ಎಸ್ಸೆಸ್ಸೆಲ್ಸಿ ಉರ್ದು ಮಾಧ್ಯಮ ಫಲಿತಾಂಶ ಹೆಚ್ಚಿಸಿ
Team Udayavani, Feb 13, 2019, 7:28 AM IST
ಕೋಲಾರ: ಉರ್ದು ಮಾಧ್ಯಮದಲ್ಲಿನ ಫಲಿತಾಂಶ ಕುಸಿತ ಇಡೀ ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ಸರಿಪಡಿಸಲು ಕ್ರಮವಹಿಸದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದು ಜಿಪಂ ಸಿಇಒ ಜಿ.ಜಗದೀಶ್ ಶಾಲೆಗಳ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು. ತಮ್ಮ ಕಚೇರಿಯಲ್ಲಿ ಉರ್ದು ಪ್ರಥಮ ಭಾಷೆ ಹೊಂದಿರುವ ವಿದ್ಯಾರ್ಥಿಗಳಿಗಾಗಿ “ನನ್ನನ್ನೊಮ್ಮೆ ಗಮನಿಸಿ’ ಮಾದರಿ ಪ್ರಶ್ನೆಕೋಠಿ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲೆಯ ಪದವಿ ಪೂರ್ವ ಕಾಲೇಜು ಸೇರಿದಂತೆ ಪ್ರಥಮ ಭಾಷೆ ಉರ್ದು ಇರುವ 27 ಶಾಲೆ ಜಿಲ್ಲೆಯಲ್ಲಿದ್ದು, ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಗಮನಹರಿಸುವ ಅಗತ್ಯವಿದೆ ಎಂದು ತಿಳಿಸಿದರು.ಕಳೆದ ಹಲವು ವರ್ಷಗಳ ಫಲಿತಾಂಶ ಗಮನಿಸಿದಾಗ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಕಡಿಮೆ ಬಂದಿರುವುದು ಇಡೀ ಜಿಲ್ಲೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
ಇದನ್ನು ಸರಿಪಡಿಸಲು ಈಗಾಗಲೇ ಸ್ವತಃ ನಾನೇ ಜೂನಿಯರ್ ಕಾಲೇಜುಗಳ ಉಪಪ್ರಾಂಶುಪಾಲರ ಸಭೆ ನಡೆಸಿದ್ದೇನೆಂದರು. ಡಿಡಿಪಿಇ ಕೆ.ರತ್ನಯ್ಯ, ಈಗಾಗಲೇ ಜೂನಿಯರ್ ಕಾಲೇಜುಗಳ ಫಲಿತಾಂಶ ಕುಸಿತ ತಪ್ಪಿಸಲು ಪ್ರತಿ ಸಂಸ್ಥೆಗೂ ಓರ್ವ ನೋಡೆಲ್ ಅಧಿ ಕಾರಿಯನ್ನು ನೇಮಿಸಲಾಗಿದೆ. ಅಲ್ಲಿ ಕಲಿಕೆ ದೃಢೀಕರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ವರ್ಕ್‌ಶೀಟ್ ಮತ್ತು ಆರು ಸೆಟ್ ಪ್ರಶ್ನೆಪತ್ರಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕಟ್ಟಪ್ಪಣೆ ಮಾಡಲಾಗಿದೆ. ಮಕ್ಕಳಿಗೆ ಪುಸ್ತಕ ಕೊಟ್ಟು ಬರೆಸಿದ ನಂತರ ಅದೇ ಪ್ರಶ್ನೆಪತ್ರಿಕೆ ನೋಡದೇ ಉತ್ತರಿಸಲು ಅವಕಾಶ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ನೋಡೆಲ್ ಅ ಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಉರ್ದು ಪ್ರಥಮ ಭಾಷೆ ಇರುವ ಮಕ್ಕಳು ತೃತೀಯ ಭಾಷೆ ಕನ್ನಡದಲ್ಲೇ ಅತಿ ಹೆಚ್ಚು ಅನುತ್ತೀರ್ಣಗೊಳ್ಳುತ್ತಿದ್ದಾರೆ, ಇದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು. ಈ ವೇಳೆ ಈ ಬಾರಿ “ನನ್ನನ್ನೊಮ್ಮೆ ಗಮನಿಸಿ’ಮಾದರಿ ಪ್ರಶ್ನೆಕೋಠಿಯನ್ನು ಉರ್ದು ಪ್ರಥಮಭಾಷೆ, ಕನ್ನಡ ತೃತೀಯ ಭಾಷೆ ಇರುವಂತೆ ಸಿದ್ಧಗೊಳಿಸಿ ಒದಗಿಸಲಾಗಿದೆ ಎಂದರು.
ಉರ್ದು ಪ್ರಥಮ ಭಾಷೆ ಇರುವ ಮಕ್ಕಳು ಈ ಬಾರಿ ತೃತೀಯ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗದಂತೆ ಕ್ರಮವಹಿಸಿ, ಅವರಿಗೆ ಮಾದರಿ ಪ್ರಶ್ನೆಕೋಠಿ ನೀಡಿ ಬರೆಸಿ ಕಲಿಕೆ ದೃಢೀಕರಣಗೊಳಿಸಿಕೊಳ್ಳಲು ಎಲ್ಲಾ ಉಪಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.