ಬಜೆಟ್‌ನಲ್ಲಿ ಕೋಲಾರ ಮರೆತ ಸರ್ಕಾರಗಳು!


Team Udayavani, Feb 22, 2022, 2:29 PM IST

ಬಜೆಟ್‌ನಲ್ಲಿ ಕೋಲಾರ ಮರೆತ ಸರ್ಕಾರಗಳು!

ಕೋಲಾರ: ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಮುಖ್ಯಮಂತ್ರಿಗಳು ಮಂಡಿಸಿದ ಹಿಂದಿನ ಐದಾರು ಬಜೆಟ್‌ಗಳಲ್ಲಿ ಕೋಲಾರಕ್ಕೆ ಸಿಕ್ಕಿದ್ದು ಶೂನ್ಯ ಸಂಪಾದನೆ!

ಸಾಮಾನ್ಯವಾಗಿ ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಹಿಂದಿನ ವರ್ಷ ಬಜೆಟ್‌ನಲ್ಲಿ ಘೋಷಿಸಿದ ಯಾವಯೋಜನೆ ಅನುಷ್ಠಾನಗೊಂಡಿದೆ ಅಥವಾ ಇಲ್ಲ ಎಂಬುದರ ಬಗ್ಗೆ ಚರ್ಚೆಯಾಗುತ್ತದೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಬಜೆಟ್‌ ಘೋಷಣೆಗಳೂ ಇಲ್ಲ, ಅನುಷ್ಠಾನವನ್ನು ಕೇಳುವಂತೆಯೇ ಇಲ್ಲ ಎಂಬಂತಾಗಿದೆ.

2019 ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಕೋಲಾರ ಜಿಲ್ಲೆಯಜನರು ಭರ್ಜರಿಯಾಗಿ ಗೆಲ್ಲಿಸಿದ್ದರೂ, ರಾಜ್ಯ ಬಿಜೆಪಿಸರ್ಕಾರ ಮಾತ್ರ ಕೋಲಾರವನ್ನು ಗಂಭೀರವಾಗಿಪರಿಗಣಿಸುತ್ತಿಲ್ಲ. ಯಡಿಯೂರಪ್ಪ ಮಂಡಿಸಿದ ಹಿಂದಿನಎರಡೂ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನುನಿರ್ಲಕ್ಷಿಸಲಾಗಿತ್ತು. ಇದೇ ಮೊದಲ ಬಾರಿಗೆಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಮಂಡಿಸಲಿರುವ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಕೊಡುಗೆ ನೀಡುವುದಿರಲಿ ಕನಿಷ್ಠ ಕೋಲಾರ ಹೆಸರನ್ನಾದರೂ ಪ್ರಸ್ತಾಪಿಸಿದರ ಕೋಲಾರ ಧನ್ಯ…ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿರುವಂತಾಗಿದೆ.

ಹಿಂದಿನ ಬಜೆಟ್‌ನಲ್ಲಿ ಕೋಲಾರ ನಾಪತ್ತೆ: ಯಡಿಯೂರಪ್ಪ 2021ರಲ್ಲಿ ಮಂಡಿಸಿದ 2.46 ಲಕ್ಷಕೋಟಿ ರೂ. ಬಜೆಟ್‌ನಲ್ಲಿ ಕೋಲಾರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. 2020ರ ವರ್ಷ ಮಾರ್ಚ್‌ 5ರಂದುಕೋಲಾರ ಜಿಲ್ಲೆಯ ಹೆಸರನ್ನೇ ಪ್ರಸ್ತಾಪಿಸದೆ, ಬಜೆಟ್‌ಮಂಡಿಸಿ ನಿರಾಸೆ ಮೂಡಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಬಾರಿ ಬಜೆಟ್‌ ಮೂಲಕ ಮತ್ತೇಕೋಲಾರಕ್ಕೇನು ಕೊಡುತ್ತಾರೆ ಎನ್ನುವ ಕುತೂಹಲ ನಿರೀಕ್ಷೆ ಜನರಲ್ಲಿದೆ.

