ಕೆಎಚ್‌ಎಂ, ಮುನಿಸ್ವಾಮಿ ಭವಿಷ್ಯ ಮತಯಂತ್ರದಲ್ಲಿ
Team Udayavani, Apr 20, 2019, 10:43 AM IST
ಕೋಲಾರ: ಲೋಕಸಭಾ ಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಕಣದಲ್ಲಿದ್ದ 14 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಸುಭದ್ರವಾಗಿದೆ.
ನಗರದ ಸರಕಾರಿ ಕಾಲೇಜಿನ ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳನ್ನು ನಿಗದಿತ ಸಂಖ್ಯೆಯ ಜಾಗದಲ್ಲಿಯೇ ಪೇರಿಸಿಡಲಾಗಿದ್ದು, ಬಿಗಿ ಭದ್ರತೆಯ ನಡುವೆ ಮತಯಂತ್ರಗಳ ಭದ್ರತಾ ಕೋಣೆ ಕಿಟಕಿ ಬಾಗಿಲುಗಳಿಗೆ ಮೊಹರು ಸಮೇತ ಬೀಗ ಜಡಿಯಲಾಗಿದೆ.
ಮಧ್ಯರಾತ್ರಿ – ಬೆಳಗ್ಗೆ ಮತಯಂತ್ರಗಳ ಆಗಮನ: ಕೋಲಾರ ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಆಯಾ ತಾಲೂಕಿನಲ್ಲಿ ಸಂಗ್ರಹಿಸಿ ಅವುಗಳನ್ನು ವಿಶೇಷ ಬಂದೋಬಸ್ತ್ ವಾಹನಗಳಲ್ಲಿ ನಗರದ ಸರಕಾರಿ ಬಾಲಕರ ಕಾಲೇಜಿಗೆ ತರುವುದರೊಳಗಾಗಿ ಗುರುವಾರ ಮಧ್ಯರಾತ್ರಿ ಕಳೆದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರುವ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಗುರುವಾರ ರಾತ್ರಿ ಅಲ್ಲಿಯೇ
ಸಂಗ್ರಹಿಸಿಡಲಾಗಿತ್ತು. ಅವುಗಳನ್ನು ಶುಕ್ರವಾರ ಬೆಳಗ್ಗೆ ವಿಶೇಷ ವಾಹನದಲ್ಲಿ ಕೋಲಾರದ ಸರಕಾರಿ ಬಾಲಕರ ಕಾಲೇಜಿಗೆ ತರಲಾಯಿತು.
ಟೀ ಶರ್ಟ್: ಎರಡೂ ತಾಲೂಕುಗಳಿಂದ ವಿಶೇಷ ಟೀ ಶರ್ಟ್ ಧರಿಸಿದ್ದ ಆಯಾ ಪುರಸಭೆ, ನಗರಸಭೆ ಕಾರ್ಮಿಕರು ಶಿಸ್ತುಬದ್ಧವಾಗಿ ಮತಯಂತ್ರಗಳನ್ನು ಕಾಲೇಜಿನ ಸ್ಟ್ರಾಂಗ್ ರೂಂಗಳಿಗೆ ಸಾಗಿಸಿದರು. ಶಿಡ್ಲಘಟ್ಟ ಪೌರ ಕಾರ್ಮಿಕರು ಹಳದಿ ಬಣ್ಣದ ಹಾಗೂ ಚಿಂತಾಮಣಿ ನಗರಸಭೆಯ ಸಿಬ್ಬಂದಿ ನೀಲಿ ಬಣ್ಣದ ಟೀಶರ್ಟ್‌ಗಳನ್ನು ಧರಿಸಿದ್ದರು. ಮತಯಂತ್ರಗಳನ್ನು ಕಾಲೇಜಿಗೆ ಕರೆ ತರುವ
ಸಂದರ್ಭದಲ್ಲಿ ಬೆಂಗಾವಲು ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಕಾಲೇಜಿನ ವೃತ್ತದಲ್ಲಿ ಹಲವು ಪೊಲೀಸ್ ವಾಹನಗಳು, ಬಸ್‌ಗಳು, ಚುನಾವಣೆಗೆ ಕರೆ ತಂದಿದ್ದ ಶಾಲಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಾಗಿತ್ತು.
