ಕೋಲಾರ: ಕೋವಿಡ್ 19 ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆ
Team Udayavani, Jun 21, 2020, 7:19 AM IST
ಕೋಲಾರ: ಜಿಲ್ಲೆಯಲ್ಲಿ ಶನಿವಾರ ನಾಲ್ಕು ಕೋವಿಡ್ 19 ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 56 ತಲುಪಿದೆ. ಮೂವರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 32 ಆಗಿದೆ. ಕೋಲಾರ ತಾಲೂಕಿನ ಪಿ.4863, ಪಿ.6170 ಮತ್ತು ಬಂಗಾರ ಪೇಟೆಯ ಪಿ.6175 ರೋಗಿಗಳು ಕೋವಿಡ್ 19ದಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಮನೆಯಲ್ಲಿ ಕ್ವಾರಂಟೈನ್‌ಗೆ ಬಿಡುಗಡೆ ಹೊಂದಿದ್ದಾರೆ.
ದೆಹಲಿಯಿಂದ ಕೆಜಿಎಫ್ಗೆ ಆಗಮಿಸಿರುವ 43 ವರ್ಷದ ಮಹಿಳೆಗೆ ಸೋಂಕು ಕಂಡು ಬಂದಿದ್ದು, ಆರ್.ಎಲ್.ಜಾಲಪ್ಪ ಕೋವಿಡ್-19 ಆಸ್ಪತ್ರೆಗೆ ಸೇರಿ ಸಲಾಗಿದೆ. ಕೋಲಾರದಲ್ಲಿ ಪಿ.8060 ಸಂಪರ್ಕ ದಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿಯೇ 27 ಮತ್ತು 29ವರ್ಷದ ಪುರುಷರು ಹಾಗೂ 26 ವರ್ಷದ ಯುವತಿಗೆ ಕೋವಿಡ್ 19 ಸೋಂಕು ಪತ್ತೆ ಯಾಗಿದೆ. ಶನಿವಾರ ಸಂಜೆ ಬಿಡುಗಡೆಯಾದ ಆರೋಗ್ಯ ಬುಲೆಟಿನ್‌ನಲ್ಲಿ ಕೋಲಾರ ಜಿಲ್ಲೆಯ ಸೋಂಕಿತರ ಸಂಖ್ಯೆ 56 ಆಗಿದ್ದು, ಇದರ ಜೊತೆಗೆ ಕೋಲಾರ ಗಲ್‌ಪೇಟೆಯ 31 ವರ್ಷದ ಪುರುಷರಿಗೆ ಕೋವಿಡ್ 19 ಪತ್ತೆಯಾಗಿದೆ.
ಇದೇ ರೀತಿ ಬಂಗಾರಪೇಟೆ ಪಟ್ಟಣಕ್ಕೆ ಬೆಂಗಳೂರಿನಿಂದ ಬಂದಿರುವ 19 ವರ್ಷದ ಯುವಕ ಹಾಗೂ 26 ವರ್ಷದ ಯುವತಿಯಲ್ಲಿ ಕೋವಿಡ್ 19 ಪತ್ತೆಯಾಗಿದೆ. ಈ ಮೂವರು ಸೇರಿದಂತೆ ಜಿಲ್ಲೆಯ ಸೋಂಕಿತರ ಪಟ್ಟಿ 59ಕ್ಕೇರಿದಂತಾಗಿದ್ದು, ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಈ ಪಟ್ಟಿಗೆ ಮತ್ತಷ್ಟು ಸೋಂಕಿತರು ಸೇರುವ ಸಾಧ್ಯತೆಗಳಿದ್ದು, ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 60 ದಾಟುವ ಸಾಧ್ಯತೆಗಳಿವೆ.
ಅಕ್ಕ-ತಮ್ಮನಿಗೆ ಕೋವಿಡ್ 19 ಪಾಸಿಟಿವ್
ಬಂಗಾರಪೇಟೆ: ಬೆಂಗಳೂರಿನ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಯುವಕ, ಯುವತಿಯಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದ್ದು, ಪಟ್ಟಣದಲ್ಲಿ ಸದ್ಯಕ್ಕೆ ನಾಲ್ಕು ಕೇಸುಗಳು ಸಕ್ರಿಯವಾದಂತಾಗಿದೆ. ಪಟ್ಟಣದ ವಿವೇಕಾನಂದರ ನಗರದಲ್ಲಿ ಮೂರು ವಾರಗಳ ಹಿಂದೆ ಮಲೇಷ್ಯಾದಿಂದ ಬಂದ ವ್ಯಕ್ತಿಯೊಬ್ಬ ರಿಗೆ ಕೋವಿಡ್ 19 ಪಾಸಿ ಟಿವ್ ಬಂದಿತ್ತು. ಹೀಗಾಗಿ ನಗರವನ್ನು ಸೀಲ್ ಡೌನ್ ಮಾಡಲಾಗಿತ್ತು.
ಈ ವ್ಯಕ್ತಿಯ ಪರೀಕ್ಷಾ ವರದಿಯು ಪ್ರಸ್ತುತ ನೆಗೆಟಿವ್ ಬಂದಿರುವು ದರಿಂದ ಶನಿವಾರ ಬೆಳಗ್ಗೆ ತಾಲೂಕು ಆಡಳಿತವು ಆ ಪ್ರದೇಶವನ್ನು ಮುಕ್ತ ಮಾಡಿತ್ತು. ಇದರ ಬೆನ್ನಲ್ಲೆ ಸಂಜೆ ಮತ್ತೆರೆಡು ಕೋವಿಡ್ 19 ಪಾಸಿಟಿವ್ ಇದೇ ವಾರ್ಡ್‌ನಲ್ಲಿ ಬಂದಿರುವುದರಿಂದ ಮತ್ತೆ ಸೀಲ್‌ಡೌನ್ ಮಾಡಲಾಗಿದೆ. ವಿವೇಕಾನಂದನಗರದ ಬಾಲಾಜಿಸಿಂಗ್ ಲೇಔಟ್‌ನಲ್ಲಿ ವಾಸವಾಗಿ ರುವ 25 ವರ್ಷ ಯುವತಿ ಹಾಗೂ ಈಕೆಯ ತಮ್ಮ 22 ವರ್ಷದ ಯುವಕನಿಗೆ ಸೋಂಕು ಬಂದಿದೆ.
ಬೆಂಗಳೂರಿನ ಯಲ ಹಂಕದಲ್ಲಿ ವಾಸವಾಗಿ ರುವ ತಮ್ಮ ದೊಡ್ಡ ಪ್ಪನ ಮಗ ಎಲ್‌ಐಸಿ ಏಜೆಂಟ್ ಆಗಿರುವ 30 ವರ್ಷದ ಯುವಕನಿಗೆ ಶುಕ್ರವಾರ ಬೆಳಗ್ಗೆ ಕೋವಿಡ್ 19 ಪಾಸಿಟಿವ್ ಬಂದಿತ್ತು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆಯು ಅಕ್ಕ, ತಮ್ಮನನ್ನು ಪತ್ತೆಹಚ್ಚಿ ಕೋವಿಡ್ 19 ಪರೀಕ್ಷೆಗೆ ಒಳಪಡಿಸಿತ್ತು. ವರದಿಯಲ್ಲಿ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ.
ಶುಕ್ರವಾರದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದ ಇವರಿಬ್ಬರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುನೀಲ್, ಆರೋಗ್ಯ ನಿರೀಕ್ಷಕ ಆರ್. ರವಿ, ಆದರ್ಶ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ಆರೋಗ್ಯಾಧಿಕಾರಿ ಗೋವಿಂದರಾಜ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.