ಕೋಲಾರ: 3 ಹಂಗಾಮಿನಲ್ಲೂ ಬಿತ್ತನೆ, ಫಸಲು ಖೋತಾ!
Team Udayavani, Mar 1, 2024, 2:25 PM IST
ಉದಯವಾಣಿ ಸಮಾಚಾರ
ಕೋಲಾರ: ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ನಿ ರೀಕ್ಷಿತ ಫಸಲು ನೀಡದೆ ರೈತರು ನಿರಾಶರಾಗ ಬೇ ಕಾಯಿತು. ಕೋಲಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.52.24, ಹಿಂಗಾರು ಹಂಗಾ ಮಿನಲ್ಲಿಶೇ.113 ಮತ್ತು ಬೇಸಿಗೆ ಹಂಗಾಮಿನಲ್ಲಿ ಶೇ.35ರಷ್ಟು ಮಾತ್ರವೇ ಬಿತ್ತನೆಯಾಗಿದೆ.
ಒಟ್ಟು ಮೂರು ಹಂಗಾಮಿನ ಸರಾಸರಿ ಶೇ.66ರಷ್ಟು ಬಿತ್ತನೆಯಾಗಿದ್ದರೂ, ಸಮರ್ಪಕ ವಾದ ಮಳೆ ಬಾರದೆ ಬಿತ್ತನೆಯಾದ ಪ್ರಮಾಣದ ಲ್ಲೇ ಶೇ.50ಕ್ಕಿಂತಲೂ ಕಡಿಮೆ ಬೆಳೆಯಲ್ಲಿ ಫಸಲು ಸಿಕ್ಕಿದೆ. ಸಿಕ್ಕಿರುವ ಫಸಲಿಗೂ ಕ್ರಿಮಿಕೀಟಗಳ ಬಾಧೆ, ಬಿಳಿ ನೊಣ, ಮಣ್ಣಿನ ಫಲವತ್ತತೆ ಕಡಿ ಮೆಯಾಗಿರುವುದು ಮಾರುಕಟ್ಟೆಯಲ್ಲಿ ಧಾರಣೆ ಕುಸಿತ ಇತ್ಯಾದಿ ಸಮಸ್ಯೆಗಳಿಂದ ರೈತರು ಕಳೆದ ಸಾಲಿನಲ್ಲಿ ನಷ್ಟ ಅನುಭವಿಸುವಂತಾಯಿತು.
ಮುಂಗಾರು ಹಂಗಾಮು:ಮುಂಗಾರು ಹಂಗಾಮಿ ನಲ್ಲಿ 1.02 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ ಶೇ.52ರ ಪ್ರ ಮಾ ಣದಲ್ಲಿ 53,592 ಹೆಕ್ಟೇರ್‌ನಲ್ಲಿ ಮಾತ್ರವೇ ಬಿತ್ತ ನೆಯಾಯಿತು. ಮುಂಗಾರು ಹಂಗಾಮಿನಲ್ಲಿ ಏಕದಳ ಒಟ್ಟು 1,750 ಹೆಕ್ಟೇರ್‌ಗೆ 940 ಗುರಿ, ದ್ವಿ ದಳ 15,715 ಹೆಕ್ಟೇರ್‌ಗೆ 6,069 ಹೆಕ್ಟೇರ್ ಗುರಿ, ಎಣ್ಣೆ ಕಾಳು 11,953 ಹೆಕ್ಟೇರ್ ಗುರಿಗೆ 3,003 ಹೆ ಕ್ಟೇರ್ ಗುರಿ ಸಾಧಿಸಲಾಗಿದೆ.
ಹಿಂಗಾರು ಹಂಗಾಮು: ಹಿಂಗಾರು ಹಂಗಾಮಿ ನಲ್ಲಿ3,956 ಹೆಕ್ಟೇರ್ ಗುರಿ ಹೊಂದಲಾಗಿತ್ತು. ಸಾ ಧನೆ ಮಾಡಿದ್ದು 4,472 ಹೆಕ್ಟೇರ್ ಪ್ರದೇಶದಲ್ಲಿ. ಮೇಲ್ನೋಟಕ್ಕೆ ಬಿತ್ತನೆ ಗುರಿ ಮೀರಿ ಸಾಧಿಸಿರುವ ಕುರಿತು ಅಂಕಿ-ಅಂಶಗಳು ವಿವರಿಸಿದರೂ, ಮಳೆ ಬಾರದ ಕಾರಣಕ್ಕೆ ಮೇವಿನ ಕೊರತೆಯಾಗದಂತೆ ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಜೋಳ, ಮುಸುಕಿನ ಜೋಳ ಹಾಗೂ ಹುರುಳಿ ಬಿ ತ್ತನೆ ಮಾಡಿದ್ದರಿಂದ ಬಿತ್ತನೆ ಪ್ರಮಾಣ ಗುರಿ ಮೀರಿ ಸಾಧಿಸಿರುವ ಚಿತ್ರಣ ಸಿಗುತ್ತಿದೆ.
