ಬಯಲು ಸೀಮೆಯಲ್ಲಿ ಜೆಡಿಎಸ್‌ಗೆ ನಾಯಕತ್ವ ಕೊರತೆ
Team Udayavani, Dec 22, 2020, 3:09 PM IST
ಕೋಲಾರ: ಜನತಾ ಪರಿವಾರದ ಭದ್ರಕೋಟೆಯಾಗಿದ್ದ ಕೋಲಾರ ಜಿಲ್ಲೆಯಲ್ಲಿಯೇ ಪರಿವಾರದ ಜೆಡಿಎಸ್ ಪಕ್ಷವು ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗಿಬಿಡುತ್ತದೆ ಎಂಬ ಚರ್ಚೆಗಳು ನಡೆಯುತ್ತಿರುವಾಗ ಕೋಲಾರ ಜಿಲ್ಲೆಯಲ್ಲಿ ಜನತಾ ಪರಿವಾರ ಸಾಗಿ ಬಂದ ಹಾದಿಯನ್ನು ಅವಲೋಕಿಸಲಾಗಿದೆ.
ಅವಿಭಜಿತಕೋಲಾರ ಜಿಲ್ಲೆಯಲ್ಲಿ 1985 ರಲ್ಲಿ ನಡೆದ ಚುನಾವಣೆಯಲ್ಲಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ಬಾಗೇ ಪಲ್ಲಿಕಾಂಗ್ರೆಸ್ ಗೆದ್ದಿದ್ದುಹೊರತು ಪಡಿಸಿ, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಜನತಾ ಪಕ್ಷ ಹಾಗೂ ಸಿಪಿಎಂ ಅಭ್ಯರ್ಥಿಗಳು ಗೆಲುವುಸಂಪಾದಿಸಿ ಜನತಾ ಪರಿವಾರದ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿಕೊಂಡಿತ್ತು. 2018 ರಲ್ಲಿ ಜರುಗಿದ ಚುನಾವಣೆಯಲ್ಲಿ ಅದೇ12 ವಿಧಾನಸಭಾ ಕ್ಷೇತ್ರಗಳ ಪೈಕಿ ಕೋಲಾರ ಜಿಲ್ಲೆಯಿಂದ ಒಬ್ಬರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಬ್ಬರು ಅಷ್ಟೇ ಜೆಡಿಎಸ್ ಶಾಸಕರಾಗಿದ್ದಾರೆ.
ಕಾಂಗ್ರೆಸ್ ವಿರೋಧಿ ಅಲೆ: ಕೋಲಾರ ಜಿಲ್ಲೆಯಲ್ಲಿ 70-80 ರ ದಶಕದಿಂದಲೂ ರಾಜಕಾರಣದಲ್ಲಿಕಾಂಗ್ರೆಸ್ ವಿರೋಧಿ ಅಲೆ ಎದ್ದು ಕಾಣಿಸುತ್ತಿತ್ತು. ರೈತರು ಹಾಗೂ ಕಾರ್ಮಿಕ ಚಳವಳಿಯಲ್ಲಿ ಸೈ ಎನಿಸಿಕೊಂಡಿದ್ದ ಜಿಲ್ಲೆಯಲ್ಲಿ ಎಡಪಂಥೀಯ ಅಲೆ ವಿಪರೀತವಾಗಿತ್ತು. ನಾಲ್ಕೈದುಕ್ಷೇತ್ರಗಳಲ್ಲಿ ಸಿಪಿಎಂ ಶಾಸಕರೇ ಗೆಲ್ಲುತ್ತಿದ್ದರು. ತುರ್ತು ಪರಿಸ್ಥಿತಿ ನಂತರದ ದಿನಗಳಲ್ಲಿ ಕಾಂಗ್ರೆಸ್ ವಿರೋಧಿಅಲೆಹೆಚ್ಚಾಗತೊಡಗಿತು.ಪಟ್ಟಾಭಿರಾಮನ್‌ರಂತ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಕಾಂಗ್ರೆಸ್ ಪಕ್ಷ ಮೂಲೆಗುಂಪು ಮಾಡಿಸಲುಹೋರಾಟರೂಪಿಸಿದ್ದರು.
