ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬದ ಸಂಭ್ರಮ
Team Udayavani, Jan 21, 2023, 4:25 PM IST
ಕೋಲಾರ: ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದರ ಜತೆಗೆ ಸಂಭ್ರಮದಿಂದ ಕಲಿಕೆಗೆ ಮಾರ್ಗದರ್ಶನ ನೀಡುವ ಕಲಿಕಾ ಹಬ್ಬ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚುಸುವಲ್ಲಿ ಸಹಕಾರಿಯಾಗಿದೆ ಎಂದು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ಲಸ್ಟರ್‌ವ್ಯಾಪ್ತಿ ಕಲಿಕಾ ಹಬ್ಬದ ಸಮಾರೋಪದಲ್ಲಿ ಮಾತನಾಡಿದರು.2 ದಿನಗಳ ಕಲಿಕಾ ಹಬ್ಬ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುಸುವಲ್ಲಿ ಪರಿಣಾಮಕಾರಿಯಾಗಿದೆ. ತರಗತಿ ಕೋಣೆಯಲ್ಲಿ ಒತ್ತಡಮುಕ್ತವಾಗಿ ಸಂಭ್ರಮದಿಂದ ಕಲಿಯಬಹುದು ಎಂಬುದಕ್ಕೆ ಸಾಕ್ಷಿ ಎಂದರು.
ಪಠ್ಯ ಕಲಿಕೆಗೆ ನಿರಾಸಕ್ತಿ ತೋರುವ ಮಕ್ಕಳಲ್ಲಿ ಸಡಗರದಿಂದ ಕಲಿಯಲು ಆಸಕ್ತಿ ಹೆಚ್ಚಿಸಲು ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾ ಗಿದ್ದು, ಮಕ್ಕಳಲ್ಲಿ ಜೀವನ ಕೌಶಲ್ಯವೃದ್ಧಿಗೂ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಲಿಕಾ ಹಬ್ಬದಲ್ಲಿ 4ನೇ ತರಗತಿಯಿಂದ 9ನೇ ತರಗತಿವರೆಗೆ 15 ಶಾಲೆಗಳ ಒಟ್ಟು 120 ಮಕ್ಕಳು ಪಾಲ್ಗೊಂಡಿದ್ದಾರೆ. ಹಾಡು-ಆಡು, ವೈಜ್ಞಾನಿಕ ಮಾಹಿತಿ ನೀಡುವ ಮಾಡು-ಆಡು, ಸೃಜನಶೀಲತೆ ಬೆಳೆಸುವ ಕಾಗದ-ಕತ್ತರಿ, ಜ್ಞಾನಾಭಿವೃದ್ಧಿಗೆ ಊರು ಸುತ್ತೋಣ ಎಂಬ ನಾಲ್ಕು ಹಂತಗಳಲ್ಲಿ ಕಲಿಕಾ ಹಬ್ಬ ನಡೆದಿದ್ದು, ಮಕ್ಕಳು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡಿದ್ದರು. ಇದು ಮಕ್ಕಳಲ್ಲಿ ನವಚೈತನ್ಯ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೌಮ್ಯಲತಾ ಮಾತನಾಡಿ, ತರಗತಿ ಕೋಣೆಯಲ್ಲೂ ಹಬ್ಬದ ವಾತಾವರಣದಲ್ಲಿ ಪ್ರತಿದಿನ ಮಕ್ಕಳು ಕಲಿಯುವಂತೆ ಮಾಡಿದ್ದೇವೆ ಎಂಬ ಸಂದೇಶವನ್ನು ಸಮುದಾಯಕ್ಕೆ ತಲುಪಿಸಲು ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಕೋವಿಡ್‌ಹಿನ್ನಲೆ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಸರ್ಕಾರ ಜಾರಿಗೆ ತಂದ “ಕಲಿಕಾ ಚೇತರಿಕೆ’ಯ ಭಾಗವೇ ಕಲಿಕಾ ಹಬ್ಬವಾಗಿದೆ ಎಂದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಮಹೇಂದ್ರ,ಮಾಡು-ಆಡು ಹಂತದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಿಲ್ಪಾ, ಜಗನ್ನಾಥ್, ಕೆ.ಎನ್.ರಮೇಶ್, ಕಲಿಕಾ ಹಬ್ಬದ ಕುರಿತು ತಮ್ಮ ಅನಿಸಿಕೆಹಂಚಿಕೊಂಡರು. ಕಾಗದ-ಕತ್ತರಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಿಕ್ಷಕ ತೇರಹಳ್ಳಿ ನಾರಾಯಣಸ್ವಾಮಿ, ಮಕ್ಕಳಿಗೆ ಕಾಗದ ಕತ್ತರಿಸಿ ವಿವಿಧ ಆಕಾರಗಳನ್ನು ಸೃಷ್ಟಿಸುವುದನ್ನು ಕಲಿಸಿದರು.
ಸಂಪನ್ಮೂಲ ವ್ಯಕ್ತಿ ವೆಂಕಟರೆಡ್ಡಿ, ಶಿಕ್ಷಕರಾದ ಸಿದ್ದೇಶ್ವರಿ, ಗೋಪಾಲಕೃಷ್ಣ, ಶ್ವೇತಾ, ಸುಗುಣಾ, ಫರೀದಾ, ಲೀಲಾ, ಚೈತ್ರಾ, ವಿವಿಧ ಶಾಲೆಗಳ ಶಿಕ್ಷಕರಾದ ಇಬ್ರಾಹಿಂ, ಪದ್ಮಾವತಿ, ಉದಯಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.