ಇಂದಿನಿಂದ ಕೋಲಾರ-ವೈಟ್‌ ಫೀಲ್ಡ್ ರೈಲು ಸಂಚಾರ


Team Udayavani, Dec 23, 2019, 2:21 PM IST

kolar-tdy-1

ಕೋಲಾರ: ಸಂಸದ ಎಸ್‌.ಮುನಿಸ್ವಾಮಿ ಎರಡು ತಿಂಗಳ ಹಿಂದೆ ಪ್ರಕಟಿಸಿದಂತೆ ಕೋಲಾರ ಮತ್ತು ವೈಟ್‌ ಫೀಲ್ಡ್ ನಿಲ್ದಾಣಗಳ ನಡುವೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಹೊಸ ರೈಲು ಸಂಚಾರ ಡಿ.23ರಿಂದ ಆರಂಭವಾಗಲಿದೆ. 06543 ಮತ್ತು 06544 ಸಂಖ್ಯೆಯ  ರೈಲುಗಳ ಸಂಚಾರ ಪ್ರತಿ ನಿತ್ಯವೂ ಕೋಲಾರ ಮತ್ತು ವೈಟ್‌ಫೀಲ್ಡ್  ನಡುವೆ ಸಂಚರಿಸಲಿದೆ.

ಭಾನುವಾರ ಹೊರತುಪಡಿಸಿ ಪ್ರತಿ ದಿನವೂ ಬೆಳಗ್ಗೆ 7.30 ಕ್ಕೆ ಕೋಲಾರವನ್ನು ಬಿಡುವ ರೈಲು ಬೆಳಗ್ಗೆ 10.55ಕ್ಕೆ ವೈಟ್‌ಫೀಲ್ಡ್  ತಲುಪುತ್ತದೆ. ಹಾಗೆಯೇ ಮಧ್ಯಾಹ್ನ 4.15ಕ್ಕೆ ವೈಟ್‌ಫೀಲ್ಡ್  ಬಿಡುವ ರೈಲು ರಾತ್ರಿ 7.40 ಕ್ಕೆ ಕೋಲಾರ ನಿಲ್ದಾಣವನ್ನು ತಲುಪುತ್ತದೆ.

ಹೆಚ್ಚುವರಿಯಾಗಿ ಓಡಾಟ: ಬಂಗಾರಪೇಟೆಯಿಂದ ಆರಂಭವಾಗುವ ರೈಲುಗಳ ಸಂಚಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ನಡುವೆ ಬೆಳಗ್ಗೆ ಆರಂಭವಾಗಿ ಕಂಟೋನ್ಮೆಂಟ್‌ ನಿಲ್ದಾಣ ಹಾಗೂ ಮೆಜೆಸ್ಟಿಕ್‌ ನಿಲ್ದಾಣ  ಗಳನ್ನು ತಲುಪುತ್ತಿವೆ. ಇವುಗಳ ನಡುವೆ ಹೆಚ್ಚುವರಿಯಾಗಿ ಈ ಹೊಸ ರೈಲು ನಿತ್ಯವೂ ಕೋಲಾರ ಮತ್ತುವೈಟ್‌ ಫೀಲ್ಡ್  ನಡುವೆ ಸಂಚರಿಸಲಿದೆ.

ಹಲವು ವರ್ಷಗಳ ಬೇಡಿಕೆ: ಕೋಲಾರ ಮತ್ತು ವೈಟ್‌ ಫೀಲ್ಡ್  ನಡುವೆ ನೇರ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಕೋಲಾರ ಜಿಲ್ಲೆಯ ಜನರಿಂದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಕೋಲಾರ ವೈಟ್‌ಫೀಲ್ಡ್  ನಡುವೆ ಹೊಸ ರೈಲು ಮಾರ್ಗ ಅಳವಡಿಸಲು ಸರ್ವೇ ಕಾರ್ಯವು ಪೂರ್ಣಗೊಂಡಿದೆ. ಆದರೆ, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ – ವೈಟ್‌ ಫೀಲ್ಡ್  ನಡುವೆ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ.

ಕಾಟ್ರಾ ರೈಲು ಸ್ಥಗಿತ: ಲೋಕಸಭಾ ಚುನಾವಣೆಗೂ ಮುನ್ನ ಯಶವಂತಪುರ ನಿಲ್ದಾಣದಿಂದ ಜಮ್ಮು ಕಾಶ್ಮೀರದ ಕಾಟ್ರಾ ರೈಲ್ವೆ ನಿಲ್ದಾಣದವರೆಗೂ ವಾರಕ್ಕೊಮ್ಮೆ ಪ್ರತಿ ಗುರುವಾರ ಕೋಲಾರ ಚಿಕ್ಕಬಳ್ಳಾಪುರ ಮಾರ್ಗವಾಗಿ ವಿಶೇಷ ನಿಜಾಮಾಬಾದ್‌ ಎಕ್ಸ್‌ಪ್ರೆಸ್‌ ಸಂಚರಿಸುತ್ತಿತ್ತು. ಆದರೆ, ಪ್ರಾಯೋಗಿಕವಾಗಿ ಮೂರು ನಾಲ್ಕು ತಿಂಗಳ ಸಂಚಾರದ ನಂತರ ಇಲಾಖೆಯು ನಿಜಾಮಾಬಾದ್‌ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ನಿಲ್ಲಿಸಿಬಿಟ್ಟಿತು. ಇದು ಜೋಡಿ ಜಿಲ್ಲೆಯ ರೈಲ್ವೆ ಪ್ರಯಾಣಿಕರ ಆಕ್ರೋಶಕ್ಕೂ ತುತ್ತಾಗಿತ್ತು. ಇದೀಗ ಸ್ಥಳೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ರೈಲು ಸಂಚಾರ ಆರಂಭವಾಗುತ್ತಿದ್ದು, ಇದನ್ನು ಇಲಾಖೆಯು ಸ್ಥಗಿತಗೊಳಿಸದಂತೆ ನಿಯಮಿತವಾಗಿ ವೇಳಾಪಟ್ಟಿಗೆ ತಕ್ಕಂತೆ ಸಂಚರಿಸುವಂತೆ ಮಾಡಿದರೆ ಪ್ರಯಾಣಿಕರು ನಿತ್ಯ ಸಂಚಾರಕ್ಕೆ ಅನುಕೂಲವಾಗುತ್ತದೆಯೆಂದು ರೈಲ್ವೆ ಪ್ರಯಾಣಿಕರು ಅಭಿಪ್ರಾಯಪಡುತ್ತಿದ್ದಾರೆ.

ಟಾಪ್ ನ್ಯೂಸ್

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.