ಬೇರೂರಿದ ಜನತಾ ಪಕ್ಷ: ಸರಿಯಾಗಿ ಅದೇ ಸಮಯದಲ್ಲಿ ಕಾಂಗ್ರೆಸ್ ವಿರೋಧಿಗಳ ಒಕ್ಕೂಟವಾಗಿ ರಾಮ ಕೃಷ್ಣಹೆಗಡೆ ನೇತೃತ್ವದ ಜನತಾಪಕ್ಷವು ಕೋಲಾರ ಜಿಲ್ಲೆಯಲ್ಲಿ ಅಚ್ಚುಮೆಚ್ಚಿನ ರಾಜಕೀಯ ಪಕ್ಷವಾಗಿ ಬೇರೂರತೊಡಗಿತು. ಇದೇ ಕಾರಣದಿಂದಲೇ 1985 ರ ಚುನಾವಣೆಯಲ್ಲಿ ಜನತಾಪಕ್ಷಕ್ಕೆವಿರೋಧಿಗಳೇ ಇಲ್ಲದಂತೆ ಭಾಸವಾಗುತ್ತಿತ್ತು.ಇದೇಪರಿಸ್ಥಿತಿಆನಂತರ3 ವಿಧಾನಸಭಾ ಚುನಾವಣೆಗಳವರೆಗೂ ಮುಂದುವರಿದಿತ್ತು.
ಜನತಾ ಪಕ್ಷ ವಿಭಜನೆ: ರಾಜ್ಯ ರಾಜಕಾರಣದಲ್ಲಿ ಜನತಾ ಪಕ್ಷವು ವಿಭಜನೆಯಾದ ನಂತರ ಕೋಲಾರ ಜಿಲ್ಲೆಯ ಪ್ರಭಾವಿ ರಾಜಕಾರಣಿ ಸಿ.ಬೈರೇಗೌಡರು ಸಂಯುಕ್ತ ಜನತಾದಳದಲ್ಲಿ ಉಳಿದುಕೊಂಡರು. ಆ ಸಂದರ್ಭದಲ್ಲಿ ಜೆಡಿಎಸ್‌ಗೆ ಕೋಲಾರ ಜಿಲ್ಲೆಯಲ್ಲಿ ಅಸ್ತಿತ್ವವೇ ಇರಲಿಲ್ಲ.
2003 ರಲ್ಲಿ ಬೈರೇಗೌಡರು ನಿಧನರಾದ ನಂತರ ಕೋಲಾರ ಜಿಲ್ಲೆ ಸಂಯುಕ್ತ ಜನತಾದಳದ ಮುಖಂಡರುಬೈರೇಗೌಡರ ಪುತ್ರ ಕೃಷ್ಣಬೈರೇಗೌಡ ಸೇರಿದಂತೆ ಎಸ್. ಎಂ.ಕೃಷ್ಣ ಸಮ್ಮುಖದಲ್ಲಿಕಾಂಗ್ರೆಸ್ ಪಕ್ಷ ಸೇರಿಕೊಂಡರು. ಆನಂತರವಷ್ಟೇ ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಮತ್ತೇ ಪ್ರಭಾವಗೊಂಡಿತು.
ಸ್ವಾರ್ಥ, ಜಾತಿ ರಾಜಕಾರಣ: 2003ರ ನಂತರ ಜನತಾಪರಿವಾರವನ್ನು ಬೈರೇಗೌಡರಂತೆ ಮುನ್ನಡೆಸುವ ನಾಯಕತ್ವದಕೊರತೆ ಕೋಲಾರ ಜಿಲ್ಲೆಗೆ ಎದುರಾಯಿತು.ಕಾಂಗ್ರೆಸ್ ಸೇರ್ಪಡೆಯಾಗಿ ಗೆದ್ದ ಜನತಾಪರಿವಾರದವರು ತಮ್ಮಕ್ಷೇತ್ರಗಳಿಗಷ್ಟೇ ಸೀಮಿತವಾಗಿಬಿಟ್ಟರು.ಹೀಗೆ ಗೆದ್ದವರು ಕ್ಷೇತ್ರಗಳಲ್ಲಿಯೂ ಸಮಸ್ತ ಜನರ ವಿಶ್ವಾಸ ಗಳಿಸುವುದನ್ನು ಮರೆತು ತಮ್ಮ ಹಿಂಬಾಲಕರು ಹಾಗೂ ಸ್ವಜಾತಿಯವರಿಗಷ್ಟೇ ಮಣೆ ಹಾಕಲು ಶುರುವಿಟ್ಟುಕೊಂಡರು. ಶಾಸಕರ ಈ ಪಾಳೇಗಾರಿಕೆ ವರ್ತನೆ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿಯೂ ಶೇ.60 ಕ್ಕಿಂತಲೂ ಹೆಚ್ಚು ಮತದಾರರಿರುವ ಅಹಿಂದ
