ಕಲಿಯುಗದ ಕಟ್ಟಕಡೆಯ ಕಾಲಜ್ಞಾನಿ ಕೈವಾರ ತಾತಯ್ಯ

ಸಾಯಿತೇಜಸ್ವಿನಿ ತಂಡದವರಿಂದ ಭರತನಾಟ್ಯ, ತತ್ತನೂರು ಸಹೋದರರಿಂದ ನಾದಸ್ವರ ಕಾರ್ಯಕ್ರಮಗಳು ನಡೆಯಿತು.

Team Udayavani, Jul 14, 2022, 5:56 PM IST

ಕಲಿಯುಗದ ಕಟ್ಟಕಡೆಯ ಕಾಲಜ್ಞಾನಿ ಕೈವಾರ ತಾತಯ್ಯ

ಚಿಂತಾಮಣಿ: ಕೈವಾರ ತಾತಯ್ಯನವರು ಯೋಗದೃಷ್ಟಿಯಿಂದ ಕಲಿಯುಗದಲ್ಲಿ ಕಟ್ಟಕಡೆಯ ಕಾಲಜ್ಞಾನವನ್ನು ನೀಡಿದ್ದಾರೆ. ಈ ಕಾಲಜ್ಞಾನದ ಅರಿವನ್ನು ಪಡೆದುಕೊಂಡು ಜಾಗೃತರಾಗಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್‌.ಜಯರಾಮ್‌ ಹೇಳಿದರು.

ಕೈವಾರದ ಶ್ರೀಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ನಡೆದ ಗುರುಪೂಜಾ ಸಮಾರಂಭದಲ್ಲಿ ಮಾತನಾಡಿ, ಕೈವಾರ ತಾತಯ್ಯನವರು ಪರತತ್ವ ಸಾಧನೆಯನ್ನು ಮಾಡಿರುವ ಸದ್ಗುರು. ಭಕ್ತಿ, ಕರ್ಮ, ಯೋಗವನ್ನು ಸೇರಿಸಿ ಕೈವಾರ ತಾತಯ್ಯನವರು ಬೋಧನೆ ಮಾಡಿದ್ದಾರೆ. ಬಾಹ್ಯ ಸಾಧನೆಗಳಿಗಿಂತಲೂ ಅಂತರಂಗದ ಸಾಧನೆ ಶ್ರೇಷ್ಠವಾದದ್ದು. ಮಾನವರಲ್ಲಿ ಭೇದವನ್ನು ಮಾಡದೆ, ಮುಕ್ತಿಯ ಪಥದೆಡೆಗೆ ಸಾಗುವ ಸಾಧನೆಯನ್ನು ತಾತಯ್ಯನವರು ಬೋಧಿಸಿದ್ದಾರೆ.

ಅಹಂಕಾರವನ್ನು ಬಿಟ್ಟ ಭಕ್ತನಿಗೆ ಮಾತ್ರ ಪರಮ ಪದವಿ ದೊರೆಯುತ್ತದೆ. ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ, ನಮ್ಮ ಮುಂದಿನ ಬದುಕನ್ನು ಅವರೇ ರೂಪಿಸುತ್ತಾರೆ. ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ, ಸದುಪಯೋಗ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು. ನಮ್ಮಲ್ಲಿರುವ ಅವಿದ್ಯೆಗಳನ್ನು ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ತಿಳಿಸಿದರು.

ತಾತಯ್ಯನವರಿಗೆ ಅಭಿಷೇಕ: ಗುರುಪೂಜೆ ಪ್ರಯುಕ್ತ ಗಾಯನವನ್ನು ವಿದ್ವಾಂಸರು ನಡೆಸಿದರು. ಯೋಗಿ ನಾರೇಯಣ ಯತೀಂದ್ರ ತಾತಯ್ಯನವರಿಗೆ ಅಭಿಷೇಕ, ರಾಜೋಪಚಾರ, ಅಷ್ಟಾವಧಾನ ಸೇವೆ ನಡೆಯಿತು. ಬೆಳಗಿನಿಂದಲೇ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ದೇವಾಲಯದಲ್ಲಿ ಪೂಜಾ ಕೈಕಂರ್ಯಗಳನ್ನು ನಡೆಸಲಾಯಿತು. ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ ಮಾಡಲಾಯಿತು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಏಳನೀರು ಮತ್ತು ಹರಿಶಿನ ಮತ್ತು ಕುಂಕುಮ, ವಿಭೂತಿ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ಅಭಿಷೇಕ ಸಮರ್ಪಿಸಲಾಯಿತು. ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಗುರುಪೂಜೆಯಲ್ಲಿ ಭಾಗವಹಿಸಿದ್ದರು.

