ಕೆಜಿಎಫ್ ಪೊಲೀಸ್ ಘಟಕ ಸ್ಥಳಾಂತರಕ್ಕೆ ಯತ್ನ
Team Udayavani, Nov 19, 2021, 3:14 PM IST
ಕೆಜಿಎಫ್: ಹೊಸದಾಗಿ ಸೃಜನೆಗೊಂಡಿರುವ ವಿಜಯನಗರ ಜಿಲ್ಲೆಗೆ ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲೇ ವಿಶೇಷತೆಯನ್ನು ಪಡೆದಿರುವ ಕೆಜಿಎಫ್ ಪೊಲೀಸ್ ಘಟಕವನ್ನು ಸ್ಥಳಾಂತರಗೊಳಿ ಸಲು ಪ್ರಯತ್ನಗಳು ಮುಂದುವರಿದಿದೆ. ಅ.21ರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹುದ್ದೆಯು ಖಾಲೆ ಇದ್ದು, ಕೋಲಾರ ಎಸ್‌ಪಿ ಪ್ರಭಾರದಲ್ಲಿದ್ದಾರೆ.
ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಪೊಲೀಸ್ ಘಟಕವನ್ನು ಸೃಜನೆಮಾಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರವು ಆ.19ರಂದು ಹೊರಡಿಸಿದ ಆದೇಶ ದಂತೆ ಕೆಜಿಎಫ್ ಪೊಲೀಸ್ ವಿಶೇಷ ಜಿಲ್ಲೆಯ ಜಿಲ್ಲಾ ಮಟ್ಟದ ಸ್ಥಾನಮಾನವನ್ನು ಸಂಪೂರ್ಣ ಸ್ಥಳಾಂತರಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಸ್ಥಳಾಂತರಿಸುವ ಪ್ರಸ್ತಾವನೆ: ಎಸ್‌ಪಿ ಇಲಕ್ಕಿಯಾ ಕರುಣಾಕರನ್ ವರ್ಗಾವಣೆಯ ಬಳಿಕ ಕೆಜಿಎಫ್ಗೆ ಎಸ್‌ಪಿ ಯಾರೂ ನಿಯುಕ್ತಿಗೊಳ್ಳದೇ ಕೋಲಾರದ ಎಸ್‌ಪಿ ಡೆಕ್ಕಾ ಕಿಶೋರ್‌ಬಾಬು ಹೆಚ್ಚುವರಿ ಪ್ರಭಾರ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ವಿಜಯನಗರಕ್ಕೆ ಕೆಜಿಎಫ್ ಪೊಲೀಸ್ ಘಟಕವನ್ನು ಸ್ಥಳಾಂತರಿಸುವ ಪ್ರಸ್ತಾವನೆ ವಿರೋಧಿಸಿ ಕೆಜಿಎಫ್, ಬಂಗಾರಪೇಟೆ ತಾಲೂಕುಗಳಲ್ಲಿ ಭಾರೀ ಪ್ರತಿಭಟನೆ, ಬಂದ್ ನಡೆದಿದ್ದರಿಂದಾಗಿ ರಾಜ್ಯ ಸರ್ಕಾರವು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.
19ರಂದು ಆದೇಶ: ಮತ್ತೆ ಕೆಜಿಎಫ್ ಪೊಲೀಸ್ ಘಟಕದ ಸ್ಥಳಾಂತರದ ಪ್ರಸ್ತಾವನೆಯು ವ್ಯಾಪಕವಾಗಿ ನಡೆಯುತ್ತಿದೆ. ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ 965 ಸಂಖ್ಯಾ ಬಲವುಳ್ಳ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿದ್ದು, ಈ ಪೈಕಿ ಜಿಲ್ಲಾ ಪೊಲೀಸ್ ಕಚೇರಿಯ ಲಿಪಿಕ ಮತ್ತು ಕಾರ್ಯಕಾರಿ ಸಿಬ್ಬಂದಿ 40, ಡಿಎಆರ್‌ನ ಎಲ್ಲಾ 248 ಅಧಿಕಾರಿ, ಸಿಬ್ಬಂದಿ ಸ್ಥಳಾಂತರಿಸಲು ಆ.19 ರಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಕೆಜಿಎಫ್ನಲ್ಲೇ ಸ್ಥಳಾವಕಾಶ: ಉಳಿದಂತೆ ಎಲ್ಲಾ ಒಂಬತ್ತು ಪೊಲೀಸ್ ಠಾಣೆಗಳ, ನಾಲ್ಕು ವೃತ್ತ ಕಚೇರಿ ಗಳ ಸಿವಿಲ್ ಸಿಬ್ಬಂದಿ ಕೋಲಾರ ಜಿಲ್ಲೆಗೆ ಸೇರ್ಪಡೆ ಮಾಡಲಿದ್ದು, ಕೆಜಿಎಫ್ನಲ್ಲಿ ಉಪವಿಭಾಗ ಕಚೇರಿ ಯು ಮಾತ್ರ ಕಾರ್ಯ ನಿರ್ವಹಿಸಲಿದೆ. ಕೆಜಿಎಫ್ ಡಿಎ ಆರ್ ಘಟಕದ ಅಧಿಕಾರಿ ಸಿಬ್ಬಂದಿಗೆ ಕೆಜಿಎಫ್ನಲ್ಲೇ ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಗಳು ನಡೆಯುತ್ತಿದೆ.