ಹಿಂದಿನ ಐದಾರು ಬಜೆಟ್‌ಗಳನ್ನು ಅವಲೋಕಿಸಿದಾಗ ಕೋಲಾರ ಜಿಲ್ಲೆಗೆ ಸರ್ಕಾರದ ಪ್ರಮುಖ ಕೊಡುಗೆಗಳಾಗಿ ಸಿಕ್ಕಿದ್ದು, ಸಿದ್ದರಾಮಯ್ಯ ಕಾಲದ ಜಿಲ್ಲಾಡಳಿತ ಭವನ ಹಾಗೂ ಕೆಸಿ ವ್ಯಾಲಿ ಯೋಜನೆ. ಪ್ರತ್ಯೇಕ ತಾಲೂಕಾಗಿ ಅಸ್ತಿತ್ವಕ್ಕೆ ಬಂದ ಕೆಜಿಎಫ್. ಇವನ್ನು ಹೊರತುಪಡಿಸಿದರೆ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗಳಲ್ಲಿ ಕೋಲಾರಕ್ಕೆ ಒಂದಷ್ಟು ಯೋಜನೆಗಳನ್ನು ಪ್ರಸ್ತಾಪಿಲಾಗಿತ್ತು. ಆದರೆ, ಅವು ಅನುಷ್ಠಾನವಾಗಲೇ ಇಲ್ಲ. ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಕೋಲಾರವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೂ ಯಡಿಯೂರಪ್ಪ ಕೋಲಾರ ಜಿಲ್ಲೆಯತ್ತ ಕಣ್ಣೆತ್ತಿ ನೋಡಿರಲಿಲ್ಲ.

ಹಿಂದಿನ ಬಜೆಟ್‌ಗಳಲ್ಲಿ ಪ್ರಸ್ತಾಪಿಸಿ ಮರೆತಿದ್ದೇನು?: 2016ರ ಬಜೆಟ್‌ನಲ್ಲಿ ಸಿದ್ದರಾಮಯ್ಯ ಕೋಲಾರ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜುಪ್ರಕಟಿಸಿದ್ದರು. ಆದರೆ, ಇದುವರೆವಿಗೂ ಕೈಗೂಡಿಲ್ಲ.2017ರ ಬಜೆಟ್‌ನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಿಸಿದ್ದರು. ಇದು ಅನುಷ್ಠಾನವಾಗಿಲ್ಲ.ಕೋಲಾರ ಜಿಲ್ಲೆಗೆ ಎತ್ತಿನ ಹೊಳೆ ಯೋಜನೆಯಡಿನೀರನ್ನು ಹರಿಸುವುದಾಗಿ ಹಿಂದಿನ ಅನೇಕ ಬಜೆಟ್‌ಗಳಲ್ಲಿ ಪ್ರಸ್ತಾಪಿಸಲಾಗಿದೆ. ಇಂತಿಷ್ಟು ವೇಳೆಗೆ ಯೋಜನೆಯನ್ನುಪೂರ್ಣಗೊಳಿಸುವ ವಾಕ್ಯಗಳನ್ನು ಬಜೆಟ್‌ಗಳಲ್ಲಿಯೇ ಮುದ್ರಿಸಿದೆ. ಆದರೆ, ಇದುವರೆವಿಗೂ ಎತ್ತಿನಹೊಳೆಯೋಜನೆ ಪೂರ್ಣಗೊಂಡು ಕೋಲಾರ ಜಿಲ್ಲೆಗೆ ನೀರು ಹರಿಯುವ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲ.

