ನಕಲಿ ಪ್ರಮಾಣ ಪತ್ರ ನೀಡಿ ನಗರಸಭೆಗೆ ಆಯ್ಕೆ
Team Udayavani, Jan 24, 2020, 1:16 PM IST
ಕೋಲಾರ: ಸರವಣಕುಮಾರ್ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ನಗರಸಭೆ ಸದಸ್ಯ ರಾಗಿ ಆಯ್ಕೆಯಾಗಿದ್ದು, ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೆಜಿಎಫ್ ನಗರದ ಅಂಡ್ರಸನ್ ಪೇಟೆನಿವಾಸಿಗಳು ಜಿಲ್ಲಾಧಿ ಕಾರಿ ಜೆ.ಮಂಜುನಾಥ್‌ರಿಗೆ ದೂರು ಸಲ್ಲಿಸಿದರು.
ಜಿಲ್ಲೆಯ ಕೆಜಿಎಫ್ ನಗರಸಭೆಯ ಅಂಡ್ರಸನ್ ಪೇಟೆ ಬಡಾವಣೆಯ ಮೀಸಲಾತಿ ಎಸ್ಟಿ ನಾಯಕ ಸಮುದಾಯಕ್ಕೆ ನಿಗದಿಯಾಗಿತ್ತು, ಸರವಣ ಕುಮಾರ್ ಅರ್ಹತೆಯಿಲ್ಲದಿದ್ದರೂ ಚುನಾಣೆಯ ದಾಖಲಾತಿಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಹಾಕಿ ನಾಯಕ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ಅಂಡ್ರಸನ್ ನಿವಾಸಿ ಸಂಪತ್ ಕುಮಾರ್ ದೂರಿದರು.
ಸರವಣಕುಮಾರ್ ಮೂಲತಃ ತಮಿಳುನಾಡು ರಾಜ್ಯವರಾಗಿದ್ದು, ವ್ಯಾಪಾರಕ್ಕಾಗಿ ಕೆಜಿಎಫ್‌ಗೆ ಬಂದಿದ್ದಾರೆ. ಅವರು ಕಮ್ಮನಾಯ್ಡು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ನಗರಸಭೆ ಸದಸ್ಯ ಸರವಣ ಕುಮಾರ್ ವಿರುದ್ಧ ಕೆಜಿಎಫ್ ತಹಶೀಲ್ದಾರ್ ಅವರೂ ರಾಬರ್ಟ್‌ಸನ್ ಪೇಟೆ ಠಾಣೆಗೆ ದೂರು ನೀಡಿದ್ದಾರೆ ಎಂದರು.
ಸರವಣ ಕುಮಾರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದಾರೆ. ಇವರು ಅಸಲಿ ಎಸ್‌ಟಿ ಸಮುದಾಯದವರಿಗೆ ವಂಚನೆ ಮಾಡಿದ್ದು, ಸರವಣ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ ಎಂದು ವಿವರಿಸಿದರು. ಸರವಣ ಕುಮಾರ್ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧ ಮೂಲ ದಾಖಲೆಗಳನ್ನು ಸಲ್ಲಿಸುವ ತನಕ ನಗರಸಭೆ ಸದಸ್ಯತ್ವವನ್ನು ರದ್ದುಪಡಿಸಿ ಹೈ ಕೋರ್ಟ್ ಆದೇಶ ಹೊರಡಿಸಿದೆ. ಜಿಲ್ಲಾಧಿ ಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸರವರಣ ವಿರುದ್ಧ ಕ್ರಮಕೈಗೊಂಡು ನಾಯಕ ಸಮುದಾಯದವರಿಗೆ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.