ಕೋಲಾರ : ಎಂ. ವಿ. ಕೃಷ್ಣಪ್ಪ ಪತ್ನಿ ಪ್ರಮೀಳಮ್ಮ ನಿಧನ
Team Udayavani, Jun 23, 2021, 1:54 PM IST
ಕೋಲಾರ : ಹೈನೋದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದು ಇಂದು ಲಕ್ಷಾಂತರ ರೈತರ ಜೀವನಕ್ಕೆ ದಾರಿ ದೀಪವಾಗಿರುವ ದಿವಂಗತ ಎಂ. ವಿ. ಕೃಷ್ಣಪ್ಪ ರವರ ಧರ್ಮಪತ್ನಿ ಹಾಗೂ ಕೋಲಾರ ಜಿಲ್ಲೆಯ ಪ್ರಭಾವಿ ಮುಖಂಡರಾದ ಶ್ರೀ ಅಶೋಕ್ ಕೃಷ್ಣಪ್ಪ ಮತ್ತು ಜಯಸಿಂಹ ಕೃಷ್ಣಪ್ಪ ರವರ ತಾಯಿ ಪ್ರಮೀಳಮ್ಮ ಕೃಷ್ಣಪ್ಪ (95) ವರ್ಷ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯಸರ್ಕಾರಗಳಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಕೋಲಾರಜಿಲ್ಲೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂ. ವಿ. ಕೆ ರವರ ಸಾಧನೆಯಲ್ಲಿ ಮೃತ ಪತ್ನಿ ಪ್ರಮೀಳಮ್ಮ ರವರ ಪಾತ್ರವೂ ಇತ್ತು ಎಂದು ತಿಳಿಸಿದ್ದಾರೆ.
ಸ್ವಾತಂತ್ರ ಹೋರಾಟದಲ್ಲಿ ಗಂಡ ಕೃಷ್ಣಪ್ಪರವರ ಜೊತೆ ಬಾಗಿಯಾಗಿದ್ದ ಪ್ರಮೀಳಮ್ಮ ಹಲವು ಭಾರಿ ಜೈಲಿಗೂ ಹೋಗಿದ್ದರು ಇತ್ತೀಚಿನ ವರೆಗೂ ಅರೋಗ್ಯವಾಗಿಯೇ ಇದ್ದ ಪ್ರಮೀಳಮ್ಮ ಕೆಲವು ದಿನಗಳಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದ್ದು ಈ ದಿನ 23-06-21ರಂದು ಬೆಳಿಗ್ಗೆ ಬೆಂಗಳೂರು ಅವರ ಸ್ವಗೃಹದಲ್ಲಿ ನಿಧಾನರಾಗಿದ್ದಾರೆ.
ಇಂದು ಸಂಜೆ 4ಗಂಟೆಗೆ ಕೆಜಿಎಪ್ ತಾಲೂಕು ಬಂಗಾರುತಿರುಪತಿ (ಗುಟ್ಟಹಳ್ಳಿ ) ಬಳಿಯ ಅವರ ಸ್ವಂತ ತೋಟದ ಭೂಮಿಯಲ್ಲಿ ( ಗಂಡ ದಿವಂಗತ ಎಂ. ವಿ. ಕೃಷ್ಣಪ್ಪ ಸಮಾಧಿ ಪಕ್ಕದಲ್ಲೇ ) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕೋವಿಡ್ 19 ಹಿನ್ನಲೆಯಲ್ಲಿ ಎಲ್ಲರಿಗೂ ಮಾಹಿತಿ ನೀಡಲು ಸಾಧ್ಯವಾಗದ ಕಾರಣ ವಿಷಯ ತಿಳಿದವರು ತುಂಬಾ ಆಪ್ತರು,ಸಂಬಧಿಕರು,ಹಿತೈಷಿಗಳು, ಮತ್ತು ಅಭಿಮಾನಿಗಳು ಭಾಗವಹಿಸಲು ಸಾಧ್ಯವಾಗದಿದ್ದರೆ ಶ್ರದ್ದಾoಜಲಿ,ಸಂತಾಪಗಳನ್ನು ಸೂಚಿಸಬೇಕೆಂದು ಕುಟುಂಬದವರು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.