ಇಲ್ಲವಾದ ಇಸ್ರೇಲ್‌ ಮಾದರಿ: ಕೋಲಾರ ಸೇರಿದಂತೆ ರಾಜ್ಯದಲ್ಲಿ ಇಸ್ರೇಲ್‌ ಮಾದರಿಯ ನೀರಾವರಿ ಪದ್ಧತಿ ಅಳವಡಿಕೆಗೆ 150 ಕೋಟಿ ರೂ. ಘೋಷಿಸಿ, 5 ಸಾವಿರ ಹೆಕ್ಟೇರ್‌ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದುಎನ್ನಲಾಗಿತ್ತು. ಆದರೆ, ಕೋಲಾರ ರೈತರಿಗೆ ಇಸ್ರೇಲ್‌ಮಾದರಿಯನ್ನು ಪರಿಚಯಸಲೇ ಇಲ್ಲ.ಟೊಮೆಟೋ ಸಂಸ್ಕರಣಾ ಘಟಕ ಆರಂಭಿಸಲು 20ಕೋಟಿ ರೂ. ಇಡಲಾಗಿತ್ತು. ಆದರೆ, ಇದುಅನುಷ್ಠಾನವಾಗದೆ ಈಗಲೂ ಸುಗ್ಗಿ ಕಾಲದಲ್ಲಿ ಟೊಮೆಟೋ ರಸ್ತೆ ಬದಿ ಕಸವಾಗುತ್ತಿದೆ. ಕೋಲಾರ ಸೇರಿದಂತೆ ಹತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಹಿಳೆಯರ ಸ್ತನಕ್ಯಾನ್ಸರ್‌ ಪತ್ತೆ ಹಚ್ಚುವ ಸಲುವಾಗಿ ಸ್ತನ ರೇಖನ ವ್ಯವಸ್ಥೆ ಯಂತ್ರಗಳನ್ನು ಅಳವಡಿಸಲಾಗುವುದೆಂದುಘೋಷಿಸಲಾಗಿತ್ತು. ಇವು ರೈತರು ಮತ್ತು ಮಹಿಳೆಯರಸೇವೆಗೆ ದಕ್ಕಿಲ್ಲ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.

ರಾಯಚೂರು, ವಿಜಯಪುರ, ಮಂಡ್ಯ ಜೊತೆಗೆ ಕೋಲಾರ ಜಿಲ್ಲೆಗೆ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಜಲಲಧಾರೆಹರಿದಿದ್ದೆಲ್ಲಿ ಎನ್ನುವುದನ್ನು ಈಗಲೂ ಹುಡುಕಬೇಕಿದೆ.2021ರಲ್ಲಿ ಭರ್ಜರಿ ಮಳೆ ಸುರಿದು ಕೋಲಾರದಕೆರೆಗಳೆಲ್ಲವೂ ತುಂಬಿ ಹರಿದಿದ್ದೇ ಜಲಧಾರೆಯಾಗಿದೆ.ಕೋಲಾರಕ್ಕೆ ಸರ್ಕಾರ ಕೈಕೊಟ್ಟರೂ ಪ್ರಕೃತಿ ಕೈಕೊಟ್ಟಿರಲಿಲ್ಲ.ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಚಿನ್ನದಗಣಿಕಾರ್ಮಿಕರ ಪುನರ್ವಸತಿ ಹಾಗೂ ಪರ್ಯಾಯ ಕೈಗಾರಿಕೆಗಳ ಮೂಲಕ ಉದ್ಯೋಗ ಕೊಡುವ ಪ್ರಸ್ತಾಪನೆಗಳು ಮರೆತೇ ಹೋಗುವಂತಾಗಿದೆ.

