ವೃದ್ಧಾಪ್ಯ ವೇತನ ಅರ್ಜಿ ವಿಲೇವಾರಿ ವಿಳಂಬ

ಗ್ರಾಮ ಲೆಕ್ಕಿಗರ ವಿರುದ್ಧ ಶಾಸಕಿ ರೂಪಕಲಾ ಗರಂ „ ಅರ್ಹ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಸೂಚನೆ

Team Udayavani, Jan 9, 2020, 3:21 PM IST

9-January-19

ಕೆಜಿಎಫ್: ಗ್ರಾಮಗಳಲ್ಲಿ ಮಾಸಾಶನಕ್ಕೆ ಅರ್ಹರಿರುವ ಪಟ್ಟಿಯನ್ನು ಇನ್ನೂ ತಯಾರು ಮಾಡಿಲ್ಲ. ವಿಲೇಜ್‌ ಮ್ಯಾಪ್‌ ಮಾಡಲಾಗುತ್ತಿದೆ, ಸರ್ವರ್‌ ತೊಂದರೆ ಎಂದು ಸಾಬೂಬು ಹೇಳುತ್ತಿದ್ದೀರಿ. ಇನ್ನೂ ಎಷ್ಟು ದಿನ ಬೇಕು. ಇಡೀ ಕ್ಷೇತ್ರದಲ್ಲಿ ಎಷ್ಟು ಜನರ ಸಮಸ್ಯೆ ಇದೆ. ಎಷ್ಟು ಬಗೆಹರಿದಿದೆ ಎಂಬ ಮಾಹಿತಿ ನೀಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಶಾಸಕಿ ಎಂ.ರೂಪಕಲಾ ಹೇಳಿದರು.

ನಗರದಲ್ಲಿ ಕಂದಾಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮ ಲೆಕ್ಕಗ ಅರ್ಥ ಮಾಡಿಕೊಳ್ಳಬೇಕು. ಒಂದು ಸಾವಿರ ರೂ. ಮಾಸಾಶನದಿಂದ ಎಷ್ಟೋ ಉಪಕಾರವಾಗುತ್ತದೆ. ವೃದ್ಧರಿಗೆ ಮಾಸಾಶಾನ ಕೊಡಿಸುವುದು ಮಾನವೀಯತೆಯ ಕೆಲಸ. ಎಷ್ಟು ದಿನಗಳಿಂದ ಹೇಳುತ್ತೀದ್ದೀನಿ, ಮಾಡುತ್ತಿಲ್ಲ. ಗ್ರಾಮ ಲೆಕ್ಕಿಗ ವಿನೂತ್‌ನನ್ನು ಉದ್ದೇಶಿಸಿ ಹೇಳಿದ ಅವರು, ರಾಜಕೀಯ ಚೆನ್ನಾಗಿ ಮಾಡುತ್ತೀಯ. ಚೆನ್ನಾಗಿ ಕೆಲಸ ಮಾಡಬೇಕು. ಇಲ್ಲ ದಿದ್ರೆ ಸಸ್ಪೆಂಡ್‌ ಆಗುತ್ತೀಯ ಎಂದು ಎಚ್ಚರಿಸಿದರು.

ದಾಖಲೆ ಸಿದ್ಧ ಮಾಡಿಟ್ಟುಕೊಳ್ಳಿ: ಪ್ರತಿ ಪಂಚಾಯ್ತಿಗೆ ಎಷ್ಟು ಗ್ರಾಮ ಲೆಕ್ಕಿಗರು ಹೋಗುತ್ತೀರಿ. ಅವರ ವ್ಯಾಪ್ತಿಗೆ ಎಷ್ಟು ಗ್ರಾಮಗಳು ಬರುತ್ತವೆ. ಅವರ ವ್ಯಾಪ್ತಿಯಲ್ಲಿರುವ ಫ‌ಲಾನುಭವಿಗಳ ಪಟ್ಟಿಯನ್ನು ನನಗೆ ಕೊಡಬೇಕು. ಈ ಬಾರಿ ಹಲವು ಮೀಟಿಂಗ್‌ ಮಾಡಿದ್ದೇನೆ. ಆದರೂ ಸಹಕಾರ ನೀಡುತ್ತಿಲ್ಲ. ಈ ತಿಂಗಳ ಕೊನೆಯಲ್ಲಿ ಫ‌ಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಬೇಕು. ಅಷ್ಟರೊಳಗೆ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಸಿದ್ಧಮಾಡಿಟ್ಟುಕೊಳ್ಳಬೇಕು ಎಂದು ಶಾಸಕಿ ಹೇಳಿದರು.

