಿಲ್ಲಾ ಕೇಂದ್ರದ ಜನರಿಕ್ ಔಷಧಿ ಮಳಿಗೆಯ ಪರಿಸ್ಥಿತಿಯೇ ಹೀಗಿರುವಾಗ ಇನ್ನು ತಾಲೂಕಿಗೊಂದರಂತೆ ತೆರೆದಿರುವ ಜನರಿಕ್ ಔಷಧಿ ಮಳಿಗೆಗಳು ತೆವಳುತ್ತಾ ಸಾಗಿವೆ. ಬಂಗಾರಪೇಟೆ ಹೊರತುಪಡಿಸಿ ಉಳಿದ ತಾಲೂಕು ಆಸ್ಪತ್ರೆಗಳಲ್ಲಿಯೂ ಜನರಿಕ್ ಔಷಧಿ ಮಳಿಗೆಗಳಿವೆ. ಆದರೂ ಇವು ಎಡವುತ್ತಾ ಸಾಗುತ್ತಿವೆ. ಆಸ್ಪತ್ರೆ ಆವರಣಗಳಲ್ಲಿರುವ ಜನರಿಕ್ ಔಷಧಿ ಮಳಿಗೆಗಿಂತಲೂ ಪ್ರತಿ ತಾಲೂಕಿಗೊಂದರಂತೆ ಖಾಸಗಿಯವರಿಗೆ ನೀಡಿರುವ ಜನೌಷಧ ಮಳಿಗೆಗಳಲ್ಲಿ ಸುಲಭ ದರದಲ್ಲಿ ಔಷಧಿಗಳು ಸಿಗು ವಂತಾಗಿದೆ. ಕೋಲಾರದ ಬ್ರಾಹ್ಮಣರ ಬೀದಿಯಲ್ಲಿರುವ ಜನೌಷಧ ಮಳಿಗೆ ಈ ನಿಟ್ಟಿನಲ್ಲಿ ಜನರ ಕೈಗೆಟುಕುತ್ತಿದೆ.
ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ: ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಯ ಆವರಣದಲ್ಲಿದ್ದ ಜನರಿಕ್ ಔಷಧಿ ಮಳಿಗೆ ಯನ್ನು ಏಕಾಏಕಿ ಮುನ್ಸೂಚನೆ ಇಲ್ಲದೆ ಮುಚ್ಚಿಕೊಂಡು ಹೋಗಿರುವ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಟೆಂಡರ್ ಪಡೆದವರಿಗೂ ಪತ್ರ ಬರೆದಿದ್ದಾರೆ. ಆದರೆ, ಯಾವುದಕ್ಕೂ ಸ್ಪಂದನೆ ವ್ಯಕ್ತವಾಗಿಲ್ಲ. ಇದರಿಂದಾಗಿ ಕಳೆದ ವರ್ಷದಿಂದಲೂ ಜನಸಂಜೀವಿನಿ ಜನರಿಕ್ ಔಷಧ ಮಳಿಗೆಗೆ ಬೀಗ ಬೀಳುವಂತಾಗಿದೆ.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.