ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತ ಅಲ್ಲ
Team Udayavani, Nov 16, 2019, 2:48 PM IST
ಬಂಗಾರಪೇಟೆ: ಕನಕದಾಸರು ಕೇವಲ ಒಂದು ಸಮಾಜಕ್ಕೆ ಸೀಮಿತ ಅಲ್ಲ, 16ನೇ ಶತಮಾನದಲ್ಲಿ ಜಾತಿ ಪದ್ಧತಿ ಮತ್ತು ಮೂಢನಂಬಿಕೆಯನ್ನು ತಮ್ಮ ಕೀರ್ತನೆಗಳ ಮೂಲಕ ಬಲವಾಗಿ ಖಂಡಿಸಿದ್ದರು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಕುರುಬರ ಸಂಘ ಹಮ್ಮಿಕೊಂಡಿದ್ದ 532ನೇ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವನ್ನು ಉದ್ಘಾಟಿಸಿ ಮಾತನಾಡಿ, ಕನಕದಾಸರು ತಾವು ಕಂಡದ್ದನ್ನು ಅನುಭವಕ್ಕೆ ಬಂದದ್ದನ್ನು ಅಭಿವ್ಯಕ್ತಿಸಿದ್ದಾರೆ. ಅಂದು ಅವರು ಹೇಳಿದ ಸಂದೇಶಗಳು ಸಾರ್ವಕಾಲಿಕ. ಪ್ರಸ್ತುತತೆಯನ್ನು ಪಡೆದಂತವು. ಯಾವುದೇ ಜಾತಿ, ಮತ, ಪ್ರದೇಶ, ಭಾಷೆಗೆ ಸೀಮಿತವಾಗದ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು. ಹಾಗಾಗಿ ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳು ಅವಶ್ಯಕತೆ ಇದೆ ಎಂದು ಹೇಳಿದರು.
ಕವಿಗಳಲ್ಲಿ ದಾಸರು: ಕನಕದಾಸರ ಪೂರ್ವ ಮತ್ತು ನಂತರದ ಭಕ್ತಿ ಪರಂಪರೆ ಗಮನಿಸಿದರೆ ಅದುಸಂಪ್ರದಾಯಿಕ ನೆಲೆಯಲ್ಲಿಯೇ ಸಾಗಿರುವುದನ್ನು ಕಾಣಬಹುದು. ಅವರು ವೈಚಾರಿಕ ಪ್ರಖರತೆಯ ನೆಲೆಯಲ್ಲಿ ಭಕ್ತಿಯನ್ನು ನೋಡಿದವರು. ಕಲಿಯೂ, ಕವಿಯೂ ಆದ ಕನಕದಾಸರು ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ರಾಯಣ್ಣ ಪ್ರತಿಮೆ, ರಸ್ತೆಗೆ ಹೆಸರು: ತಾಲೂಕಿನಲ್ಲಿ ಕುರುಬ ಸಮುದಾಯ ಬಲಪಡಿಸಲು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ನೀಡಿದ್ದೇನೆ. ಕನಕ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲು ಸಿದ್ಧನಾಗಿದ್ದೇನೆ. ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಲು ಹಾಗೂ ಪಟ್ಟಣದಲ್ಲಿ ಒಂದು ರಸ್ತೆಗೆ ಹೆಸರು ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ಸ್ತಬ್ಧ ಚಿತ್ರಗಳಿಗೆ ಚಾಲನೆ: ತಾಲೂಕು ಕುರುಬ ಸಂಘದ ಅಧ್ಯಕ್ಷ ಎಲ್.ರಾಮಕೃಷ್ಣ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಮು ದಾಯದ ಮುಖಂಡರನ್ನು ಸನ್ಮಾನಿಸಲಾ ಯಿತು. ವೇದಿಕೆ ಕಾರ್ಯಕ್ರಮದ ನಂತರ ಶಾಸಕರು ಸ್ತಬ್ಧ ಚಿತ್ರಗಳಿಗೆ ಚಾಲನೆ ನೀಡಿದರು. ಕುರುಬರ ಪವಿತ್ರವಾದ ತೆಂಗಿನಕಾಯಿ ಪವಾಡ ಕಾರ್ಯಕ್ರಮವೂ ನಡೆಯಿತು.
ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಕೆ.ಚಂದ್ರಾ ರೆಡ್ಡಿ, ತಹಶೀಲ್ದಾರ್ ಕೆ.ಬಿ.ಚಂದ್ರ ಮೌಳೇಶ್ವರ್, ತಾಪಂ ಇಒ ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಾಣಾಧಿಕಾರಿ ಬಿ.ಪಿ.ಕೆಂಪಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಪಶುವೈದ್ಯ ಇಲಾಖೆ ಎಡಿ ಡಾ.ರಾಮು, ರೇಷ್ಮೆ ಇಲಾಖೆಯ ಎಡಿ ಎಸ್.ಎನ್.ಶ್ರೀನಿವಾಸ್, ತಾಪಂ ಎಡಿ ಮಂಜುನಾಥ್, ಸದಸ್ಯ ಚಿನ್ನಕೋಟೆ ಅಮರೇಶ್, ಶಿಲ್ಪ ಗೋವಿಂದಪ್ಪ, ಮಹದೇವ್, ಪುರಸಭೆ ಸದಸ್ಯರಾದ ಸಾದಿಕ್, ಕಪಾಲಿ ಶಂಕರ್, ಗೋವಿಂದ, ಶಾರದಮ್ಮ, ಅರಕ್ಷಕ ಉಪ ನಿರೀಕ್ಷಕ ಜಗದೀಶ್‌ರೆಡ್ಡಿ, ಕಾಮಸಮುದ್ರ ಆರ್.ದಯಾನಂದ್, ಮುಖಂಡರಾದ ದೊಡ್ಡಪ್ಪ, ಬೊಪ್ಪನಹಳ್ಳಿ ನಾರಾ ಯಣಪ್ಪ, ಕಾರಮಂಗಲ ಆಶ್ವತ್ಥ್, ಗಾಜಗ ಮಂಜು ನಾಥ್, ಯುವರಾಜ್, ಚೌಡಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು
ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ
Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.