ಸಿಬ್ಬಂದಿಗೆ ಸ್ಥಳಾವಕಾಶ: ಕೆಜಿಎಫ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೆಎಸ್‌ಐಎಸ್‌ಎಫ್ ಘಟಕ ಪ್ರಾರಂಭಿಸಿ ಅದರಲ್ಲಿ 71 ಮಂದಿಗೆ, ಡಿಎಆರ್‌ನಲ್ಲಿ ಪೊಲೀಸ್ ತರಬೇತಿ ಪ್ರಾರಂಭಿಸಿ ಅದರಲ್ಲಿ 40 ಮಂದಿಗೆ, ವಿಜಯ ನಗರ ಜಿಲ್ಲೆಗೆ ತೆರಳಲು ಆಸಕ್ತಿವುಳ್ಳ 67 ಮಂದಿ ಮತ್ತು ಉಳಿದ 70 ಮಂದಿಗೆ ಕೋಲಾರ ಘಟಕದ ಡಿಎಆರ್ ನಲ್ಲಿ ಹಂಚಿಕೆ ಮಾಡಿ, ಒಟ್ಟಾರೆ ಕೆಜಿಎಫ್ ಡಿಎಆರ್ ಮಂಜೂರಾತಿ ಬಲವನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.
ಸಿಇಎನ್ ಕ್ರೈಂಪೊಲೀಸ್ ಠಾಣೆ ಸ್ಥಳಾಂತರ?: ಜಿಲ್ಲಾ ಪೊಲೀಸ್ ಕಚೇರಿಯ ಲಿಪಿಕ ಮತ್ತು ಕಾರ್ಯಕಾರಿ ಸಿಬ್ಬಂದಿ 40 ಮಂದಿ ಸೇರಿ, ಕೆಜಿಎಫ್ನ ಡಿಎಆರ್, ನಿಸ್ತಂತು ಘಟಕ, ಇಆರ್‌ಎಸ್‌ಎಸ್, ಡಿಎಸ್‌ಬಿ, ಡಿಸಿಐಬಿ, ಡಿಸಿಆರ್‌ಬಿ, ಡಿಎಸ್‌ಎ ಘಟಕಗಳ ಸಹಿತ ಸಿಇಎನ್ ಕ್ರೈಂಪೊಲೀಸ್ ಠಾಣೆಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಸಿದ್ಧತೆಗಳು ಮಾಡಲಾಗುತ್ತಿದೆ.
ಡಿ.31ರೊಳಗಾಗಿ ಎಲ್ಲಾ ಪ್ರಕ್ರಿಯೆಗಳು ಪೂರ್ಣ ಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಕೆಜಿಎಫ್ ಪೊಲೀಸ್ ಜಿಲ್ಲೆಯ ಸ್ಥಾನ ಮಾನವನ್ನು ಪ್ರಸ್ತುತ ವಿಜಯನಗರ ಜಿಲ್ಲೆಗೆ ಆರ್ಥಿಕ ಹೊರೆಯ ಕಾರಣದಿಂದಾಗಿ ರಾಜ್ಯ ಸರ್ಕಾರವು ಸ್ಥಳಾಂತರಿಸಲು ಮುಂದಾಗಿದ್ದು, ಮುಂದಿನ ದಿನ ಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ, ಅಪರಾಧಗಳ ಸಂಖ್ಯೆ ಹೆಚ್ಚಳ, ರೌಡಿಗಳ ಅಟ್ಟಹಾಸ ಹೆಚ್ಚಾಗು ವುದರಲ್ಲಿ ಸಂಶಯವಿಲ್ಲ.
– ಬಿ.ಆರ್.ಗೋಪಿನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.