ಪತ್ರಕರ್ತರಿಗೆ ಬೆದರಿಕೆ ಹಾಕುವುದು ಸರಿಯಲ್ಲ
Team Udayavani, Jun 15, 2021, 7:11 PM IST
ಬಂಗಾರಪೇಟೆ: ಯಾವ ರಾಜಕಾರಣಿಗಳ ಕೈಗೊಂಬೆಯಾಗದೇ, ನಿಸ್ವಾರ್ಥ ಹಾಗೂ ನಿಜಾಂಶ ಸುದ್ದಿ ಮಾಡಿದವರ ಮೇಲೆಜಿಲ್ಲೆಯ ಕೆಲವು ಜನಪ್ರತಿನಿಧಿಗಳು,ಪೊಲೀಸ್ ಕೇಸು ಹಾಕಿ, ಬೆದರಿಕೆಗೆ ಹಾಕುವುದು ಸರಿಯಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಮಾಧ್ಯಮದವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೊರೊನಾ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ಜನಪ್ರತಿನಿಧಿಗಳು ಮಾಡಿದ ಕೆಲಸವನ್ನು ಮಾಧ್ಯಮದವರು ಸುದ್ದಿ ಮಾಡಿದ್ದಾರೆ. ಕೆಲಸ ಮಾಡದೇ ಇರುವವರ ಬಗ್ಗೆಯೂ ಸುದ್ದಿ ಮಾಡಲಾಗಿದೆ. ಈ ಕಾರಣಕ್ಕೆಪತ್ರಕರ್ತರಿಗೆ ಬೆದರಿಕೆ ಹಾಕುವುದು ಸರಿಯಲ್ಲ, ಯಾರೂ ಸಹಿಸುವುದಿಲ್ಲ ಎಂದು ತಿಳಿಸಿದರು.
ಕೊರೊನಾ ಸೋಂಕು ತಡೆಗಟ್ಟುವವಿಚಾರದಲ್ಲಿ ಪತ್ರಕರ್ತರು ವಾರಿಯರ್ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಲ್ಲಿಜಾಗೃತಿ ಮೂಡಿಸಿ ಜನ ಸೋಂಕಿನಿಂದ ಮುಕ್ತರಾಗಲು ಕಾರಣರಾಗಿದ್ದಾರೆ. ಲಾಕ್‌ಡೌನ್ ವೇಳೆ ಸಂಕಷ್ಟದಲ್ಲಿರುವ ಮಾಧ್ಯಮದವರನ್ನು ಗುರುತಿಸಿ ಸಹಾಯಹಸ್ತನೀಡುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂಜಿಪಂ ಸದಸ್ಯ ಬಿ.ವಿ.ಮಹೇಶ್, ಬಿ.ಹೊಸರಾಯಪ್ಪ, ತಾಲೂಕು ಬಿಜೆಪಿ ಅಧ್ಯಕ್ಷನಾಗೇಶ್, ಎಂ.ಪಿ.ಶ್ರೀನಿವಾಸಗೌಡ, ಜಿಲ್ಲಾಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಪಿ.ಅಮರೇಶ್, ಎಂ.ಸಂಪಂಗಿರೆಡ್ಡಿ, ಶಶಿಕುಮಾರ್, ಹುಣಸನಹಳ್ಳಿ ವೆಂಕಟೇಶ್,ಕಾರಹಳ್ಳಿ ನಾರಾಯಣಸ್ವಾಮಿ, ಶಾಂತಿನಗರ ಮಂಜುನಾಥ್, ಚಿಕ್ಕವಲಗಮಾದಿಚೌಡಪ್ಪ, ದೇಶಿಹಳ್ಳಿ ಪ್ರಭಾಕರ್ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.