ಕೋಲಾರದಲ್ಲಿ ಸದ್ದು ಮಾಡಲಾಗದ ಸಿದ್ದು
Team Udayavani, Apr 16, 2023, 2:57 PM IST
ಕೋಲಾರ: ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಿಂದ ಕೊತ್ತೂರು ಮಂಜುನಾಥ್ ಅಭ್ಯರ್ಥಿ ಘೋಷಣೆಯಾಗುವ ಮೂಲಕ ಆರು ತಿಂಗಳಿನಿಂದ ಎದ್ದಿದ್ದ ಸಿದ್ದು ಸದ್ದು ಅಡಗುವಂತಾಗಿದೆ. ಮುನಿಸಿಕೊಂಡಿರುವ ಮುಖಂಡರಿಂದಾಗಿ ಕೋಲಾರ ಕಾಂಗ್ರೆಸ್ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಆರು ತಿಂಗಳಿನಿಂದ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ಸುದ್ದಿ ರಾಜ್ಯ ಮತ್ತು ರಾಷ್ಟ್ರ ವ್ಯಾಪಿಯಾಗಿತ್ತು. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರವನ್ನು ನಿಗದಿಪಡಿಸಿದಾಗಲೂ ಕೋಲಾರದ ಆಸೆಯನ್ನು ಸಿದ್ದರಾಮಯ್ಯ ಬಿಟ್ಟಿರಲಿಲ್ಲ. ಹೈಕಮಾಂಡ್ ತಮಗೆ ಕೋಲಾರದಿಂದಲೂ ಸ್ಪರ್ಧಿಸಲು ಅವಕಾಶ ಕಲ್ಪಿಸುತ್ತದೆಯೆಂಬ ನಿರೀಕ್ಷೆಯಲ್ಲಿಯೇ ಇದ್ದ ಸಿದ್ದರಾಮಯ್ಯರನ್ನು ಪಕ್ಷದ ಆಂತರಿಕ ವಿರೋಧಿಗಳು ಒಂದೇ ಕ್ಷೇತ್ರಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯರನ್ನು ಕೋಲಾರದಿಂದಲೇ ಸ್ಪರ್ಧಿ ಸುವಂತೆ ಮಾಡುತ್ತೇವೆಂದು ಕೊಚ್ಚಿಕೊಳ್ಳುತ್ತಿದ್ದ ಕೋಲಾರದ ಆರ್‌ಕೆ ಬಣಕ್ಕೆ ತೀವ್ರ ಮುಖಭಂಗ ವಾಗಿದ್ದರೆ, ಕೆಎಚ್ ಬಣ ಮೇಲುಗೈ ಸಾಧಿಸಿದಂತಾಗಿದೆ.
ಕೋಲಾರ ಕೈ ಟಿಕೆಟ್ ಯಾರಿಗೂ ಬೇಡ ವಾದ ಕೂಸು: 2023ರ ಚುನಾವಣಾ ಕಾವು ಏರುವ ಮುನ್ನವೇ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ಕಾರಣದಿಂದ ನಿತ್ಯ ಪ್ರಚಾರಕ್ಕೊಳಗಾಗಿದ್ದ ಕೋಲಾರ ಕ್ಷೇತ್ರ ಇದೀಗ ತಣ್ಣಗಾಗುವಂತಾಗಿದೆ. ಕೋಲಾರದ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡವಾದ ಕೂಸಾಗಿ ಪರಿಣಮಿಸಿದೆ. ಕಾಡಿ ಬೇಡಿ ಕೊತ್ತೂರು ಮಂಜುನಾಥ್‌ರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವಂತಾಗಿದೆ. ರಾಹುಲ್ ಗಾಂಧಿ ಕೋಲಾರ ಭೇಟಿಗೂ ಒಂದು ದಿನ ಮುನ್ನ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬುದು ದೃಢಪಟ್ಟಿದ್ದು, ಇದರ ಕರಿ ನೆರಳು ಕಾರ್ಯಕ್ರಮದ ಮೇಲೆ ಬೀಳುವ ಆತಂಕ ಎದುರಾಗಿದೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ವೆಂಬ ವಿಚಾರವು ಶುಕ್ರವಾರ ಸಂಜೆ ಯಿಂದಲೇ ಹರಡಿದ್ದು, ಆರ್‌ಕೆ ತಂಡದ ರೂವಾರಿ ರಮೇಶ್‌ಕುಮಾರ್ ಮುನಿಸಿಕೊಂಡಿದ್ದರು. ಶನಿವಾರ ಬೆಳಿಗ್ಗೆಯೇ ರಣದೀಪ್ ಸುರ್ಜೆವಾಲಾ ರಮೇಶ್‌ಕುಮಾರ್ ನಿವಾಸವಿರುವ ಅಡ್ಡಗಲ್‌ಗೆ ತೆರಳಿ ರಮೇಶ್ ಕುಮಾರ್‌ರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.