ಗುರಿ ಮೀರಿ ಸಾಧನೆ: ಹಿಂಗಾರು ಹಂಗಾಮಿನಲ್ಲಿ ಮೇವಿನ ಜೋಳ 840 ಹೆಕ್ಟೇರ್ ಗುರಿಗೆ 432 ಹೆಕ್ಟೇರ್ ಸಾಧನೆ, ಮುಸುಕಿನ ಜೋಳ 237 ಹೆ ಕ್ಟೇರ್ ಗುರಿಗೆ 314 ಗುರಿ ಸಾಧನೆ ಹಾಗೂ ಏಕದಳ 477 ಗುರಿಗೆ 401 ಸಾಧನೆ, ದ್ವಿದಳ 3479 ಹೆಕ್ಟೇರ್ ಗುರಿಗೆ 4,071 ಸಾಧನೆ ಮಾಡಲಾಗಿದೆ. ಹುರುಳಿ ಮಾತ್ರ 3,360 ಗುರಿಗೆ 4,065 ಹೆಕ್ಟೇರ್ ಸಾಧನೆ ಮಾಡಿ ಗುರಿಮೀರಿ ಸಾಧನೆ ಮಾಡಲಾಗಿದೆ
.
8 ಕೋಟಿ ಪರಿಹಾರ: ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ಬಿದ್ದ ಭಾರೀ ಮಳೆಯಿಂದ ತೊಂದರೆಗೊಳಗಾದ ತೋಟಗಾರಿಕೆ ಬೆಳೆಗಾರರ 6,186 ಫಲಾನುಭವಿಗಳಿಗೆ ಪರಿಹಾರ ತಂತ್ರಾಂಶದಲ್ಲಿ 8 ಕೋಟಿ ರೂ.ಗಳ ಮೊತ್ತದ ಪರಿಹಾರವನ್ನು ನೀಡಲಾಗಿದೆ.
ಪಶುಸಂಗೋಪನೆ ಇಲಾಖೆ: ಹಸಿರು ಮೇವು ಬೆಳೆ ಬೆಳೆಯಲು ಮತ್ತು ಬರ ಪರಿಸ್ಥಿತಿಯನ್ನು ನಿಭಾಯಿಸಲು ಆಸಕ್ತ ನೀರಾವರಿಯುಳ್ಳ ರೈತರಿಗೆ 13,540 ವಿವಿಧ ರೀತಿಯ ಮೇವಿನ ಬೀಜದ ಮಿನಿ ಕಿಟ್ಟು ಉಚಿತ ವಾಗಿ 6,500 ರೈತರಿಗೆ ವಿತರಿಸಲಾಗಿದೆ. 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 2,22,114 ಜಾನುವಾರುಗಳಿಗೆ ಉಚಿತವಾಗಿ ಕಾಲು-ಬಾಯಿ ಜ್ವರ ರೋಗದ ವಿರುದ್ಧ ಶೇ.97ರಷ್ಟು ಲಸಿಕೆ ಹಾಕಲಾಗಿದೆ.
ಸಮಾಧಾನಕರ ಬೆಳೆ ಬಂದರೆ ಸಾಕು ಹಾಲಿನ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆಯು
ಈಗ ಬರ ಪರಿಸ್ಥಿತಿಯಿಂದ ನಾಲ್ಕನೇ ಸ್ಥಾನಕ್ಕೆ ಕು ಸಿದು ಈಗ ಸ್ವಲ್ಪ ಚೇತರಿಕೆಯಾಗಿ ಮೂರನೇ ಸ್ಥಾನಕ್ಕೇರುವಂತಾಗಿದೆ. ಒಟ್ಟಾರೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಹಾಲು ಉತ್ಪಾದನೆಯಲ್ಲಿ ಕೋಲಾರ ಜಿಲ್ಲೆಯ ರೈತಾಪಿ ವರ್ಗ 2023-24ನೇ ಸಾಲಿನಲ್ಲಿ ಕಷ್ಟ-ನಷ್ಟಗಳನ್ನು ಎದುರಿಸಿದ ಜಿಲ್ಲೆಯಾಗಿ ಹೊರ ಹೊಮ್ಮಿದೆ. ಈ ಸಾಲಿನಲ್ಲಿಯೂ ಕಳೆದ ಜನವರಿ ಯಿಂದ ಈವರೆಗೂ ಉತ್ತಮ ಮಳೆಯಾಗಿಲ್ಲ. ಆದರೂ, ಈ ಸಾಲಿನಲ್ಲಿ ಉತ್ತಮ ಮಳೆಯಾಗಿ ಕೆರೆಕುಂಟೆಗಳು ಭರ್ತಿಯಾಗಿ ಮುಂಗಾರು,
ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಭ ರ್ಜರಿ ಅಲ್ಲದಿದ್ದರೂ, ಸಮಾಧಾನಕರ ಬೆಳೆ ತೆಗೆಯುವಂತಾದರೆ ಸಾಕು ಎಂಬ ನಿರೀಕ್ಷೆ ರೈತರದ್ದಾಗಿದೆ.