ವರ್ಗಗಳನ್ನುಕೆರಳಿಸುವಂತೆ ಮಾಡಿತ್ತು. ಅಹಿಂದ ಚಳವಳಿ: ಸರಿಯಾಗಿ ಇದೇ ಹಂತದಲ್ಲಿದಲಿತ, ರೈತ, ಕಾರ್ಮಿಕ ಹೋರಾಟಗಳು ಅಹಿಂದ ಚಳವಳಿಯಾಗಿ ಮಾರ್ಪಡುತ್ತಿತ್ತು. ಅಹಿಂದ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಚಿಗುರಲು ಆರಂಭವಾಯಿತು. ರಾಜಕೀಯವಾಗಿ ಜಾಗೃತರಾಗಿ ಒಗ್ಗೂಡಿ ಮತ ಚಲಾಯಿಸದಿದ್ದರೆ ಉಳಿಗಾಲವಿಲ್ಲವೆಂಬುದು ಅಹಿಂದ ವರ್ಗದವರಿಗೆ ಮನವರಿಕೆಯಾಗಿತ್ತು.
ಕಮಲ ಅರಳಲು ಮುನ್ನುಡಿ: ಇದಕ್ಕೂ ಮುನ್ನ 90 ರ ದಶಕದಲ್ಲಿ ಆಯೋಧ್ಯಾ ರಥಯಾತ್ರೆ, ರಾಮ ಜನ್ಮಭೂಮಿ ಹೋರಾಟಗಳಿಂದ ಕೋಲಾರಜಿಲ್ಲೆಯಲ್ಲಿಯೂ ಬಿಜೆಪಿ ರಾಜಕೀಯವಾಗಿ ಕಣ್ಣು ಬಿಡಲು ಆರಂಭಿಸಿತ್ತು. ಈ ಅಲೆಯ ಪ್ರಭಾವದಿಂದಲೇಮೊಟ್ಟ ಮೊದಲ ಬಾರಿಗೆ 2004 ರ ಚುನಾವಣೆಯಲ್ಲಿ ಬಂಗಾರಪೇಟೆಯಲ್ಲಿ ಬಿ.ಪಿ.ವೆಂಕಟಮುನಿಯಪ್ಪ ಹಾಗೂ ಮಾಲೂರಿನಲ್ಲಿ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಬಿಜೆಪಿ ಶಾಸಕರಾಗಿ ಗೆದ್ದು ಹೋರಾಟದ ಜಿಲ್ಲೆಯಲ್ಲಿ ಕಮಲ ಅರಳಿಸಲು ಮುನ್ನುಡಿ ಬರೆದಿದ್ದರು.
ವರ್ತೂರು ಆಗಮನ: 2008 ರ ವಿಧಾನಸಭಾ ಚುನಾವಣೆ ವೇಳೆಗೆ ಕೋಲಾರ ಜಿಲ್ಲಾ ಕೇಂದ್ರಕ್ಕೆ ಅಹಿಂದ ಚಳವಳಿ ಹಾಗೂ ಮತದಾರರನ್ನು ನಂಬಿಕೊಂಡುಜಿಲ್ಲೆಯ ರಾಜಕೀಯ ಪ್ರವೇಶಿಸಿದ ವರ್ತೂರು ಪ್ರಕಾಶ್ ಪಾಳೇಗಾರಿಕೆ ಮನಸ್ಥಿತಿಯ ಸ್ವಜಾತಿ ಸ್ವಹಿತದ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದ್ದರು. ಅಹಿಂದ ವರ್ಗದವರು ವರ್ತೂರು ಪ್ರಕಾಶ್ ಬೆನ್ನಿಗೆ ಎರಡು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆನಿಂತಿದ್ದರೆಂದರೆ ಸ್ವತಃ ಕುಮಾರಸ್ವಾಮಿ ಬಂದು ಪ್ರಚಾರ ಮಾಡಿ ಹೋಗಿದ್ದರೂ ಸ್ಪಂದಿಸಿರಲಿಲ್ಲ.
