ಜಂಬು ನೇರಳೆ ಬಲು ದುಬಾರಿ
ಪೂರೈಕೆ ಕಡಿಮೆ, ಬೇಡಿಕೆ ಹೆಚ್ಚಳ • ಕೆ.ಜಿ. ಹಣ್ಣು 250 ರೂ.ಗೆ ಮಾರಾಟ
Team Udayavani, Jun 10, 2019, 3:47 PM IST
ಬಂಗಾರಪೇಟೆ ಪಟ್ಟಣದ ಕುವೆಂಪು ಸರ್ಕಲ್ನಲ್ಲಿ ವ್ಯಾಪಾರಿಯೊಬ್ಬರು ತಳ್ಳುವಗಾಡಿಯಲ್ಲಿ ಜಂಬು ನೇರಳೆ ಮಾರಾಟ ಮಾಡುತ್ತಿರುವುದು.
ಬಂಗಾರಪೇಟೆ: ಬೇಸಿಗೆ ಮುಗಿಯುತ್ತಿದ್ದಂತೆಯೇ ಪಟ್ಟಣದಲ್ಲಿ ಜಂಬುನೇರಳೆ ಮಾರಾಟ ಪ್ರಾರಂಭವಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಿಸುವ ಹಾಗೂ ಜೀರ್ಣಶಕ್ತಿ ವೃದ್ಧಿಸುವ ಜಂಬು ನೇರಳೆ ಸಿಗುವುದೇ ಈಗ ಅಪರೂಪವಾಗಿದೆ. ಒಂದು ಕೆ.ಜಿ. ಜಂಬು ನೇರಳೆ ಬೆಲೆ 250 ರೂ. ಇದ್ದು, ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ.
ಒಗರು, ಸಿಹಿ ಮಿಶ್ರಿತವಾಗಿರುವ ಜಂಬು ನೇರಳೆಹಣ್ಣಿನ ಮರಗಳು ತಾಲೂಕಿನಲ್ಲಿ ತೀರಾ ಅಪರೂಪವಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಾಗಿ ಕಾಣಿಸುವುದಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಕೆಲವರು ತಮ್ಮ ಮನೆಯ ಅಂಗಳದಲ್ಲಿ ಒಂದೊಂದು ಮರ ಬೆಳೆಸಿಕೊಂಡಿದ್ದಾರೆ.
ನೆರೆಯ ಆಂಧ್ರ ಪ್ರದೇಶದ ಮದನಪಲ್ಲಿ ಮತ್ತು ಪಲಮನೇರು ಪ್ರದೇಶಗಳಿಂದ ಮಾರುಕಟ್ಟೆಗೆ ನೇರಳೆಹಣ್ಣು ತಂದು ಪಟ್ಟಣದ ಐದಾರು ಕಡೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ. ಜಂಬು ನೇರಳೆಹಣ್ಣಿನ ಬೆಲೆ 250 ರೂ. ಆಗಿರುವುದರಿಂದ ತಿನ್ನಲು ಬಯಕೆ ಇದ್ದರೂ ಬೆಲೆ ದುಬಾರಿ ಎನಿಸಿದೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪಕ್ಕದ ರಸ್ತೆಯಲ್ಲಿ, ಸಾಯಿಬಾಬಾ ದೇಗುಲದ ಸರ್ಕಲ್, ಬಸ್ ನಿಲ್ದಾಣ, ಕುವೆಂಪು ರಸ್ತೆ ಸೇರಿ ಐದಾರು ಕಡೆ ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು 100 ಗ್ರಾಂ, 200 ಗ್ರಾಂ ಲೆಕ್ಕದಲ್ಲಿ ಕೊಂಡುಕೊಳ್ಳುತ್ತಿದ್ದಾರೆ.
ಜೂನ್ ತಿಂಗಳು ಜಂಬು ನೇರಳೆಹಣ್ಣಿನ ಸುಗ್ಗಿಯ ಕಾಲವಾಗಿದೆ. ದೊಡ್ಡ ಗಾತ್ರದಲ್ಲಿರುವ ಜಂಬು ನೇರಳೆ ಹಣ್ಣು ನೋಡಲು ಸುಂದರವಾಗಿರುತ್ತದೆ. ಒಗರು, ರುಚಿಯನ್ನು ಹೊಂದಿರುವ ಹಣ್ಣುಗಳನ್ನು ಉಪ್ಪಿನೊಂದಿಗೆ ತಿಂದರೆ ಬಲು ರುಚಿಯಾಗಿರುತ್ತದೆ.
ಜಂಬು ನೇರಳೆಹಣ್ಣು ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಿಸುವ ಶಕ್ತಿ ಹೊಂದಿದೆ. ಹೀಗಾಗಿ ಜಂಬು ನೇರಳೆ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಇವುಗಳ ಬೆಲೆ ಗಗನಕ್ಕೇರಿದೆ.
ಜಂಬು ನೇರಳೆಹಣ್ಣು ಮೆದುಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುವುದರಿಂದ ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿ ಅಂಶವುಳ್ಳ ಹಣ್ಣಾಗಿದೆ. ಪ್ರತಿ ದಿನ ಮತ್ತು ಸಂಜೆ ಜಂಬು ನೇರಳೆ ಹಣ್ಣಿನ ಬೀಜದ ಪುಡಿಯನ್ನು ಸೇವಿಸುವುದರಿಂದ ಅತಿಯಾದ ಮೂತ್ರದ ತೊಂದರೆ ನಿವಾರಣೆಯಾಗುತ್ತದೆ ಎಂಬುದು ವೈದ್ಯರ ಅನಿಸಿಕೆ.
ಜಂಬು ನೇರಳೆಹಣ್ಣು ಮೂಲವ್ಯಾದಿ ಹಾಗೂ ಪಿತ್ತ ಜನಕಾಂಗ ತೊಂದರೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಂಬು ನೇರಳೆಹಣ್ಣಿನಲ್ಲಿ ನೈಸರ್ಗಿಕ ಆಮ್ಲಿಯ ಪದಾರ್ಥಗಳಿದ್ದು, ದೇಹದಲ್ಲಿ ಜೀರ್ಣಕ್ರಿಯೆಗೆ ಅನುಕೂಲವಾಗಿದೆ. ಪಿತ್ತ ಜನಕಾಂಗ ಕಾರ್ಯಗಳನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಎಂಬುದು ವೈದ್ಯರ ಸಲಹೆ.
● ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.