ಬೇಸಿಗೆ ಹಂಗಾಮಿನಲ್ಲಿ ಕೇವಲ ಶೇಕಡಾ 35ರಷ್ಟು ಮಾತ್ರ ಬಿತ್ತನೆ ಬೇಸಿಗೆ ಹಂಗಾಮಿನಲ್ಲಿ 3,560 ಹೆಕ್ಟೇರ್ ಗುರಿ ಇ ತ್ತಾದರೂ, ಕೇವಲ ಶೇ.35 ಪ್ರಮಾಣದಲ್ಲಿ 664 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಬಿತ್ತನೆ ಮಾಡಲಾಗಿದೆ. ಒಟ್ಟಾರೆ, ಮೂರು ಹಂಗಾಮು ಈ ಬಾರಿ ರೈತರಿಗೆ ಕೈಕೊಟ್ಟಿರುವುದನ್ನು ಬಿತ್ತನೆ ಫ ಸಲಿನ ಅಂಕಿ-ಅಂಶಗಳು ವಿವರಿಸುತ್ತಿವೆ. ಬೇಸಿಗೆ ಹಂಗಾಮಿನಲ್ಲಿ 1,485 ಹೆಕ್ಟೇರ್ ಭತ್ತದ ಗುರಿ ಇದ್ದರೂ ಸಾಧಿಸಿದ್ದು 119 ಹೆಕ್ಟೇರ್ ಮಾತ್ರ. 600 ಹೆ ಕ್ಟೇರ್ ರಾಗಿ ಗುರಿಗೆ ಸಾಧಿಸಿದ್ದು 172 ಹೆಕ್ಟೇರ್ ಮಾತ್ರ. ಅಲಸಂದೆ 135 ಹೆಕ್ಟೇರ್, ನೆಲಗಡಲೆ 500 ಹೆಕ್ಟೇರ್ ಗುರಿ ಹೊಂದಿದ್ದರೂ, ಮಳೆ ಕೊರತೆ ಕಾರಣದಿಂದ ಶೂನ್ಯ ಹೆಕ್ಟೇರ್‌ನಲಿ ಬಿತ್ತನೆ ಕಾಣಿಸಿರುವುದು ಈ ವರ್ಷದ ಪರಿಸ್ಥಿತಿ ವಿಕೋಪಕ್ಕೆ ಸಾಕ್ಷಿಯಾಗಿದೆ.
ಮಳೆ ಕೊರತೆಯಿಂದ ಕೋಲಾರವನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಲಾಗಿದೆ. ರೈತರಿಗೆ ನೀಡಿರುವ 2000 ಪರಿಹಾರ ಸಾಲದಾಗಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ನೀರಿನ ಕೊರತೆ ಎದು ರಾಗುತ್ತಿದೆ. ಪ್ರತಿ ಹೆಕ್ಟೇರ್ ನಷ್ಟಕ್ಕೆ ಕನಿಷ್ಠ 75 ಸಾವಿರ ಪರಿಹಾರ ನೀಡಬೇಕು. ಕೋಲಾರದಂಥ ಸತತ ಬರಪೀಡಿತ ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮ ಕೈಗೊಂಡು ಬರ ಬರುವುದಕ್ಕಿಂತ ಮುಂಚಿತವಾಗಿಯೇ ಯೋಜಿಸಿ ಕಾರ್ಯರೂಪಕ್ಕೆ ತರಬೇಕು.
●ನಳಿನಿಗೌಡ, ರೈತಸಂಘ ಮಹಿಳಾ ಘಟಕದ ಜಿಲ್ಲಾಧ್ಯಕ್ಷ
ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಹವಾಮಾನ ಮುನ್ಸೂಚನೆ ಇದೆ. ಆದ್ದರಿಂದ, ಮುಂಗಾರು ಮುಂಚಿತವಾಗಿಯೇ ಆರಂಭವಾಗುವ ಲಕ್ಷಣಗಳಿವೆ. ಉತ್ತಮ ಮಳೆ ಬೆಳೆಯಾಗಿ ಬರ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ.
●ಎಂ.ಆರ್.ಸುಮಾ, ಜಂಟಿ ಕೃಷಿ ನಿರ್ದೇಶಕರು, ಕೋಲಾರ
■ ಕೆ.ಎಸ್.ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.