ಸರ್ಕಾರವನ್ನು ಎಚ್ಚರಿಸುತ್ತಿರುವ ಸಂಘಟನೆಗಳು: ಐದಾರು ವರ್ಷದಿಂದಲೂ ಕೋಲಾರವನ್ನುಬಜೆಟ್‌ನಲ್ಲಿ ಕಡೆಗಣಿಸುತ್ತಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನ ಮೂಡಿಸಿದೆ. ಕೋಲಾರ ಜಿಲ್ಲೆಯ ವಿವಿಧ ಸಂಘಟನೆಗಳು ಬಜೆಟ್‌ ಮಂಡನೆಯಾಗುವಸನಿಹದಲ್ಲಿಯೇ ವಿವಿಧ ಕಾರ್ಯಕ್ರಮಗಳ ಮೂಲಕವಿವಿಧ ಯೋಜನೆಗಳನ್ನು ಸರಕಾರ ಬಜೆಟ್‌ನಲ್ಲಿಮಂಡಿಸಬೇಕೆಂಬುದರ ಬೇಡಿಕೆಯನ್ನು ಸರಕಾರಕ್ಕೆಕಳುಹಿಸುತ್ತಿವೆ. ರೈತ ಸಂಘ, ವಿಕಲಚೇತನರಕ್ಷೇಮಾಭಿವೃದ್ಧಿ ಸಂಘ, ಅಂಗನಾಡಿ, ಬಿಸಿಯೂಟ ನೌಕರರ ಸಂಘ ಮತ್ತಿತರ ಸಂಘಟನೆಗಳು ಈಗಾಗಲೇ ತಮ್ಮ ಬೇಡಿಕೆಗಳ ಕುರಿತು ಸುದ್ದಿಗೋಷ್ಠಿ ಅಥವಾ ಪ್ರತಿಭಟನೆ ಮನವಿ ನೀಡುವಿಕೆ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿವೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವೇಮಗಲ್‌ ಪಪಂ ಮೂಲ ಸೌಕರ್ಯಕ್ಕಾಗಿ 74 ಕೋಟಿ ರೂ. ಬಿಡುಗಡೆ ಮಾಡುವಂತೆ ಉಸ್ತುವಾರಿ ಸಚಿವ ಮುನಿರತ್ನರಿಗೆವೇಮಗಲ್‌ ಭಾಗದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಸಿಡಿಪಿಐ ಸಂಘಟನೆಯೂ ಬೇಡಿಕೆಗಳ ಕಿರು ಹೊತ್ತಿಗೆ ಪ್ರಕಟಿಸಿ ಬಿಡುಗಡೆ ಮಾಡಿ ಸಾರ್ವಜನಿಕರು, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಜನಪರ ಬಜೆಟ್‌ಕುರಿತು ಸಾರ್ವಜನಿಕ ವಲಯದಲ್ಲಿ ಹಕ್ಕೊತ್ತಾಯ ರೂಪಿಸುತ್ತಿದೆ. ಸಿಪಿಎಂ ಪಕ್ಷವು ಕೋಲಾರ ಜಿಲ್ಲೆಯಬೇಡಿಕೆಗಳ ಕುರಿತು ಫೆ.23ರಂದು ವಿವಿಧ ರಾಜಕೀಯಪಕ್ಷಗಳು ಮತ್ತು ಸಂಘಟನೆಗಳ ಜೊತೆಗೂಡಿಸಿ ಬಜೆಟ್‌ಕುರಿತ ಜನಾಭಿಪ್ರಾಯಮೂಡಿಸುವ ಪ್ರಯತ್ನಕ್ಕೆ ಕೈಹಾಕಿ ಸಿದ್ಧತೆಯಲ್ಲಿ ತೊಡಗಿದೆ.

ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಿಬಿಡಿ :

ಕೋಲಾರ ಜಿಲ್ಲೆಯನ್ನು ಸತತ ಐದಾರು ವರ್ಷಗಳಿಂದಲೂ ಬಜೆಟ್‌ನಲ್ಲಿ ನಿರಾಸೆಗೊಳಿಸುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಆಕ್ರೋಶ ಮೊಳಗುವಂತಾಗಿದೆ. ಇದೇ ಕಾರಣಕ್ಕಾಗಿ ರೈತ ಸಂಘಟನೆಗಳು ಕೋಲಾರ ಜಿಲ್ಲೆಯನ್ನುಈ ರೀತಿ ಕಡೆಗಣಿಸುವ ಬದಲು ಆಂಧ್ರ ಪ್ರದೇಶಕ್ಕೆ ಸೇರಿಸಿಬಿಡಿ ಎಂದ ಕೂಗನ್ನು ಎಬ್ಬಿಸಿ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಿದ್ದರು. ಆದರೆ, ಬಿಜೆಪಿ ಶಾಸಕರಿಲ್ಲದ ಕೋಲಾರ ಜಿಲ್ಲೆಯ ಯಾವುದೇ ಬೇಡಿಕೆಯನ್ನು ಸರ್ಕಾರಬಜೆಟ್‌ನಲ್ಲಿ ಘೋಷಿಸುವ ಹಂತಕ್ಕೆ ಹೋಗುತ್ತಿಲ್ಲ. ಬಜೆಟ್‌ನಲ್ಲಿ ಪ್ರಕಟವಾಗಿದ್ದನ್ನೇ ಕೋಲಾರದ ಬಿಜೆಪಿ ಮುಖಂಡರು ಮಹಾ ಪ್ರಸಾದ ಎಂಬಂತೆ ಸ್ವಾಗತಿಸಿ ಪಾವನರಾಗುತ್ತಿರುವುದು ಪ್ರತಿ ವರ್ಷದ ಸಂಪ್ರದಾಯವಾಗಿಬಿಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ.

ಹಿಂದಿನ ಹಲವು ಬಜೆಟ್‌ಗಳಲ್ಲಿ ರಾಜ್ಯ ಸರ್ಕಾರಗಳುಕೋಲಾರ ಜಿಲ್ಲೆಯನ್ನುಸಂಪುರ್ಣವಾಗಿ ಕಡೆಗಣಿಸಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಜನಾಭಿಪ್ರಾಯ ಕ್ರೂಢೀಕರಿಸಿ ಕೋಲಾರ ಜಿಲ್ಲೆಯ ತುರ್ತು ಮತ್ತು ಅಗತ್ಯ ಬೇಡಿಕೆಗಳಕುರಿತು ಸರ್ಕಾರವನ್ನು ಎಚ್ಚರಿಸಿ ಗಮನಸೆಳೆಯುವ ಪ್ರಯತ್ನಕ್ಕೆ ಸಿಪಿಎಂ ಪಕ್ಷವು ಮುಂದಾಗಿದೆ. ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ, ಸಿಪಿಐಎಂ ಕೋಲಾರ ಜಿಲ್ಲೆ.

ಕೋಲಾರ ಜಿಲ್ಲೆಗೆಹಿಂದಿನ ಬಜೆಟ್‌ಗಳಲ್ಲಿಆಗಿರುವ ಮೋಸವನ್ನುಈ ಬಾರಿಯಬಜೆಟ್‌ನಲ್ಲಿತುಂಬಿಸಿ ಕೊಡು ವಂತೆಸರ್ಕಾರಕ್ಕೆ ಮನವಿ ಮಾಡ ಲಾಗಿದೆ.ಕೋಲಾರ ಜಿಲ್ಲೆಯ ಪ್ರಮುಖ ಬೇಡಿಕೆಗಳಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನುಉಸ್ತುವಾರಿ ಸಚಿವ ಮುನಿರತ್ನ, ಸಿಎಂ ಬಸವರಾಜ್‌ಬೊಮ್ಮಾಯಿಗೆ ನೇರವಾಗಿಮನವಿ ರೂಪದಲ್ಲಿ ನೀಡಿದ್ದೇವೆ. ಓಂಶಕ್ತಿ ಚಲಪತಿ, ಕುಡಾ ಅಧ್ಯಕ್ಷ, ಬಿಜೆಪಿ ಮುಖಂಡ, ಕೋಲಾರ.

 

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.