35 ದಿನಗಳ ಕಾಯುವಿಕೆ: ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಕೋಲಾರ ಕ್ಷೇತ್ರದಲ್ಲಿ ಏಪ್ರಿಲ್ 19 ರಂದು ಮತದಾನ ನಡೆದಿದ್ದು, ಫಲಿತಾಂಶಕ್ಕಾಗಿ ಮೇ 23 ರವರೆಗೂ ಕಾಯಬೇಕಾಗಿದೆ. ನಿಖರ ಫಲಿತಾಂಶಕ್ಕಾಗಿ ಇನ್ನು 35 ದಿನಗಳ ಕಾಲ ಕಾಯಬೇಕಾಗಿದೆ. ಅಲ್ಲಿಯ ವರೆಗೂ ಮತಯಂತ್ರಗಳನ್ನಿಟ್ಟಿರುವ ಕಾಲೇಜಿಗೆ ಭಾರಿ ಬಿಗಿ ಭದ್ರತೆ¿ನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ಇಡೀ ಜಿಲ್ಲೆಯ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಅಧಿಕಾರಿಗಳು ಸರದಿಯ ಆಧಾರದ ಮೇಲೆ ಮತ ಯಂತ್ರ ಗಳಿರುವ ಕಟ್ಟಡಕ್ಕೆ ಬಂದೋಬಸ್ತ್ ನೀಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇಡಲಾಗಿದ್ದು, ಮೊಹರು ಹಾಕಿದ ಈ ಕೊಠಡಿಗಳನ್ನು ಶಸ್ತ್ರಸಜ್ಜಿತ ಪೇದೆಗಳು ಕಾವಲು ಕಾಯುತ್ತಿದ್ದಾರೆ. ಸೂಕ್ತ ಬಂದೋಬಸ್ತ್ಗೆ ಅಗತ್ಯವಿರುವ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ. ಮತಯಂತ್ರಗಳಿರುವ ಕಾಲೇಜಿನ ಕಟ್ಟಡ ಸುತ್ತಲೂ ನಾಲ್ಕೈದು ವಾಹನಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮತ ಮಾಡಲಾಗಿದೆ.
ವಿದ್ಯುತ್ ಸರಬರಾಜು: ಮತ ಎಣಿಕೆ ದಿನದವರೆಗೂ ಮತಯಂತ್ರಗಳಿರುವ ಕಟ್ಟಡಕ್ಕೆ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಲಾಗಿದೆ. ಕಾಲೇಜಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ನಿರಂತರ ಸಂಪರ್ಕ ಕಲ್ಪಿಸುವ ಸಲುವಾಗಿ ವಿಶೇಷವಾದ ಜನರೇಟರ್ ವಾಹನವನ್ನು ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಮಾಡಲಾಗಿದೆ ಕಾಲೇಜಿನ ಕಂಬ
ಕಂಬಗಳಿಗೂ ಟ್ಯೂಬ್ ಲೈಟ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಕಾಲೇಜಿನ ಕಟ್ಟಡಕ್ಕೆ ವಿಶೇಷ ಅಂದ ಬರಲಿದೆ. ಮತಯಂತ್ರಗಳಿರುವ ಯಾವುದೇ ಕೋಣೆಯ ಮುಂಭಾಗ, ಹಿಂಭಾಗ ಕತ್ತಲು ಇಲ್ಲದಂತೆ ನೋಡಿ ಕೊಳ್ಳಲಾಗುತ್ತಿದೆ.
ಪ್ರವೇಶ ನಿರ್ಬಂಧ: ಮತಯಂತ್ರಗಳಿರುವ ಞಕಾಲೇಜಿಗೆ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದ ಯಾರು ಬೇಕೆಂದರೆ ಅವರು ಕಾಲೇಜಿಗೆ ಪ್ರವೇಶಿಸಲು ಅವಕಾಶವಿಲ್ಲ. ಕಾಲೇಜಿನ ಪ್ರವೇಶ ದ್ವಾರದಲ್ಲಿ ಚುನಾವಣಾ ಕಾರ್ಯಕ್ಕಾಗಿ ನೀಡಿರುವ ವಿಶೇಷ ಗುರುತಿನ ಚೀಟಿಯನ್ನು ತೋರಿಸಿದ ನಂತರವಷ್ಟೇ, ತಪಾಸಣೆಗೊಳಗಾಗಿ ಪ್ರವೇಶ ನೀಡಲಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳು ಆಗಾಗ್ಗೆ ಕಾಲೇಜಿಗೆ ದಿಢೀರ್ ಭೇಟಿ ಕೊಡುವ ಮೂಲಕ ಬಂದೋಬಸ್ತ್ಗೆ ನೇಮಕಗೊಂಡಿರುವ ಸಿಬ್ಬಂದಿಯನ್ನು ಎಚ್ಚರಿಸುವ ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.