ಕೋಲಾರದಲ್ಲಿ ಸಂಕ್ರಾಂತಿ ಸಂಭ್ರಮ; ಕಾರ್ಗಿಲ್ ವೀರರಿಗೆ ಸನ್ಮಾನ
Team Udayavani, Jan 21, 2017, 3:00 PM IST
ಕೋಲಾರ: ನಗರದ ಕ್ರೀಡಾ ಅಭಿವೃದ್ಧಿ ಅಕಾಡೆಮಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಾಂತಿ ಅಂಗವಾಗಿ ನಡೆಸಿದ ನಗೆಹಬ್ಬದ ವೇಳೆ ಕಾರ್ಗಿಲ್ ಯೋಧರು, ಜಿಲ್ಲೆಯ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರನ್ನು ಶಾಸಕ ಆರ್.ವರ್ತೂರು ಪ್ರಕಾಶ್ ಸನ್ಮಾನಿಸಿದರು.
ಕೋಲಾರ ಜಿಲ್ಲಾ ಕ್ರೀಡಾ ಅಭಿವೃದ್ಧಿ ಅಕಾಡೆಮಿ ವತಿಯಿಂದ ನಗರದ ಮಿನಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯಕ್ಕೆ ಕಾರಣರಾದ ಹವಾಲ್ದಾರ್ ಟಿ.ಯು.ಜನಾದìನ್, ಹವಾಲ್ದಾರ್ ಸಿ.ಎಂ.ನಾರಾಯಣಸ್ವಾಮಿ, ಎಲ್.ನಾಯಕ್ ಆಂಜನೇಯಬಾಬು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್, ಕೋಲಾರದ ಜನತೆಗೆ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿ, ಜಿಲ್ಲೆಗೆ ಒಳ್ಳೆಯ ಮಳೆ- ಬೆಳೆಯಾಗಲಿ ಎಂದು ಹಾರೈಸಿದರು. ಕನ್ನಡಸೇನೆ ರಾಜಾಧ್ಯಕ್ಷ ಕುಮಾರ್, ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಳ್ಳಬೇಕು ಎಂದರು. ಫೆ.18ರಂದು ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ಜನತೆಯನ್ನು ಕೋರಿದರು.
ಹಾಸ್ಯ ಕಲಾವಿದ ಪ್ರಾಣೇಶ್ ಮಾತನಾಡಿ, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ನಗು ನೋವನ್ನು ಮರೆಸಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಇಂದಿನ ಒತ್ತಡದ ಜೀವನದಿಂದಾಗಿ ಪರಸ್ಪರ ಬಾಂಧವ್ಯ ದೂರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಗೆಹಬ್ಬಗಳು ಹೆಚ್ಚು ಹೆಚ್ಚಾಗಿ ಮೂಡಿ ಬರಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾದ ಯೋಗೇಶ್, ಭರತನಾಟ್ಯ ಕಲಾವಿದ ಮಾಲೂರಿನ ಜೆಎಸ್‌ಎಸ್ ಶಾಲೆಯ ಕನ್ನಡ ಪೂರ್ಣಶ್ರೀ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್.ಅಮೃತಾ, ಸಾಯಿ ನಾಗೇಂದ್ರ, ಜೆ.ವರ್ಷಿತಾ, ಸ್ವಾತಿ, ನಿತಿನ್ ಯಾದವ್ ಅವರನ್ನು ಸನ್ಮಾನಿಸಲಾಯಿತು.
ಹಾಸ್ಯ ಕಲಾವಿದರಾದ ನರಸಿಂಹಜೋಷಿ, ಬಸವರಾಜ್ ಮಹಾಮನಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ತಮ್ಮ ಸಾಹಿತ್ಯ ಹಾಗೂ ಹಾಸ್ಯದ ಮಿಶ್ರಣದೊಂದಿಗೆ ನೆರೆದಿದ್ದ ಪ್ರೇಕ್ಷಕರಿಗೆ ಉಣಬಡಿಸಿದರು. ಪ್ರಾಣೇಶ್, ನರಸಿಂಹಜೋಷಿ, ಮಹಾಮನಿ ಅವರ ನವಿರಾದ ಹಾಸ್ಯ ಚಟಾಕಿಗಳು ಜನತೆಯನ್ನು ಸಂತಸದಲ್ಲಿ ತೇಲಿಸಿದವು.
ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ನಗರಸಭೆ ಸದಸ್ಯರಾದ ಪ್ರಸಾದ್ ಬಾಬು, ಮುರಳೀಗೌಡ, ಸೋಮಶೇಖರ್, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಬಿಜೆಪಿ ರಾಜ್ಯ ಯುವ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಎಪಿಎಂಸಿ ನಿರ್ದೇಶಕ ದೇವರಾಜ್ ಇದ್ದರು. ಕುರುಬರಪೇಟೆ ವೆಂಕಟೇಶ್ ಸ್ವಾಗತಿಸಿದರೆ, ಶಿವಕುಮಾರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.