ಕುಮಾರಸ್ವಾಮಿ ರಾಜಕೀಯ ಪ್ರಭಾವ ಕ್ಷೀಣ :
ಹಿಂದೊಮ್ಮೆ ಅವಿಭಜಿತ ಕೋಲಾರ ಜಿಲ್ಲೆಯ ಹನ್ನೆರೆಡು ಕ್ಷೇತ್ರಗಳಲ್ಲಿಯೂ ಪ್ರಾಬಲ್ಯಹೊಂದಿದ್ದ ಜನತಾಪಕ್ಷ, ಸಂಯುಕ್ತ ಜನತಾದಳ ಹಾಗೂ ಜೆಡಿಎಸ್ ಇದೀಗಕ್ರಮೇಣ ಕರಗತೊಡಗಿದೆ. ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಂತೆಯೇ ಜೆಡಿಎಸ್‌ನ ಭದ್ರಕೋಟೆ ಎಂಬಂತಿದ್ದ ಕೋಲಾರದಲ್ಲಿ ಅಹಿಂದ ಗಾಳಿ ಬೀಸತೊಡಗಿದ ಮೇಲೆ, ಬಿಜೆಪಿ ಅರಳುತ್ತಿರುವುದರಿಂದ ಜೆಡಿಎಸ್ ಅಸ್ತಿತ್ವ ಬಲಹೀನವಾಗುತ್ತಿದೆ. ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಬಗ್ಗೆ ಅತಿಯಾದ ಒಲವು ಇಟ್ಟುಕೊಂಡಿದ್ದ ಕೋಲಾರದ ಬಹುತೇಕ ನಾಯಕರು ಹಾಗೂ ಕಾರ್ಯಕರ್ತರು ಈಗ ಪಕ್ಷದಿಂದಲೇ ವಿಮುಖರಾ ಗುತ್ತಿದ್ದಾರೆ. ಜೆಡಿಎಸ್ ಶಾಸಕರು ಸ್ವಾರ್ಥಕ್ಕೆ ಸ್ವಜನ ಪಕ್ಷಪಾತಿಗಳಾಗಿದ್ದಾರೆ. ಇವೆಲ್ಲದರಿಂದಾಗಿ ಕುಮಾರ ಸ್ವಾಮಿ ಪ್ರಭಾವ ಕೋಲಾರ ಜಿಲ್ಲೆಯ ಮತದಾರರ ಮೇಲೆಅದರಲ್ಲೂ ಅಹಿಂದ ಮತದಾರರ ಮೇಲೆ ಇಲ್ಲವೇ ಇಲ್ಲ.ಇದು ಸಹ ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಅವನತಿಗೆ ಕಾರಣವಾಗುತ್ತಿದೆ.
ಹಿರಿಯರ ನಿಧನ :
ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಬದಲಾವಣೆಯಿಂದ ಜೆಡಿಎಸ್ ಮುಳಬಾಗಿಲು, ಬಂಗಾರಪೇಟೆ ಮತ್ತು ಶ್ರೀನಿವಾಸಪುರ ಕ್ಷೇತ್ರವನ್ನು ಕಳೆದುಕೊಂಡಿತ್ತು. ಜನತಾ ಪರಿವಾರದ ಆಲಂಗೂರು ಶ್ರೀನಿವಾಸ್, ಭಕ್ತವತ್ಸಲಂ ನಿಧರಾಗಿದ್ದರಿಂದ ಮುಳಬಾಗಿಲುಕೆಜಿಎಫ್ನಲ್ಲಿ ಜೆಡಿಎಸ್ ಪ್ರಾಬಲ್ಯಕುಸಿಯಿತು. ಮಾಲೂರಿನ ಮಂಜುನಾಥಗೌಡ ಒಂದೇ ಅವಧಿಗೆ ಆರ್ಭಟಿಸಿ ಮರೆಯಾದರು. ಅಹಿಂದ ಅಬ್ಬರದಲ್ಲಿ ಹತ್ತು ವರ್ಷ ಮಾಜಿಯಾಗಿದ್ದಕೆ.ಶ್ರೀನಿವಾಸಗೌಡ ಮತ್ತದೇ ವರ್ತೂರು ಪ್ರಕಾಶ್ ವಿರೋಧಿ ಅಲೆಯಲ್ಲಿ ಗೆದ್ದು ಸದ್ಯಕ್ಕೆ ಜೆಡಿಎಸ್‌ನ ಏಕೈಕ ಆಸರೆಯಾಗಿದ್ದಾರೆ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.