ಕೈವಾರ ತಾತಯ್ಯನವರು ರಚಿಸಿರುವ “ಶ್ರೀರಾಮ ಭವತಾರಕ ಮಂತ್ರ ತಾರಾವಳಿ” ಎಂಬ ಗ್ರಂಥದ ಕನ್ನಡ ಮತ್ತು ಆಂಗ್ಲ ಭಾಷೆಯ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಸಂಗೀತ ಸಮರ್ಪಣೆ: ಸಂಗೀತ ಕಛೇರಿಗಳಲ್ಲಿ ಆನೂರು ಅನಂತಕೃಷ್ಣಶರ್ಮ ನೇತೃತ್ವದಲ್ಲಿ ತಾಳವಾದ್ಯ ಕಛೇರಿ, ಮಂಜುಳ ಜಗದೀಶ್‌, ಇ.ರಾಮಕೃಷ್ಣಾಚಾರ್‌, ಕೆ.ಎಸ್‌.ನಾಗಭೂಷಣಯ್ಯ, ಪದ್ಮ ಚಿಂತಾಮಣಿ, ಚಿಂತಲಪಲ್ಲಿ ಕಿಶೋರ್‌ ಕುಮಾರ್‌ ಹಾಗೂ ಸೋಮಶೇಖರ್‌, ವಿಜಯವಾಡದ ಹರಿತಾ ಸಹೋದರಿಯರು, ಮಾಯಾಬಾಲಚಂದ್ರ, ಅಶ್ವಿ‌ನಿ ಮೋಹನ್‌, ಹೊಸೂರು ವೇಣು ತಂಡದವರು ಸಂಗೀತ ಸಮರ್ಪಣೆ ಮಾಡಿದರು.

ವಿಶೇಷ ಕಾರ್ಯಕ್ರಮವಾಗಿ ವಾಸವಿ ಸಹೋದರಿಯರು, ಮರಕತವಲ್ಲಿ, ಅಂಜಲಿ ಶ್ರೀರಾಮ್‌, ಚೈತನ್ಯ ಸಹೋದರರಿಂದ ಗಾಯನ, ದೀಲಿಪ್‌ ಮತ್ತು ಇಳಾ ಸಂಗೀತಾರವರಿಂದ ಪಿಟೀಲು ವಾದನ, ಚೇತನಾ ಸುಂದರೇಶ್‌ ಹಾಗೂ ಸಾಯಿತೇಜಸ್ವಿನಿ ತಂಡದವರಿಂದ ಭರತನಾಟ್ಯ, ತತ್ತನೂರು ಸಹೋದರರಿಂದ ನಾದಸ್ವರ ಕಾರ್ಯಕ್ರಮಗಳು ನಡೆಯಿತು.

ಹಿರಿಯ ಚಿಂತಕ, ಮಲ್ಲಾರ ಪತ್ರಿಕೆ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿ, ಡಾ.ಜೋಸುಲ ಸದಾನಂದಶಾಸ್ತ್ರೀ, ಲೇಖಕಿ ಅಂಬಿಕಾ ಅನಂತ್‌ ಅವರನ್ನು ಸನ್ಮಾನಿಸಲಾಯಿತು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್‌, ಕೈವಾರ ಟ್ರಸ್ಟ್‌ ಉಪಾಧ್ಯಕ್ಷ ಜೆ.ವಿಭಾ ಕರರೆಡ್ಡಿ, ಖಜಾಂಚಿ ಆರ್‌.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಬಾಗೇಪಲ್ಲಿ ನರಸಿಂಹಪ್ಪ, ಬಿ.ಎಸ್‌. ಶ್ರೀನಿವಾಸ್‌, ಡಾ.ಎಂ.ವಿ.ಶ್ರೀನಿವಾಸ್‌, ಗಣೇಶ್‌ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.