ವಿಎಗಳಿಂದ ಮಾಹಿತಿ: ವಿಧವಾ ವೇತನ 65 ವರ್ಷದವರೆಗೂ ಕೊಡಲಾಗುತ್ತದೆ. ಈ ವಯಸ್ಸು ದಾಟಿದ ನಂತರ ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಆಗ 500 ರೂ.ನಿಂದ 1000 ರೂಪಾಯಿ ಮಾಸಾಶನ ಸಿಗುತ್ತದೆ ಎಂದು ಗ್ರಾಮಲೆಕ್ಕಿಗರು ತಿಳಿಸಿದರು. 800 ಮಂದಿ ಮಾಹಿತಿ ಶೇಖರಣೆ: ಕ್ಯಾಸಂಬಳ್ಳಿ ಮತ್ತು ರಾಮಸಾಗರ ಪಂಚಾಯಿತಿ ವ್ಯಾಪ್ತಿಯಲ್ಲಿ 800 ಮಾಸಾಶನದ ಫ‌ಲಾನುಭವಿಗಳ ಮಾಹಿತಿ ಶೇಖರಿಸ ಲಾಗಿದೆ. ಅದನ್ನುಫೀಡ್‌ ಮಾಡಿಸಲಾಗುತ್ತಿದೆ. ಇನ್ನೂ 200 ಅರ್ಜಿಗಳ ವಿಲೇವಾರಿ ಮಾಡಲಾಗುವುದು. ವಿಧವಾ ವೇತನ ಬಿಟ್ಟು ಎಲ್ಲಾ ಫ‌ಲಾನುಭವಿಗಳಿಗೂ ಹಣ ನೀಡಲಾಗುತ್ತಿದೆ ಎಂದು ತಹಶೀಲ್ದಾರ್‌ ರಮೇಶ್‌ ತಿಳಿಸಿದರು.

ಅಷ್ಟು ಪ್ರಮಾಣದ ಹಿರಿಯರು ಇದ್ದಾರಾ?: ಇಡೀ ಕೆಜಿಎಫ್ ಪಾದಯಾತ್ರೆ ಮಾಡಿ 3000 ರಿಂದ 5000 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಒಂದು ಪಂಚಾಯಿತಿಯಲ್ಲಿ 1000 ಫ‌ಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರೆ ಆಶ್ಚರ್ಯವಾಗುತ್ತದೆ. ಇಪ್ಪತ್ತು ಹಳ್ಳಿಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಿರಿಯರು ಇದ್ದಾರಾ ಎಂಬುದು ಕೂಡ ಅನುಮಾನಾಸ್ಪದವಾಗಿದೆ ಎಂದಾಗ, ರೆವಿನ್ಯೂ ಸರ್ಕಲ್‌ನಲ್ಲಿರುವ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪೋಸ್ಟ್‌ ಮಾಸ್ಟರ್‌ ಹಣ ಪಡೆದಿದ್ರೆ ದೂರು ನೀಡಿ: ಪೋಸ್ಟ್‌ ಆಫೀಸ್‌ ಅಕೌಂಟ್‌ ಮಾಡಿಸಿ. ಅದು ಸುಲಭವಾಗುತ್ತದೆ. ಅಕೌಂಟ್‌ ಮಾಡಿಸಲು 50 ರೂಪಾಯಿ ಲಂಚ ತೆಗೆದುಕೊಳ್ಳುತ್ತಾರೆ ಎಂದು ತಹಶೀಲ್ದಾರ್‌ ಹೇಳಿದರು. ಒಂದು ತಿಂಗಳು ಮಾಸಾಶನ ಕೊಟ್ಟು ಮೂರು ತಿಂಗಳು ನೀಡದೆ ಇರುವ ಉದಾಹರಣೆಗಳು ಸಾಕಷ್ಟಿವೆ. ಸತ್ತವರ ಹಣವನ್ನು ಪೋಸ್ಟ್‌ ಮಾಸ್ಟರ್‌ ಪಡೆದುಕೊಂಡರೆ ದೂರು ನೀಡಬೇಕು. ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಆನ್‌ಲೈನ್‌ನಲ್ಲಿಫೀಡ್‌ ಮಾಡಬೇಕು ಎಂದು ಶಾಸಕಿ ಹೇಳಿದರು.

ಆಧಾರ್‌ ಲಿಂಕ್‌: ಕೆಜಿಎಫ್ ಕ್ಷೇತ್ರದಲ್ಲಿ 38789 ಮಾಸಾಶನ ಪಡೆಯುವವರು ಇದ್ದಾರೆ. 60 ವರ್ಷ ದಾಟಿದವರು ವಯಸ್ಸಿನಲ್ಲಿ 10 ಸಾವಿರ ಇದ್ದಾರೆ. ಎಷ್ಟು ಜನರ ಆಧಾರ್‌ ಲಿಂಕ್‌ ಮಾಡಲಾಗಿದೆ ಎಂಬ ಮಾಹಿತಿಬೇಕು ಎಂದು ಶಾಸಕಿ ತಿಳಿಸಿದರು. ಹಳ್ಳಿಗಳ ಕಡೆ ಓಡಾಡಿದರೆ ಎಲ್ಲಾ ಸಾಧ್ಯವಾಗುತ್ತದೆ. ನೀವು ಮಾಡುವುದಿಲ್ಲ ಎಂದು ತಹಶೀಲ್ದಾರ್‌ ವಿಎಗಳಿಗೆ ಹೇಳಿದರು. ನಾವೇ ತಲಾ ಐದು ರೂಪಾಯಿ ಕೊಟ್ಟು ಫೀಡ್‌ ಮಾಡಿಸುತ್ತಿದ್ದೇವೆ. ಸತತ ಪ್ರಯತ್ನಮಾಡುತ್ತಲೇ ಇದ್ದೇವೆ ಎಂದು ಗ್ರಾಮ ಲೆಕ್ಕಿಗರು ಸಭೆಯಲ್ಲಿ ತಮಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.

ಟಾಪ್ ನ್ಯೂಸ್

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.