ಗಡಿ ಗ್ರಾಮಗಳಲ್ಲಿ ಕೊರೊನಾ ಸೋಂಕು ಹೆಚ್ಚಳ
Team Udayavani, May 31, 2021, 7:30 PM IST
ಬಂಗಾರಪೇಟೆ: ಗಡಿ ಗ್ರಾಮಗಳಲ್ಲಿಕೊರೊನಾ 2ನೇ ಅಲೆ ಸೋಂಕು ಏರುತ್ತಲೇ ಇದೆ. ಅದನ್ನು ಹತೋಟಿಗೆತರಬೇಕಾದರೆ ಲಸಿಕೆ ಹಾಕಿಸಿಕೊಳ್ಳುವುದೊಂದೆ ಏಕೈಕ ಮಾರ್ಗ ಎಂದುತಾಲೂಕು ಪಂಚಾಯ್ತಿ ಅಧ್ಯಕ್ಷ ಟಿ.ಮಹದೇವ್ ತಿಳಿಸಿದರು.
ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ ಕೊರೊನಾ ಲಸಿಕಾ ಅಭಿಯಾನಕ್ಕೆ ಚಾಲನೆನೀಡಿ ಮಾತನಾಡಿ, ಕೊರೊನಾ 2ನೇಅಲೆಯ ಬಗ್ಗೆ ಜನರಲ್ಲಿ ಆತಂಕ ಇದೆ.ಅದು ನಿವಾರಣೆ ಆಗಬೇಕಾದರೆಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆಪಡೆಯಬೇಕು. ಲಾಕ್‌ಡೌನ್ ವೇಳೆಬೇಕಾಬಿಟ್ಟಿ ಓಡಾಡದೇ ಮನೆಯಲ್ಲೇಇರಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗಗಳಲ್ಲಿ ಲಸಿಕೆ ಬಗ್ಗೆಇನ್ನೂ ಅನುಮಾನ ಇದೆ. ವದಂತಿಗಳಿಗೆ ಯಾರೂ ಕಿವಿಕೊಡಬೇಡಿ. ಲಸಿಕೆಬಗ್ಗೆ ಅನುಮಾನವಿದ್ದರೆ ನೇರವಾಗಿವೈದ್ಯರನ್ನು ಸಂಪರ್ಕಿಸಿ ಬಗೆಹರಿಸಿಕೊಂಡುಲಸಿಕೆ ಪಡೆಯಿರಿ. ಲಸಿಕೆ ಪಡೆದವರದೇಹದಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗಿ ಬಹಳಷ್ಟು ಮಂದಿಗೆ ಕೊರೊನಾಸೋಂಕು ಕಂಡು ಬಂದಿಲ್ಲ. ಒಂದು ವೇಳೆ ಕಂಡು ಬಂದರೂ ಯಾವುದೇಅನಾಹುತಕ್ಕೆ ಎಡೆಮಾಡಿ ಕೊಡುವುದಿಲ್ಲ.
3ನೇ ಅಲೆ ಕಂಡು ಬರುವುದಕ್ಕೆಮುಂಚಿತವಾಗಿ ಪ್ರತಿಯೊಬ್ಬರೂ ಲಸಿಕೆಪಡೆದು ಸೋಂಕನ್ನು ಹೋಗಲಾಡಿಸಲು ಕೈ ಜೋಡಿಸಬೇಕು ಎಂದು ವಿವರಿಸಿದರು.ಎಳೇಸಂದ್ರ ಗ್ರಾಮ ಪಂಚಾಯ್ತಿಅಧ್ಯಕ್ಷ ಶ್ರೀನಿವಾಸರೆಡ್ಡಿ, ಪಿಡಿಒ ವಸಂತ್‌ಕುಮಾರ್, ಕಾರ್ಯದರ್ಶಿ ಸನಾವುಲ್ಲಾಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.