ಕನಕ ಜಯಂತಿ ಅರ್ಥಪೂರ್ಣ ಆಚರಣೆ
Team Udayavani, Nov 9, 2019, 4:23 PM IST
ಮಾಲೂರು: ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನ.15ರಂದು ಕನಕದಾಸರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಶಾಸಕ ನಂಜೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಶೀಲ್ದಾರ್ ವಿ.ನಾಗರಾಜು ಅವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತಾಲೂಕು ಕಚೇರಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸುವುದು, ಅದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಅದ್ಧೂರಿ ಪಲ್ಲಕ್ಕಿಗಳ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿ ತಾಲೂಕು ಆಡಳಿತ ವಹಿಸಲಿದ್ದು, ಕುರುಬರ ಸಂಘದ ಸಹಯೋಗವನ್ನು ಕೋರಲಾಗಿದೆ. ಮೆರವಣಿಗೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳಿಂದ ಪಲ್ಲಕ್ಕಿಗಳು ಭಾಗವಹಿಸಬೇಕಿದೆ.
ಕಾರ್ಯಕ್ರಮದಲ್ಲಿ ಸಮುದಾಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಹಿರಿಯರನ್ನು ಗೌರವಿಸಲಾಗುತ್ತದೆ. ಸಭೆಯಲ್ಲಿ ಜಿಪಂ ಸದಸ್ಯ ಎಚ್. ವಿ.ಶ್ರೀನಿವಾಸ್, ಕುರುಬರ ಸಂಘದ ಹನುಮಂತಯ್ಯ, ಸಿ.ರಾಜಣ್ಣ, ಎಟ್ಟಕೋಡಿ ವೀರಭದ್ರಪ್ಪ, ವೆಂಕಟೇಶಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಅಂಜನಿ ಸೋಮಣ್ಣ. ಎಸ್. ಎನ್.ರಘುನಾಥ್, ಬನಹಳ್ಳಿ ನಾರಾಯಣಸ್ವಾಮಿ, ಇಒ ಕೃಷ್ಣಪ್ಪ, ಸಿಒ ಪ್ರಸಾದ್, ಎಇಇ ಈಶ್ವರಪ್ಪ, ಬಿಸಿಎಂ ಅಂಬಿಕಾ, ರವಿಚಂದ್ರ, ಮಂಜುನಾಥ್, ಕೋಳಿ ನಾರಾಯಣ್, ರಾಮಕೃಷ್ಣಪ್ಪ, ನಂದೀಶ್, ಅಬ್ಬೇನಹಳ್ಳಿ ಗೋಪಾಲ್, ರಮೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.