ಸಿದ್ದು ಸ್ಪರ್ಧೆಯೆಂದು ತಣ್ಣಗಾಗಿದ್ದ ಆಕಾಂಕ್ಷಿಗಳು: ಆದರೂ, ಆರ್‌ಕೆ ತಂಡದ ಬಹುತೇಕ ಸದಸ್ಯರು ಸಿದ್ದರಾಮಯ್ಯ ಇಲ್ಲದ ಕೋಲಾರದಲ್ಲಿ ಚುನಾವಣೆ ಎದುರಿಸುವುದು ಹೇಗೆ ಎಂದು ಚಿಂತಿತ ರಾಗಿದ್ದಾರೆ. ಮುನಿಸು ಮಾಯವಾಗಿಸಲು ಆರ್‌ಕೆ ತಂಡವನ್ನು ಮೆಚ್ಚಿಸುವ ಸಲುವಾಗಿಯೇ ಅವರ ತಂಡದ ಕೊತ್ತೂರು ಮಂಜುನಾಥ್‌ರಿಗೆ ಟಿಕೆಟ್ ಘೋಷಿಸಲಾಗಿದೆ. ಆದರೆ, ಇದನ್ನು ಸ್ವಾಗತಿಸುವ ಸ್ಥಿತಿಯಲ್ಲಿ ಖುದ್ದು ಕೊತ್ತೂರು ಮಂಜುನಾಥ್ ಮತ್ತು ಆರ್‌ಕೆ ತಂಡ ಇಲ್ಲವಾಗಿದೆ. ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಸ್ಪರ್ಧಿಸ್ತುತಾರೆಂಬ ಕಾರಣದಿಂದಾಗಿ ಕಾಂಗ್ರೆಸ್ ಟಿಕೆಟ್ ಬಯಸಿದ್ದ 12ಕ್ಕೂ ಹೆಚ್ಚು ಮಂದಿ ತಮ್ಮ ಆಸೆಯನ್ನು ಅದುಮಿಟ್ಟು ಕೊಂಡಿದ್ದರು. ಕೋಲಾರ ಟಿಕೆಟ್‌ಗಾಗಿ ಆರ್‌ಕೆ ತಂಡ ಮತ್ತು ಕೆಎಚ್ ತಂಡದ ನಡುವೆ ಪೈಪೋಟಿಯೂ ಏರ್ಪಟ್ಟಿತ್ತು. ಆದರೆ, ಸಿದ್ದರಾಮಯ್ಯ ಸ್ಪರ್ಧಿಸುತ್ತಾ ರೆಂಬ ಕಾರಣಕ್ಕೆ ಎಲ್ಲಾ ಆಕಾಂಕ್ಷಿಗಳು ತಣ್ಣಗಾಗಿದ್ದರು.
ಟಿಕೆಟ್ ಘೋಷಣೆ ಸ್ವಾಗತಿಸುವ ಸ್ಥಿತಿಯಲ್ಲಿಲ್ಲ ಮಂಜುನಾಥ್: ಇದೀಗ ನಾಮಪತ್ರ ಸಲ್ಲಿಸಲು ನಾಲ್ಕುದಿನ ಬಾಕಿ ಉಳಿದಿದೆ ಎನ್ನುವಾಗ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಗುರುವಾರದಿಂದಲೇ ಸಿದ್ದರಾಮಯ್ಯ ಬದಲು ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಪಕ್ಷದ ಆಂತರಿಕವಾಗಿ ಮುಖಂಡರ ವಲಯದಲ್ಲಿ ಚರ್ಚೆ ಗಳು ನಡೆದಿವೆ.
ಆದರೆ, ಬಹುತೇಕ ಆಕಾಂಕ್ಷಿಗಳು ಈ ಹೊತ್ತಿನಲ್ಲಿ ತಮಗೆ ಟಿಕೆಟ್ ಬೇಡ ಎಂದೇ ಹೇಳಿಬಿಟ್ಟಿದ್ದಾರೆ. ಬಹಳ ಬೇಡಿಕೆಯಲ್ಲಿದ್ದ ಕೋಲಾರ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡವಾದ ಪರಿಸ್ಥಿತಿಗೆ ಬಂದು ತಲುಪಿಬಿಟ್ಟಿತ್ತು. ಅಂತಿಮವಾಗಿ ಕೋಲಾರದಿಂದ ಕೊತ್ತೂರು ಮಂಜುನಾಥ್‌ರ ಹೆಸರನ್ನು ಘೋಷಿಸಲಾಗಿದೆ. ಆದರೆ, ಟಿಕೆಟ್ ಘೋಷಣೆಯಾದರೂ ಅದನ್ನು ಸ್ವಾಗತಿಸುವ ಸ್ಥಿತಿಯಲ್ಲಿ ಕೊತ್ತೂರು ಮಂಜುನಾಥ್ ಇಲ್ಲ. ಮೂರು ಬಾರಿ ಮುಂದೂಡಿ ಭಾನುವಾರಕ್ಕೆ ನಿಗದಿಯಾಗಿರುವ ರಾಹುಲ್ ಗಾಂಧಿ ಕಾರ್ಯಕ್ರಮವು ಇವೆಲ್ಲಾ ಬೆಳವಣಿಗಳಿಂದ ಕಳೆ ಕಳೆದುಕೊಳ್ಳುವಂತಾಗಿದೆ.
ಸದ್ಯಕ್ಕೆ ಕೋಲಾರ ಕಾಂಗ್ರೆಸ್ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಯಾವ ಮುಖಂಡರು ಬಹಿರಂಗವಾಗಿ ಏನನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲವಾಗಿದ್ದಾರೆ. ಭಾನುವಾರ ಕೋಲಾರಕ್ಕೆ ಆಗಮಿಸಲಿ ರುವ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಕೋಲಾ ರದ ಕಾಂಗ್ರೆಸ್ ಮುಖಂಡರ ಕಗ್ಗಂಟು ಬಗೆಹರಿಯು ತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.